ವಾಯವ್ಯ ದೆಹಲಿಯಲ್ಲಿ ಯಾರ ಪರ ಒಲವು?

Team Udayavani, May 8, 2019, 5:55 AM IST

ನಾರ್ತ್‌ ವೆಸ್ಟ್‌ ದೆಹಲಿ ಅಥವಾ ವಾಯವ್ಯ ದೆಹಲಿಯ ಲೋಕಸಭಾ ಕ್ಷೇತ್ರದ ಹುರಿಯಾಳುಗಳಲ್ಲಿ ಭಾರಿ ಬದಲಾವಣೆಯಾಗಿದೆ. ಬಿಜೆಪಿಯ ದಲಿತ ಮುಖ ಎಂದು ಬಿಂಬಿತಗೊಂಡಿದ್ದ ಡಾ.ಉದಿತ್‌ ರಾಜ್‌ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಆಮ್‌ ಆದ್ಮಿ ಪಕ್ಷದ ವತಿಯಿಂದ ಗುಗನ್‌ ಸಿಂಗ್‌ ರಂಗಾ, ಕಾಂಗ್ರೆಸ್‌ನಿಂದ ರಾಜೇಶ್‌ ಲಿಲೋತಿಯಾ ಕಣದಲ್ಲಿ ಇದ್ದಾರೆ. 2014ರಲ್ಲಿ ಬಿಜೆಪಿಯ ಡಾ.ಉದಿತ್‌ ರಾಜ್‌ ಗೆದ್ದಿದ್ದರು. ಆಮ್‌ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ರೇಖಾ ಬಿದ್ಲಾನ್‌ ಸೋಲುಂಡಿದ್ದರು.

ಈ ಬಾರಿ ಬಿಜೆಪಿ ಪಂಜಾಬಿ ಗಾಯಕ ಹನ್ಸ್‌ ರಾಜ್‌ ಹನ್ಸ್‌ ಅವರನ್ನು ಕಣಕ್ಕೆ ಇಳಿಸಿದೆ. ಮಾಜಿ ಕ್ರಿಕೆಟಿಗ, ಪೂರ್ವ ದೆಹಲಿ ಕ್ಷೇತ್ರದ ಬಿಜೆಪಿ ಹುರಿಯಾಳು ಗೌತಮ್‌ ಗಂಭೀರ್‌ ವಿರುದ್ಧದ ಕೇಳಿ ಬಂದ ಆರೋಪದ ಮಾದರಿಯಲ್ಲಿ ಗಾಯಕನ ವಿರುದ್ಧವೂ ಆರೋಪಗಳು ಕೇಳಿ ಬಂದಿದೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ‘ಹನ್ಸ್‌ ರಾಜ್‌ ಕಾಂಗ್ರೆಸ್‌, ಶಿರೋಮಣಿ ಅಕಾಲಿ ದಳದಲ್ಲಿದ್ದವರು. ನಂತರ ಅವರು ಇಸ್ಲಾಂಗೆ ಮತಾಂತರವಾಗಿದ್ದಾರೆ’ ಎಂದು ಆರೋಪಿ ಸಿದ್ದಾರೆ. ಅದಕ್ಕೆ ಉತ್ತರಿಸಿರುವ ಹನ್ಸ್‌ ‘ಕೇಜ್ರಿವಾಲ್ ನಂಬುವಂತೆ ಸುಳ್ಳು ಹೇಳುತ್ತಾರೆ. ಮಾಧ್ಯಮಗಳೂ ಅದನ್ನು ಖಚಿತಪಡಿಸದೆ ಪ್ರಕಟಿಸುತ್ತವೆ. ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದರೆ ಹಲವಾರು ಸುನ್ನಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೆ’ ಎಂದಿದ್ದಾರೆ.

ಬಿಜೆಪಿ ನಾಯಕರಾಗಿದ್ದ ಗುಗನ್‌ ಸಿಂಗ್‌ ರಂಗಾ 2017ರಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಸೇರಿದ್ದರು. ಈ ಬಾರಿ ಅವರು ವಾಯವ್ಯ ದೆಹಲಿಯ ಹುರಿಯಾಳಾಗಿದ್ದಾರೆ. ನವದೆಹಲಿಯ ಪಟೇಲ್ನಗರ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್‌ ನಾಯಕ ರಾಜೇಶ್‌ ಲಿಲೋತಿಯಾ ಪಕ್ಷದ ಅಭ್ಯರ್ಥಿ. ಇತ್ತೀಚೆಗಷ್ಟೇ ಅವರು ದೆಹಲಿ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಇನ್ನು ಈ ಕ್ಷೇತ್ರದ ಬಗ್ಗೆ ಹೇಳುವುದಾದರೆ, 2008ರಲ್ಲಿ ಕ್ಷೇತ್ರಗಳ ಮರು ವಿಂಗಡಣೆ ಬಳಿಕ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ರಚನೆಯಾದ ಒಟ್ಟು ಏಳು ಕ್ಷೇತ್ರಗಳಲ್ಲಿ ಇದೂ ಒಂದು. ಪ್ರತಿ ಚದರ ಕಿಲೋಮೀಟರ್‌ ವ್ಯಾಪ್ತಿಗೆ 8,245 ಮಂದಿ ಜನರು ಈ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ಸುಗಮ ಸಂಚಾರ ವ್ಯವಸ್ಥೆ, ಯೋಗ್ಯವಾದ ಕುಡಿಯುವ ನೀರಿನ ಕೊರತೆ ಮತ್ತು ದೆಹಲಿ ಮೆಟ್ರೋದ 4ನೇ ಹಂತಕ್ಕಾಗಿ ಈ ಪ್ರದೇಶದ ಜನರು ಕಾಯುತ್ತಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕೂಡ ಈ ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಉಂಟಾಗುತ್ತಿರುವ ಸಮನ್ವಯದ ಸಮಸ್ಯೆ ಜನರಿಗೆ ಬಹುವಾಗಿ ಕಾಡುತ್ತಿದೆ. ಕಿರಾರಿ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಶಾಸಕ ಋತುರಾಜ್‌ ಝಾ ಪ್ರಕಾರ ‘ಉದಿತ್‌ ರಾಜ್‌ ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ದುಡಿದಿಲ್ಲ. ಸಂಚಾರ ದಟ್ಟಣೆಯಂಥ ಪ್ರಮುಖ ವಿಚಾರಗಳ ಪರಿಹಾರಕ್ಕೆ ಅವರು ಮನಸ್ಸು ಮಾಡಿಯೇ ಇಲ್ಲ. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವುದರ ಬಗ್ಗೆಯೇ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಕಳೆದ ವರ್ಷ ಮಂಗೋಲ್ಪುರಿಯಲ್ಲಿ ಸುಮಾರು 900 ಎಫ್ಐಆರ್‌ಗಳು ದಾಖಲಾಗಿವೆ. ಅದು ಅಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಹೇಗಿದೆ ಎನ್ನುವುದನ್ನು ತೋರಿಸುತ್ತದೆ.’

ಕೇಜ್ರಿವಾಲ್ ನೇತೃತ್ವದ ಸರ್ಕಾರ ಹಿಂದಿನ ಚುನಾವಣೆಯಲ್ಲಿ ವಾಗ್ಧಾನ ಮಾಡಿದ್ದಂತೆ ನಡೆದುಕೊಂಡಿದ್ದರೆ, ಇಂಥ ಸಮಸ್ಯೆಗಳು ಇರುತ್ತಿರಲಿಲ್ಲ ಎಂದು ಬಿಜೆಪಿ ನಾಯಕ, ಶಾಸಕ ವಿಜೇಂದರ್‌ ಗುಪ್ತಾ ಅಭಿಪ್ರಾಯಪಡುತ್ತಾರೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.17ರಷ್ಟು ದಲಿತರು, ಮುಸ್ಲಿಮರು ಶೇ.13ರಷ್ಟು ಇದ್ದಾರೆ.

ಒಟ್ಟು ಹತ್ತು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ನರೇಲಾ (ಆಪ್‌), ಬದ್ಲಿ (ಆಪ್‌), ರಿತಾಲಾ (ಆಪ್‌), ಬವಾನಾ (ಆಪ್‌), ಮುಂಡ್ಕಾ (ಆಪ್‌), ಕಿರಾರಿ (ಆಪ್‌), ಸುಲ್ತಾನ್‌ಪುರ್‌ ಮಜ್ರಾ (ಆಪ್‌), ನಂಗೋಲಿ ಜಾಟ್ (ಆಪ್‌), ಮಂಗೋಲಿ ಪುರಿ (ಆಪ್‌), ರೋಹಿಣಿ (ಬಿಜೆಪಿ). ಹತ್ತರ ಪೈಕಿ ಒಂಬತ್ತರಲ್ಲಿ ದೆಹಲಿಯ ಆಡಳಿತಾರೂಢ ಪಕ್ಷದ ಶಾಸಕರೇ ಇದ್ದಾರೆ. ಹೀಗಾಗಿ, ಆಪ್‌ಗೆ ಕೊಂಚ ಧನಾತ್ಮಕವಾಗಿ ಇರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಹದಿನೈದು ವರ್ಷಗಳ ಕಾಲ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದರೂ, ಕೆಲವೊಂದು ಪ್ರದೇಶಗಳಿಗೆ ಮೂಲ ಸೌಕರ್ಯಗಳು ಸಿಕ್ಕಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಡೀ ದೇಶದ ದೃಷ್ಟಿಯೀಗ ವಿಶ್ವನಾಥನ ಸನ್ನಿಧಾನ ಕ್ಷೇತ್ರ ವಾರಾಣಸಿಯ ಮೇಲೆ ನೆಟ್ಟಿದೆ. ಈ ಬಾರಿ ಪ್ರಧಾನಿ ಮೋದಿಯವರೇ ಘರ್‌ ಘರ್‌ನಲ್ಲೂ ಸದ್ದು ಮಾಡುತ್ತಾರಾ ಅಥವಾ...

  • ಬಿಹಾರದ ಪಾಟ್ನಾ ಸಾಹಿಬ್‌ ಕ್ಷೇತ್ರದ ಮೇಲೀಗ ದೇಶದ ದೃಷ್ಟಿ ನೆಟ್ಟಿದೆ. ಅತ್ಯಂತ ಹೈಪ್ರೊಫೈಲ್‌ ಕಣವೆಂದೇ ಈ ಕ್ಷೇತ್ರವನ್ನು ಕರೆಯಲಾಗುತ್ತಿದೆ. ಬಿಜೆಪಿ ತೊರೆದು...

  • ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. ರಾಜ ವಂಶಸ್ಥರಾದ ಸಿಂಧಿಯಾ ಕುಟುಂಬ ಈ ಕ್ಷೇತ್ರದಲ್ಲಿ ಎಂದಿಗೂ ಸೋಲು ಕಂಡಿಲ್ಲ. ಕಾಂಗ್ರೆಸ್‌ನಲ್ಲಿ...

  • ದೆಹಲಿಯ ಅತಿದೊಡ್ಡ ಲೋಕಸಭಾ ಕ್ಷೇತ್ರವಾಗಿರುವ ಈಶಾನ್ಯ ದೆಹಲಿಯಲ್ಲಿ ಈ ಬಾರಿ ಮಾಜಿ ಸಿಎಂ, ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌, ಹಾಲಿ ಸಂಸದ, ದೆಹಲಿ ಬಿಜೆಪಿಯ...

  • ದೇಶಾದ್ಯಂತ 2008ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ವೇಳೆ, ಛಪ್ರಾ ಲೋಕಸಭಾ ಕ್ಷೇತ್ರವನ್ನು ಪುನರ್‌ವಿಂಗಡಿಸಿದ ಸಂದರ್ಭದಲ್ಲಿ ಸರಣ್‌ ಎಂಬ ಹೊಸ ಕ್ಷೇತ್ರ ರಚಿಸಲಾಯಿತು....

ಹೊಸ ಸೇರ್ಪಡೆ

  • ಒಬ್ಬ ವ್ಯಕ್ತಿ ದೈಹಿಕವಾಗಿ ಆರೋಗ್ಯವಂತನಾಗಿದ್ದರೆ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ಸಾಧ್ಯತೆಗಳಿಲ್ಲ ಎಂದು ಹೇಳುವಂತಿಲ್ಲ.ಕೌಂಟುಬಿಕ, ಸಾಮಾಜಿಕ ಮತ್ತು...

  • ಪ್ರತಿಯೊಬ್ಬರಿಗೂ ತಾನು ಚೆನ್ನಾಗಿ ಕಾಣಬೇಕೆಂಬ ಆಸೆ ಇದ್ದೇ ಇದೆ, ಈಗಿನ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ಮನೆ ಮದ್ದು ಮುಖಕ್ಕೆ ತುಂಬಾ ಉತ್ತಮ. ಮುಖದಲ್ಲಿನ...

  • ಇತ್ತೀಚಿನ ಫಾಸ್ಟ್‌ ಫ‌ುಡ್‌ ಕಾಲಘಟ್ಟದಲ್ಲಿ ದೇಹಕ್ಕೆ ಬೇಕಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ತೀರ ವಿರಳವೆಂಬಂತಾಗಿದೆ. ಮುಂದೆ ಬರಬಹುದಾದ ಸಮಸ್ಯೆಗಳಿಗೆ ಆಹ್ವಾನ...

  • ವ್ಯಾಯಾಮದ ಕಸರತ್ತಿಗೆ ಫೋಮ್‌ ರೋಲರ್‌ ಸಾಧನ ಹೆಚ್ಚು ಪ್ರಸಿದ್ಧವಾಗಿದೆ. ಮೂರರಿಂದ ನಾಲ್ಕು ಇಂಚುಗಳ ಅಗಲ, 36 ಇಂಚು ಉದ್ದದ ದಿಂಬಿನಂತೆ ಕಾಣುವ ಇದು ಸ್ನಾಯುಗಳಿಗೆ...

  • ಹಳ್ಳಿಮನೆಗಳಲ್ಲಿ ಮನೆ ಮದ್ದಾಗಿ ಕಾಮ ಕಸ್ತೂರಿಯನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಆದರೆ ಅನೇಕ ಮಂದಿಗೆ ಇದರಲ್ಲಿರುವ ಆರೋಗ್ಯಕರ ಅಂಶಗಳು ತಿಳಿದಿಲ್ಲ. ಹೇರಳವಾದ...