ಯೋಧರ ಶಿರಚ್ಛೇದವಾದ್ರೂ ಕಾಂಗ್ರೆಸ್‌ ಸರಕಾರ ಸುಮ್ಮನಿತ್ತು

Team Udayavani, May 13, 2019, 6:00 AM IST

ಶಿಮ್ಲಾದಲ್ಲಿ ರವಿವಾರ ಚುನಾವಣಾ ಪ್ರಚಾರ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ದೇಶದ ಭದ್ರತೆಯ ವಿಚಾರವನ್ನಿಟ್ಟುಕೊಂಡು ಹಿಂದಿನ ಸರಕಾರವನ್ನು ಟೀಕಿಸಿದ್ದಾರೆ.

ಪಾಕಿಸ್ಥಾನವು ಭಾರತದ ಐವರು ಯೋಧರ ಶಿರಚ್ಛೇದ ಮಾಡಿದಾಗ ಹಿಂದಿನ ಮನಮೋಹನ್‌ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಏನನ್ನೂ ಮಾಡಲಿಲ್ಲ. ಆದರೆ, ಮೋದಿ ಸರಕಾರದ ಅವಧಿಯಲ್ಲಿ ಪಾಕ್‌ನೊಳಕ್ಕೇ ನುಗ್ಗಿ ಬಾಲಾಕೋಟ್‌ನಲ್ಲಿ ದಾಳಿ ನಡೆಸಲಾಯಿತು.

ಪಾಕಿಸ್ಥಾನವು ನಮ್ಮತ್ತ ಬುಲೆಟ್‌ ದಾಳಿ ನಡೆಸಿದರೆ, ನಾವು ಅವರಿಗೆ ಶೆಲ್‌ನಿಂದ ಉತ್ತರ ಕೊಡುತ್ತೇವೆ ಎಂದಿದ್ದಾರೆ ಶಾ. ಇದೇ ವೇಳೆ, ಮತ್ತೆ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ, ಕಾಶ್ಮೀರಿಗರಿಗೆ ವಿಶೇಷ ಅಧಿಕಾರ ನೀಡಿರುವಂಥ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕುತ್ತೇವೆ ಎಂದೂ ಅವರು ಪುನರುಚ್ಚರಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ