Udayavni Special

ಓಟಿನ ಮೂಲಕ ಅಮ್ಮನ ವಿರೋಧಿಗಳಿಗೆ ಏಟು ಕೊಡಿ

ಅಂಬರೀಶ್‌ ಅಭಿಮಾನಿಗಳಿಗೆ ಯಶ್‌, ದರ್ಶನ್‌ ಮನವಿ

Team Udayavani, Apr 4, 2019, 6:06 AM IST

190403kpn38

ಮಂಡ್ಯ: ಮಂಡ್ಯದಲ್ಲಿ ಚುನಾವಣಾ ಪ್ರಚಾರದ ಕಾವು ಜೋರಾಗಿದ್ದು, ಬುಧವಾರವೂ ಸುಮಲತಾ ಪರ ನಟರಾದ ಯಶ್‌ ಮತ್ತು ದರ್ಶನ್‌ ಪ್ರಚಾರ ಕಾರ್ಯ ನಡೆಸಿದರು. ಇದೇ ವೇಳೆ, ಅನಿತಾ ಕುಮಾರಸ್ವಾಮಿಯವರು ಪುತ್ರ ನಿಖೀಲ್‌ ಪರವಾಗಿ ಮತ ಯಾಚಿಸಿದರು.

ಮಂಡ್ಯ, ಮದ್ದೂರು ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿದ ಸುಮಲತಾ ಸಿಎಂ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದರು. ಅಂಬರೀಶ್‌ಗೆ ಅಭಿಮಾನಿಗಳು ನೀಡಿರುವ ಬೆಳ್ಳಿ ಗದೆ, ಚಿನ್ನದ ಕಿರೀಟಗಳನ್ನು ಮಾರಾಟ ಮಾಡಿ ಆ ಹಣದಿಂದ ಸುಮಲತಾ ಆಭರಣ ಮಾಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನಮ್ಮದು ದಾನಶೂರ ಕರ್ಣನ ಮನೆ. ಅಂಬರೀಶ್‌ಗೆ ಕೊಟ್ಟ ಗದೆ, ಚಿನ್ನದ ಕಿರೀಟಗಳನ್ನು ಮಾರಿಕೊಳ್ಳುವಷ್ಟು ದರಿದ್ರ ನಮಗೆ ಬಂದಿಲ್ಲ. ಅಂಬರೀಶ್‌ ಬದುಕಿದ್ದಾಗಲೇ ಅವುಗಳನ್ನು ಶ್ರೀ ಆಂಜನೇಯಸ್ವಾಮಿ, ಶ್ರೀ ಶಿರಡಿ ಸಾಯಿಬಾಬ ಮಂದಿರಗಳಿಗೆ ದಾನವಾಗಿ ನೀಡಿದ್ದಾರೆಎಂದರು.

ಸುಮಲತಾಗೆ 10 ಸಾವಿರ ರೂ. ದೇಣಿಗೆ:
ಮದ್ದೂರಿನ ಶಿವಪುರದಲ್ಲಿ ರೋಡ್‌ ಶೋ ಮೂಲಕ ಮತಯಾಚನೆ ಮಾಡುವ ವೇಳೆ ಸ್ಥಳೀಯ ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರು, ಪುರಸಭೆ ಸದಸ್ಯರು ಸೇರಿ 10 ಸಾವಿರ ರೂ.ಗಳ ದೇಣಿಗೆ ನೀಡಿ ಅಂಬರೀಶ್‌ ಹಾಗೂ ಸುಮಲತಾ ಪರ ಘೋಷಣೆ ಕೂಗಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ರಾಕಿ ಬಾಯ್‌ ಪ್ರಚಾರ:
ಈ ಮಧ್ಯೆ, ಪಾಂಡವಪುರ, ಶ್ರೀರಂಗಪಟ್ಟಣ ಸುತ್ತಮುತ್ತ ಯಶ್‌ ಪ್ರಚಾರ ನಡೆಸಿ, ಅಮ್ಮ ಸುಮಲತಾ ನಮ್ಮ ಜಿಲ್ಲೆಯ ಸೊಸೆ ಎಂದು ಹೆಮ್ಮೆಯಿಂದ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ ಸಾಥ್‌ ನೀಡಿದರು. ಗಂಜಾಂನಲ್ಲಿ ಮಹಿಳೆಯೊಬ್ಬರು ಯಶ್‌ ಇದ್ದ ವಾಹನಕ್ಕೆ ಆರತಿ ಬೆಳಗಿದರೆ, ಯುವಕರು ಮೈಸೂರು ಪೇಟ ತೊಡಿಸಿದರು.

ಅಮ್ಮ ಸುಮಲತಾಗೆ ಜಯಮಾಲೆ ತೊಡಿಸಿ:
ಕೆ.ಆರ್‌.ಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಅಮ್ಮ ಸುಮಲತಾಗೆ ಮತ ನೀಡಿ ಜಯಮಾಲೆ ತೊಡಿಸುವ ಮೂಲಕ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದರು. ದರ್ಶನ್‌ ರೋಡ್‌ ಶೋನಲ್ಲಿ ಹಲವು ಸ್ಥಳೀಯ ಕಾಂಗ್ರೆಸ್‌ ಮುಖಂಡರು ಪಾಲ್ಗೊಂಡರು.

ಜೋಡೆತ್ತಿನ ಗಾಡಿ ಓಡಿಸಿದ ನಿಖೀಲ್‌:
ಇದೇ ವೇಳೆ, ಮಂಡ್ಯ ತಾಲೂಕಿನ ವಿವಿಧೆಡೆ ನಿಖೀಲ್‌ ಕುಮಾರಸ್ವಾಮಿಯವರು ಬೈಕ್‌ ಹಾಗೂ ಜೋಡೆತ್ತಿನ ಗಾಡಿ ಓಡಿಸುವ ಮೂಲಕ ಮತದಾರರ ಗಮನ ಸೆಳೆದರು. ಸಚಿವ ಪುಟ್ಟರಾಜು, ಸ್ಥಳೀಯ ಜೆಡಿಎಸ್‌ ಮುಖಂಡರು ಸಾಥ್‌ ನೀಡಿದರು. ಹೊಳಲುವಿನಲ್ಲಿ ಪ್ರಚಾರ ನಡೆಸುತ್ತಿದ್ದ ನಿಖೀಲ್‌ಗೆ ಅಭಿಮಾನಿಯೊಬ್ಬ ಮುತ್ತು ಕೊಟ್ಟಿದ್ದು ವಿಶೇಷವಾಗಿತ್ತು. ಮದ್ದೂರು ತಾಲೂಕಿನ ವಿವಿಧೆಡೆ ಪುತ್ರನ ಪರ ಪ್ರಚಾರ ನಡೆಸಿದ ಅನಿತಾ ಕುಮಾರಸ್ವಾಮಿ, ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿಗೆ ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿರುವಂತೆ ನಿಖೀಲ್‌ಗ‌ೂ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.

ಟಾಪ್ ನ್ಯೂಸ್

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

kavita

ಮತಕ್ಕಾಗಿ ಲಂಚ: ಟಿಆರ್‌ಎಸ್‌ ಸಂಸದೆಗೆ 6 ತಿಂಗಳು ಜೈಲು

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

2020 Summer Olympics,

ಟೋಕಿಯೊ ಒಲಿಂಪಿಕ್ಸ್‌ : ಹದಿನಾರರ ಸುತ್ತಿಗೆ ಏರಿದ ಬಾಕ್ಸಿಂಗ್‌ ತಾರೆ ಮೇರಿ ಕೋಮ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಚ್ಚಿಹೋದ ಕೆರೆಗೆ ಮರು ಜೀವ ನೀಡಿದ ಮನರೇಗಾ ಯೋಜನೆ

ಮುಚ್ಚಿಹೋದ ಕೆರೆಗೆ ಮರು ಜೀವ ನೀಡಿದ ಮನರೇಗಾ ಯೋಜನೆ

ವಿದ್ಯುತ್‌ ಬೆಳಕಿನಲ್ಲಿ‌ ಹಂಪಿ ಸೊಬಗು ಕಣ್ತುಂಬಿಕೊಳ್ಳುವ ಹಂಪಿ‌‌ಬೈ ನೈಟ್ ಯೋಜನೆಗೆ ಮರುಜೀವ

ವಿದ್ಯುತ್‌ ಬೆಳಕಿನಲ್ಲಿ‌ ಹಂಪಿ ಸೊಬಗು ಕಣ್ತುಂಬಿಕೊಳ್ಳುವ ಹಂಪಿ‌‌ಬೈ ನೈಟ್ ಯೋಜನೆಗೆ ಮರುಜೀವ

ಸಿಎಂ ಪರ ಹೇಳಿಕೆ; ರಾಗ ಬದಲಿಸಿದ ನಾಯಕರು?

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ; ರಾಗ ಬದಲಿಸಿದ ನಾಯಕರು?

sfgrtert

ಬಹುಮತ ಬರದಿದ್ರೂ ಸರ್ಕಾರ ರಚಿಸಲು ಯಡಿಯೂರಪ್ಪನವರಿಂದ ಮಾತ್ರ ಸಾಧ್ಯ: ಶಾಸಕ ಅರಗ ಜ್ಞಾನೇಂದ್ರ

ನಾಳೆ (ಜು.26) ಕೆಆರ್‌ಎಸ್ ಡ್ಯಾಂಗೆ ದೃಷ್ಟಿ ನಿವಾರಣೆ ಪೂಜೆ

ನಾಳೆ (ಜು.26) ಕೆಆರ್‌ಎಸ್ ಡ್ಯಾಂಗೆ ದೃಷ್ಟಿ ನಿವಾರಣೆ ಪೂಜೆ

MUST WATCH

udayavani youtube

ಹೀಗೆ ಮಾಡಿದರೆ ಪರಿಸರಕ್ಕೆ ಅನುಕೂಲ, DIAPER ತ್ಯಾಜ್ಯ !

udayavani youtube

ಕಾರು ಅಪಘಾತ: ಬಿಗ್ ಬಾಸ್ ಮಾಜಿ ಸ್ಪರ್ಧಿ ಯಶಿಕಾ ಗಂಭೀರ ಗಾಯ

udayavani youtube

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರ ಗೆದ್ದ ಭಾರತದ ಪ್ರಿಯಾ ಮಲಿಕ್

udayavani youtube

ಒಂದೇ ದಿನದಲ್ಲಿ ತುಂಗಭದ್ರಾ ಜಲಾಶಯಕ್ಕೆ ಬಂತು 12 ಟಿಎಂಸಿ ನೀರು

udayavani youtube

ಮೂಳೂರು: ಮೂರು ಮನೆಗಳಲ್ಲಿ ದರೋಡೆ : ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳವು

ಹೊಸ ಸೇರ್ಪಡೆ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

kavita

ಮತಕ್ಕಾಗಿ ಲಂಚ: ಟಿಆರ್‌ಎಸ್‌ ಸಂಸದೆಗೆ 6 ತಿಂಗಳು ಜೈಲು

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.