ನಮ್ಮ ಆಡಳಿತವನ್ನು ನಾವೇ ರೂಪಿಸೋಣ

ನಾವು ಯಾಕೆ ಮತ ಹಾಕಬೇಕು

Team Udayavani, Mar 27, 2019, 6:30 AM IST

“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತ್ತಿದ್ದಾರೆ.

ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.

ಅಭಿವೃದ್ಧಿ ಬೇಕಿದ್ದರೆ ಮತ ಹಾಕಲೇಬೇಕು
ಮತದಾನ ಮಾಡುವುದು ನಮ್ಮ ಮೂಲಭೂತ ಹಕ್ಕಾಗಿದೆ. ಅಭಿವೃದ್ಧಿ ಯಾರಿಗೆ ಬೇಡ ಹೇಳಿ, ಎಲ್ಲರೂ ಅಭಿವೃದ್ಧಿಯನ್ನು ಬಯಸುತ್ತಾರೆ. ಈ ಅಭಿವೃದ್ಧಿ ಸಾಧ್ಯ ಇರುವುದು ಉತ್ತಮ ನಾಯಕತ್ವದಿಂದ. ಯಾಕೆಂದರೆ, ನಾವು ಆರಿಸಿದಂತಹ ನಾಯಕ ಅಭಿವೃದ್ಧಿಯನ್ನು ತರಲು ಸಾಧ್ಯ. ಹೇಗೆಂದರೆ, ಮಂತ್ರಿ ಮಂಡಲದಲ್ಲಿ ಉಳಿದ ಸದಸ್ಯರ ಸಲಹೆ, ಮಾಹಿತಿಯಿಂದ. ಆದುದರಿಂದ ಮತದಾನ ಮಾಡುವುದು ಬಹಳ ಮುಖ್ಯವಾಗಿರುತ್ತದೆ.
– ಸ್ವಾತಿ ಭಟ್‌ , ವೈಕುಂಠ ಬಾಳಿಗ ಕಾನೂನು ವಿಶ್ವವಿದ್ಯಾಲಯ ಉಡುಪಿ

ದೇಶದ ಅಭಿವೃದ್ಧಿಗಾಗಿ ನನ್ನ ಮತ
ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಮತದಾನವೂ ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಆದ್ಯ ಕರ್ತವ್ಯ. ಚುನಾವಣೆ ಬಂದಾಗ ಮಾತ್ರ ಜನರ ನೆನಪಾಗುವಂತಹ ಅಭ್ಯರ್ಥಿಯನ್ನು ಬಿಟ್ಟು, ಸಮಾಜಕ್ಕೆ ಒಳಿತನ್ನು ಮಾಡುವವರಿಗೆ ನನ್ನ ಮತ. ಪ್ರತಿಯೊಬ್ಬ ಪ್ರಜೆಯೂ ಈ ರೀತಿ ಯೋಚಿಸಿದಾಗ ಮಾತ್ರ ಉತ್ತಮ ನಾಯಕ ಗೆಲ್ಲಲು ಸಾಧ್ಯ.
– ಸಾಧನಾ, ವೈಕುಂಠ ಬಾಳಿಗ ಕಾನೂನು ವಿಶ್ವವಿದ್ಯಾಲಯ ಉಡುಪಿ

ಮತದಾನದಿಂದ ದೇಶದ ಚಿತ್ರಣವೇ ಬದಲು
ನಮ್ಮೆಲ್ಲರ ಒಂದೊಂದು ಮತವೂ ಕೂಡ ದೇಶವೊಂದು ಅಭಿವೃದ್ಧಿಯತ್ತ ಸಾಗಲು ನಾವು ಪರೋಕ್ಷವಾಗಿ ನೀಡುವ ಸಹಕಾರವಾಗಿದೆ.ಒಂದು ವೇಳೆ ನಾವು ಮತವನ್ನು ಚಲಾಯಿಸದಿದ್ದರೆ ಅಥವಾ ಹಲವು ಕಾರಣಗಳಿಂದ ಬಹಿಷ್ಕರಿಸಿದರೆ ಆಗ ದೇಶದ ಚಿತ್ರಣವೇ ಬದಲಾಗುವ ಪರಿಸ್ಥಿತಿ ತಲೆದೂರುತ್ತದೆ.ಹಾಗಾಗಿ ಪ್ರತಿಯೊಬ್ಬ ಮತದಾರರು ಕಡ್ಡಾಯ ವಾಗಿ ಮತ್ತು ಒಳ್ಳೆಯ ಅಭ್ಯರ್ಥಿಗಳಿಗೆ ತಮ್ಮ ಮತವನ್ನು ಚಲಾಯಿಸುವುದರ ಮೂಲಕ ದೇಶದ ಪ್ರಗತಿಯನ್ನ ನಾವು ಕಾಣಬಹುದು.
– ಮಂಜುನಾಥ ಬಿ.ವಿ., ಸ.ಪ್ರ.ದ. ಕಾಲೇಜು ಹೆಬ್ರಿ

ಯಾವುದೇ ಬೇಧವಿಲ್ಲದೆ ಮತದಾನದಲ್ಲಿ ಪಾಲ್ಗೊಳ್ಳಿ
ನಾವು ಕಡ್ಡಾಯ ಮತದಾನದಲ್ಲಿ ಪಾಲ್ಗೊಳಬೇಕು. ಪ್ರಜೆಗಳಿಂದ ಪ್ರಜೆಗಳಿಗಾಗಿ ರೂಪಿತವಾಗಿರುವ ಸಂವಿಧಾನದಲ್ಲಿ ನಾವೆಲ್ಲರಲೂ ಸಮಾನರು. ಸಂವಿಧಾನಬದ್ಧ ಅಧಿಕಾರ ಪಡೆಯಲು ನಾವು ಚುನಾವಣೆಯಲ್ಲಿ ಭಾಗಿಯಾಗಬೇಕಾಗಿದೆ. ಜಾತಿ, ಧರ್ಮ ಭೇದ ವಿಲ್ಲದೇ ನಾವು ಈ ಮಹಾ ಕಾರ್ಯದಲ್ಲಿ ಭಾಗಿಯಾಗು ವುದರಿಂದ ದೇಶದ ಅಭಿವೃದ್ಧಿ ಯಲ್ಲಿ ಕೊಡುಗೆ ನೀಡಿದಂತಾಗುತ್ತದೆ.
– ನವ್ಯಶ್ರೀ, ವೈಕುಂಠ ಬಾಳಿಗ ಕಾನೂನು ವಿಶ್ವವಿದ್ಯಾಲಯ ಉಡುಪಿ

ಉತ್ತಮ ಅಭ್ಯರ್ಥಿಗಾಗಿ ಮತ ಹಾಕೋಣ
ಮತದಾನ ಮಾಡದೆ ಸುಮ್ಮನಿದ್ದರೆ ರಾಜಕೀಯ ವ್ಯವಸ್ಥೆಯÇÉಾಗಲಿ ಪ್ರಜಾತಂತ್ರದÇÉಾಗುವ ತೊಂದರೆಗಳಿಗೆ ಮತದಾರರೆ ನೇರ ಹೊಣೆಯಾಗಬಲ್ಲರು. ಪ್ರಜೆಗಳಿಂದಲೇ ಚುನಾಯಿತ ಗೊಂಡ ಸರಕಾರವು ಕೇವಲ ಪ್ರತ್ಯೇಕ ಸಮುದಾಯಕ್ಕೆ ಅಥವಾ ಪ್ರತ್ಯೇಕ ಊರಿನ ಅಭಿವೃದ್ಧಿಯ ಕಾರ್ಯಕ್ಕೆ ಒಳಪಡದೆ, ಇಡೀ ದೇಶಕ್ಕೆ ಸಂಬಂಧಪಟ್ಟಂತ ಅಭಿವೃದ್ಧಿಯ ಕಾರ್ಯವನ್ನು ನಡೆಸಬೇಕು.
– ವಿಜಯ್‌ ಕೆರಾಡಿ, ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು

ನನ್ನ ಮತ ಭವ್ಯವಾದ ದೇಶ ಕಟ್ಟಲು
ನಮ್ಮ ಮತದಿಂದ ಒಂದು ಭವ್ಯವಾದ ದೇಶ ಕಟ್ಟುವ ಹಾಗೆ ಆಗಬೇಕು. ದೇಶದ ಆರ್ಥಿಕ, ಸಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ವ್ಯಾವಹಾರಿಕ, ಕೃಷಿ ಮೊದಲಾದ ಚಟುವಟಿಕೆಗಳಿಗೆ ಉತ್ತಮ ಬೆಂಬಲವೂ ದೊರೆಯುವಂತೆ ಮಾಡುವ ನಾಯಕರನ್ನು ನಾವು ಸರಕಾರಕ್ಕೆ ನೀಡಬೇಕು. ಜನ ಸ್ನೇಹಿ ನಾಯಕದ್ದಾಗ ಮಾತ್ರ ಜನ ಪರ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ನಡೆಯಲು ಸಾಧ್ಯ.
– ಶ್ರೀಕರ ಆಚಾರ್ಯ, ಕಾರ್ಕಳ, ಸಿಎಸ್‌ಇ

ನಮ್ಮ ಆಡಳಿತವನ್ನು ನಾವೇ ರೂಪಿಸೋಣ
ನಾವು ಮತದಾನ ಮಾಡುವುದರ ಮೂಲಕ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು. ಆ ಮೂಲಕ ಸಮಾಜವನ್ನು ಬದಲಾಯಿಸಲು ಸಾಧ್ಯ. ಮತದಾನ ಮಾಡದೇ ಇದ್ದರೆ ಗ್ರಾಮ ಮತ್ತು ರಾಷ್ಟ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಮತದಾನ ಮತದಾರರಾದ ನಮ್ಮ ಜವಾಬ್ದಾರಿಯಾಗಿದ್ದು ಇದರಿಂದ ನಮ್ಮ ಆಡಳಿತವನ್ನು ನಾವೇ ರೂಪಿಸಲು ಸಾಧ್ಯ.
– ಸೌರವ್‌ ಶೆಟ್ಟಿ , ಎಂ.ಐ.ಟಿ. ಕಾಲೇಜು ಮೂಡ್ಲಕಟ್ಟೆ ಕುಂದಾಪುರ

ಮಹಾ ಕಾರ್ಯದಲ್ಲಿ ಭಾಗಿಯಾಗಿ
ಮತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶಕ್ಕೆ ಬೇಕಾದ ನಾಯಕನನ್ನು ಆರಿಸುವುದು ನಮ್ಮೆಲ್ಲೆ ಆದ್ಯ ಕರ್ತವ್ಯವಾಗಿದೆ. ಇದಕ್ಕಾಗಿ ನಾವು ಈ ಮಹಾ ಕಾರ್ಯದಲ್ಲಿ ಭಾಗಿಯಾಗಬೇಕಾಗಿದೆ. ಸಂವಿಧಾನದ ಆಶಯವೇ ಜನರಿಗೆ ಬೇಕಾದ ಆಡಳಿತವನ್ನು ಜನರೇ ನಿಧ‌ìರಿಸಿಕೊಳ್ಳುವುದು ಇದಕ್ಕಾಗಿ ನಾವೆಲ್ಲರು ಕಾರ್ಯ ಪ್ರವೃತ್ತರಾಗಬೇಕಾಗಿದೆ.ತಪ್ಪದೇ ಚುನಾವಣೆಯಲ್ಲಿ ಭಾಗಿಯಾಗೋಣ. ಈ ಮೂಲಕ ಸಂವಿಧಾನದ ಆಶಯ ಈಡೇರಿಸೋಣ.
– ಅಶ್ವಿ‌ನಿ ಕೆ., ಸ.ಪ್ರ. ಕಾಲೇಜು, ಹೆಬ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ