ಸೈನಿಕರಿಗೆ ಸೇವಾ ಮತದಾರರ ಸೌಲಭ್ಯ

ಈ ಬಾರಿ 39,539 ಸೇವಾ ಮತದಾರರ ಹೆಸರು ನೋಂದಣಿ

Team Udayavani, Mar 28, 2019, 11:09 AM IST

soldiers

ಬೆಂಗಳೂರು: ಕೇಂದ್ರದ ಸೇನಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ “ಸೇವಾ ಮತದಾರರ’ ನೋಂದಣಿ ಹಾಗೂ ಮತದಾನ ಪ್ರಮಾಣ ಕಡಿಮೆ ಇದ್ದು, ಈ ಬಗ್ಗೆ ಸೇನೆಯ ಹಿರಿಯ ಅಧಿಕಾರಿಗಳು ಗಮನಹರಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಮನವಿ ಮಾಡಿದ್ದಾರೆ.

ವಾರ್ತಾಸೌಧದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರತಿಯೊಂದು ಮತಕ್ಕೆ ತನ್ನದೇ ಆದ ಮೌಲ್ಯವಿದೆ. ಆದ್ದರಿಂದ
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಾ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳುವುದರ ಜೊತೆಗೆ ಕಡ್ಡಾಯವಾಗಿ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಸೇನೆಯ ಹಿರಿಯ ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ ಎಂದರು.

2019ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಈವರೆಗೆ ಒಟ್ಟು 39, 539 ಸೇವಾ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸೇನೆಯಲ್ಲಿ ರಾಜ್ಯದ ಅಂದಾಜು 80 ಸಾವಿರಕ್ಕೂ ಹೆಚ್ಚು ಜನ ಇರಬಹುದು. ಅದೇ ರೀತಿ 2018ರ ವಿಧಾನಸಭೆ ಚುನಾವಣೆಗೆ ವೇಳೆ 28,622 ಸೇವಾ ಮತದಾರರು ನೋಂದಾಯಿಸಿದ್ದು, ಮತದಾನ ಮಾಡಿದವರು ಕೇವಲ 3,060 (ಶೇ.10.07) ಜನ ಮಾತ್ರ ಎಂದರು. ಹೀಗಾಗಿ ಎಲ್ಲರು ಮನತದಾನ ಮಾಡಲು ಪ್ರೇರೇಪಿಸಿದರು.

ಹೀಗಿದೆ ಮತದಾನದ ವಿಧಾನ
ಸೇವಾ ಮತದಾರರು ಮತದಾನ ಮಾಡಲು ಸಿ-ಡಾಕ್‌ ನೆರವಿನೊಂದಿಗೆ ಕೇಂದ್ರ ಚುನಾವಣಾ ಆಯೋಗವು “ಎಲೆಕ್ಟ್ರಾನಿಕ್‌ ಟ್ರಾನ್ಸ್‌ಮಿಟೆಡ್‌ ಪೋಸ್ಟಲ್‌ ಬ್ಯಾಲೆಟ್‌’ (ಇಟಿಪಿಬಿಎಸ್‌) ವ್ಯವಸ್ಥೆ ರೂಪಿಸಿದೆ. ಸೇವಾ ಮತದಾರರಾಗಿ ನೋಂದಾಯಿಸಿಕೊಂಡವರಿಗೆ ತಮ್ಮ ಕ್ಷೇತ್ರದ ಹೊರ ಭಾಗದಿಂದಲೂ ಮತದಾನ ಮಾಡಲು ಇದರಿಂದ ಅವಕಾಶ ವಾಗಲಿದೆ. ನೋಂದಣಿ ಮಾಡಿಕೊಂಡ ಸೇವಾ ಮತದಾರರ ಇಲೆಕ್ಟ್ರಾನಿಕ್‌ ಪೋಸ್ಟಲ್‌ ಬ್ಯಾಲೆಟ್‌ನ್ನು ಸಂಬಂಧಪಟ್ಟ ರೆಕಾರ್ಡ್‌ ಆμಸರ್‌ ಮತ್ತು ಯೂನಿಟ್‌ ಆμàಸರ್‌ಗೆ ಕಳಿಸಲಾಗುತ್ತದೆ. ಅವರು ಒಟಿಪಿ ಹಾಕಿ ಅದನ್ನು ಡೌನ್‌ಲೋಡ್‌ ಮಾಡಿ ಸಂಬಂಧಪಟ್ಟ ಸೇವಾ ಮತದಾರನಿಗೆ ಕೊಡಬೇಕು. ಬಳಿಕ ಲಕೋಟೆ ಮೂಲಕ ಚುನಾವಣಾಧಿಕಾರಿಗೆ ಕಳುಹಿಸಬೇಕು.

ಪ್ರಾಕ್ಸಿ ನೇಮಿಸಿ
ಸೇವಾ ಮತದಾರರು ಇಟಿಪಿಬಿಎಸ್‌ ಮೂಲಕ ಮತದಾನ ಮಾಡಬಹುದು. ಇದಲ್ಲದೇ ಅವರು “ಪ್ರಾಕ್ಸಿ’ಯನ್ನು ನೇಮಿಸಬಹುದು. ಅಂದರೆ, ತಮ್ಮ ಬದಲಿಗೆ ಸೇವಾ ಮತದಾರರು ತಮ್ಮ ಆಪ್ತರು, ಹೆಂಡತಿ, ತಂದೆ- ತಾಯಿಯನ್ನು ಬದಲಿ ಪ್ರತಿನಿಧಿ (ಪ್ರಾಕ್ಸಿ) ಎಂದು ಗುರುತಿಸಬೇಕು. ಆ ಬದಲಿ ಪ್ರತಿನಿಧಿ ವಕೀಲರಿಂದ ನೋಟರಿ ಮಾಡಿಸಿ ಕೊಂಡು ಮತಗಟ್ಟೆಗೆ ಹೋಗಿ ಸೇವಾ ಮತದಾರರ ಪರ ಮತ ಹಾಕಬಹುದು.

ಯಾರು ಸೇವಾ ಮತದಾರರು?
ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್‌ 20ರ ಉಪ ಸೆಕ್ಷನ್‌ (8)ರ ಅನ್ವಯ ಕೇಂದ್ರ ಶಸಸ್ತ್ರ ಪಡೆಗಳ ಸಿಬ್ಬಂದಿ, ಅಧಿಕಾರಿಗಳು. ಸೇನಾ ಕಾಯ್ದೆ 1950ರ ಸೆಕ್ಷನ್‌ 46 ಅನ್ವಯವಾಗುವ ಸೇನಾ ಸಿಬ್ಬಂದಿ. ರಾಜ್ಯದ ಹೊರ ಭಾಗಗಳಲ್ಲಿ ಪೊಲೀಸ್‌ ಶಸಸ್ತ್ರಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದವರು ಹಾಗೂ ಕೇಂದ್ರ ಸರ್ಕಾರದ ಸೇವೆ ಮೇರೆಗೆ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸೇವಾ ಮತದಾರರು ಎಂದು ಹೇಳಲಾಗುತ್ತದೆ.

ನೋಂದಣಿ ಹೇಗೆ: ಸೇವಾ ಮತದಾರರಾಗಿ ನೋಂದಾಯಿಸಿಕೊಳ್ಳಲು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಫಾರಂ-2ರಲ್ಲಿ ಸಶಸ್ತ್ರ ಪಡೆಗಳಲ್ಲಿ ಬೇರೆ ರಾಜ್ಯಗಳಲ್ಲಿ ಸೇವೆಯಲ್ಲಿರುವವರು ಫಾರಂ- 2ಎರಲ್ಲಿ, ವಿದೇಶಗಳಲ್ಲಿ ಕೇಂದ್ರದ ಸೇವೆಯಲ್ಲಿರುವವರು ಫಾರಂ-3 ಭರ್ತಿ ಮಾಡಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

ಓಟ್‌ ಹಾಕಿಲ್ಲ
32 ವರ್ಷದ ಸೇವಾವಧಿಯಲ್ಲಿ ಯಾವತ್ತೂ ಮತದಾನ ಮಾಡಿಲ್ಲ. ಚುನಾವಣೆಗಳ ಸಂದರ್ಭದಲ್ಲಿ ನಾವು ಚುನಾವಣಾ ಕರ್ತವ್ಯದ ಮೇಲೆ ಇರುತ್ತೇವೆ ಅಥವಾ ಬೇರೆ ಕರ್ತವ್ಯದಲ್ಲಿ ನಿಯೋಜಿತರಾಗಿರುತ್ತೇವೆ. ಸೇವಾ ಮತದಾರರ ವ್ಯವಸ್ಥೆ ಜಾರಿಗೆ ತಂದು ಚುನಾವಣಾ ಆಯೋಗ ನಮಗೂ ಅವಕಾಶಮಾಡಿ ಕೊಟ್ಟಿರುವುದು ಸಂತಸದ ಸಂಗತಿ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಸಿಆರ್‌ಪಿಎಫ್ಐ ಜಿ ಗಿರಿಪ್ರಸಾದ್‌ ಹೇಳಿದರು.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.