ಬಿಜೆಪಿ ಪರ ಪ್ರಚಾರ ಗ್ರೇಟ್‌ ಖಲಿ ವಿರುದ್ಧ ದೂರು ಸಲ್ಲಿಸಿದ ಟಿಎಂಸಿ

ಪಶ್ಚಿಮ ಬಂಗಾಳದಲ್ಲಿ ದೊಡ್ಡ ಕಾಳಗ ಆರಂಭ

Team Udayavani, Apr 28, 2019, 12:11 PM IST

ಕೋಲ್ಕತಾ : ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ ಖ್ಯಾತ ಕುಸ್ತಿ ಪಟು ಗ್ರೇಟ್‌ ಖಲಿ ವಿರುದ್ದ ತೃಣಮೂಲ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಟಿಎಂಸಿ ಅಮೆರಿಕದಪ್ರಜೆಯಾಗಿರುವ ಖಲಿ ಇಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ವಿದೇಶಿಗನೊಬ್ಬ ಇಲ್ಲಿಯ ಮತದಾರರ ಮೇಲೆ ಪ್ರಭಾವ ಬೀರಬಾರದು. ಖಲಿ ಅವರನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂರು ನೀಡಲಾಗಿದೆ.

ಖಲಿ ಅವರು ಮೂಲತಃ ಭಾರತೀಯರಾಗಿದ್ದು ಮೂಲ ಹೆಸರು ದಿಲೀಪ್‌ ಸಿಂಗ್‌ ರಾಣಾ. ಪಶ್ಚಿಮ ಬಂಗಾಳದ ಜಾಧವ್‌ಪುರ್‌ ನಲ್ಲಿ ಬಿಜೆಪಿ ಅಭ್ಯರ್ಥಿ ಅನುಪಮ್‌ ಹಜ್ರಾ ಪರ ಪ್ರಚಾರ ನಡೆಸಿದ್ದರು.

ಹಲವು ಬಾಂಗ್ಲಾ ದೇಶ ಮೂಲದ ನಟರನ್ನು ಟಿಎಂಸಿ ಪ್ರಚಾರಕ್ಕೆ ಬಳಸಿಕೊಂಡ ಹೊರತಾಗಿಯೂ ಟಿಎಂಸಿ ಈ ದೂರು ಸಲ್ಲಿಸಿದೆಎಂದು ಬಿಜೆಪಿ ಕಿಡಿ ಕಾರಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ