ಕರ್ನಾಟಕಕ್ಕೆ ಎರಡು ಬೆಳ್ಳಿ, ಮೂರು ಕಂಚು
Team Udayavani, Feb 12, 2019, 1:15 AM IST
ಬೆಂಗಳೂರು: ನಾಗ್ಪುರದಲ್ಲಿ ನಡೆದ ಏರೋಬಿಕ್ ಜಿಮ್ನಾಸ್ಟಿಕ್ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ತಂಡದ ಸ್ಪರ್ಧಿಗಳು ಮಿಂಚಿನ ಪ್ರದರ್ಶನ ನೀಡಿದ್ದಾರೆ. ಒಟ್ಟಾರೆ 2 ಬೆಳ್ಳಿ ಹಾಗೂ 3 ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
ಎಜಿ2 17 ವರ್ಷ ವಯೋಮಿತಿಯೊಳಗಿನ ವೈಯಕ್ತಿಕ ಮಹಿಳಾ ವಿಭಾಗದಲ್ಲಿ ಸಹರ್ಷಾ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. 17 ವರ್ಷ ವಯೋಮಿತಿಯೊಳಗಿನ ಎಜಿ2 ಟ್ರಿಯೊ ವಿಭಾಗದಲ್ಲಿ ಇಶಾ, ಯೂನಿಕಾ ಮತ್ತು ದಿವ್ಯಶ್ರೀ ಒಳಗೊಂಡ ತಂಡ ಬೆಳ್ಳಿ ಪದಕ ಪಡೆಯಿತು. 11 ವರ್ಷ ವಯೋಮಿತಿಯೊಳಗಿನ ಟ್ರಿಯೊ ನ್ಯಾಷನಲ್ ಡೆವಲಪ್ಮೆಂಟ್ ವಿಭಾಗದಲ್ಲಿ ಸೋನಿಕಾ, ಮಾಹಿ ಮತ್ತು ರಿಷ್ಯಾ ಒಳಗೊಂಡ ತಂಡ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡಿತು. 11 ವರ್ಷ ವಯೋಮಿತಿಯೊಳಗಿನ ಮಿಶ್ರ ತಂಡ ನ್ಯಾಷನಲ್ ಡೆವಲಪ್ಮೆಂಟ್ ವಿಭಾಗದಲ್ಲಿ ಸೋನಿಕಾ, ಶ್ರೇಷ್u ಜೋಡಿ ಕೂಡ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಇನ್ನು ಹಿರಿಯರ ಏರೋಡ್ಯಾನ್ಸ್ ವಿಭಾಗದಲ್ಲಿ ಸ್ನೇಹಾ, ವಿಭಾ, ವಿಶಿಷ್ಟ, ಇಶಾ, ಯೂನಿಕಾ, ಖುಷಿ, ದಿವ್ಯ ಶ್ರೀ ಮತ್ತು ಸಹರ್ಷ ಒಳಗೊಂಡ ತಂಡ ಕಂಚಿನ ಪದಕ ಗೆದ್ದಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Athletics: ಕಿರಿಯರ ಏಷ್ಯನ್ ಆ್ಯತ್ಲೆಟಿಕ್ಸ್ ಜಾವೆಲಿನ್ನಲ್ಲಿ ದೀಪಾಂಶುಗೆ ಬಂಗಾರ
Gukesh: ಚಾಂಪಿಯನ್ ಗುಕೇಶ್ಗೆ ಭವ್ಯ ಸ್ವಾಗತ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್