ಅಪ್ಪನ ನೆನಪು: ಮಗಳು ಬೈಕ್ ಕಲಿತಿದ್ದು ಕಂಡು ಹೆಮ್ಮೆಯಿಂದ ಮೀಸೆ ತಿರುವಿದ್ದರು ಅಪ್ಪ
Team Udayavani, Jun 21, 2020, 1:12 PM IST
ಪ್ರೀತಿಯ ಶಂಭು ಸರ್,
ಹಾಯ್ ಪಪ್ಪಾ ಏನು ಶಾಕ್ ಆಯ್ತಾ? ನನ್ನೇ ಹೆಸರಿಟ್ಟು ಕರೆಯುತ್ತಿದ್ದೀಯಾ ಅಂತ ಬೈಕೋಬೇಡಿ. ನಾನು ಕರಿಯೋದೆ ಹಂಗೆ. ಪಪ್ಪಾ ನಿಮಗೆ ನೆನಪಿದೆಯಾ ಆವತ್ತು ನಾನು ಫೋನ್ ಮಾಡಿ ಎಲ್ಲಿದಿರಿ ಇನ್ನೂ ಮನೆಗೆ ಬಂದಿಲ್ಲಾ ಎಂದು ಕೇಳದಾಗ ಟ್ರೈನ್ ನಲ್ಲಿ ಇದ್ದೀನಿ, ಬರ್ತೀನಿ ಎಂದು ಹೇಳಿ ಫೋನ್ ಕಟ್ ಮಾಡಿದ್ದಿರಿ. ಆಗ ನಾನು ಹೋಂಡಾ ಬೈಕ್ ನಲ್ಲಿ ನಿಮಗೆ ಸ್ಟೇಷನ್ ಗೆ ಕರೆದುಕೊಂಡು ಬಂದಿದ್ದು ನೋಡಿ ಫುಲ್ ಶಾಕ್ ಆಗಿದ್ರಿ. ಯಾಕೆಂದರೆ ನಾನು ಬೈಕ್ ಕಲಿತ್ತಿದ್ದು ನಿಮಗೆ ಹೇಳಿರಲಿಲ್ಲಾ. ನಿಮಗೆ ಅಚ್ಚರಿಯ ಜೊತಗೆ ಫುಲ್ ಖುಷ್ ಆಗಿದ್ರಿ.
ನಾವಿಬ್ಬರೂ ಬೈಕ್ ನಲ್ಲಿ ಹೋಗುತ್ತಿದ್ರೆ ಊರು ಮಂದಿ ಕಣ್ಣು ನಮ್ಮ ಮೇಲೆ ಇತ್ತು. ಆಗ ನಿಮ್ಮ ಗೆಳೆಯ ಅದೇ ಪಪ್ಪಾ ಶಾಣು ಅಂಕಲ್ ಭೇಟಿಯಾಗಿ ಏನಪ್ಪಾ ಶಂಭು ಮಗಳು ಗಾಡಿ ಕಲತ್ತಾಳ್ ಏನು ಅಂತ್ ಕೇಳಿದಕ್ಕೆ, ನೀವು ನನ್ನ ಮಗಳು ಗಾಡಿ ಓಡುಸ್ತಾಳೆ. ಆಕೆಯ ಹಾಗೆ ಯಾವ ಹುಡುಗನೂ ಗಾಡಿ ಓಡಸಲ್ಲಾ ಎಂದು ನೀವು ಮೀಸೆ ತಿರುವಿದ್ದು, ನಂಗೆ ಇನ್ನೂ ನೆನಪಿದೆ. ಇವಾಗ ಹೇಂಗೂ ನೌಕರಿ ಮಾಡಲ್ತಿನಿ ಇನ್ನೂ ಸ್ವಲ್ಪ ದಿನ ಕಾಯಿರಿ, ನಾನು ಕಾರು ತೊಗೊಂಡು ಸ್ಟೇಷನ್ ಗೆ ಕರಿಯಕ್ಕ್ ಬರ್ತೀನಿ !
ಇಂತಿ ನಿನ್ನ ಹಿರಿಮಗಳು ಭಾಗ್ಯ ಏಸ್ ಬುಳ್ಳಾ