Udayavni Special

ಗಣೇಶೋತ್ಸವ ಸಂಭ್ರಮ : ನಿರಂತರ ಮಳೆಗೆ ನಿರಾಸೆ ಮೂಡಿಸಿದ ಹೂವಿನ ವ್ಯಾಪಾರ


Team Udayavani, Sep 2, 2019, 6:00 AM IST

UDUPI-CHOWTHI-2

ಕಾರ್ಕಳ/ ಕುಂದಾಪುರ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಹೂವು ಖರೀದಿಸುವವರ ಸಂಖ್ಯೆ ಕಡಿಮೆ ಯಾಗಿದ್ದು, ಹೂವಿನ ವ್ಯಾಪಾರಿಗಳ ಮುಖದಲ್ಲಿ ನಿರಾಶೆಯ ಭಾವ ಮೂಡಿದೆ.

ನಗರಕ್ಕೆ ಪ್ರತಿವರ್ಷ ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ, ಪರ್ಯಾಯ ಪ್ರಯುಕ್ತ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಹೂವಿನ ವ್ಯಾಪಾರಿಗಳು ಆಗಮಿಸುತ್ತಾರೆ. ವ್ಯಾಪಾರದಲ್ಲಿ ಉತ್ತಮ ಲಾಭಗಳಿಸಿ ನಗು ಮುಖದಿಂದ ಹಿಂದಿರುತ್ತಾರೆ. ಆದರೆ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ವ್ಯಾಪಾರಿಗಳು ಬರಿ ಗೈಯಲ್ಲಿ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೂ ಮಾರಾಟ ಕುಂಠಿತ
ನಗರದಲ್ಲಿ ಇದೇ ಮೊದಲ ಬಾರಿ ಹೂವಿನ ಮಾರಾಟ ಕುಂಠಿತವಾಗಿದೆ. ಮಳೆಯಿಂದಾಗಿ ಜನರು ಬೀದಿಗೆ ಬಂದು ಹೂವುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ತುಂತುರು ಮಳೆಯಿಂದಾಗಿ ಹೂವಿನ ಬಣ್ಣ ಹಾಳಾಗುತ್ತಿದೆ.

ಜನಸಂಖ್ಯೆ ವಿರಳ
ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ರವಿವಾರ ಹಾಗೂ ಶನಿವಾರ ಸುರಿದ ಮಳೆ ನೀರೆರೆದಿದೆ! ಮನೆ ಬಿಟ್ಟು ಹೊರ ಬರಲು ಆಗದಂತೆ ಮಳೆ ಸುರಿದಿದೆ. ಇದರಿಂದಾಗಿ ತರಕಾರಿ, ಹೂವು ಮತ್ತು ಹಣ್ಣು ಹಂಪಲು ಮಾರುಕಟ್ಟೆಯಲ್ಲಿ ಜನರ ಸಂಖ್ಯೆ ವಿರಳವಾಗಿತ್ತು. ದರದಲ್ಲಿ ಏರಿಕೆಯಾಗ ದಿದ್ದರೂ, ಹಬ್ಬಕ್ಕಾಗಿ ಹೆಚ್ಚುವರಿ ಖರೀದಿ ಮಾಡಿ ತಂದಿಟ್ಟುಕೊಂಡ ಅಂಗಡಿಯವರು ಮಳೆ ದಿಸೆಯಿಂದ ಗ್ರಾಹಕರಿಗಾಗಿ ಕಾಯಬೇಕಾದ ಅನಿವಾರ್ಯತೆ ಇತ್ತು. ಕೆಲವೊಂದು ಸಂಘ-ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಅಲಂಕಾರಕ್ಕೆ ಬಿರುಸಿನ ತಯಾರಿಯಲ್ಲಿ ತೊಡಗಿದ್ದರು.

ಕಬ್ಬು, ಕದಳಿ ಬಾಳೆ ಹಣ್ಣು, ಎಲೆ-ಅಡಿಕೆ, ಸೀಯಾಳ, ಕಡುಬು ಮಾಡುವ ಎಲೆಯಿಂದ ತಯಾರಿಸಿದ ಕೊಟ್ಟೆಗೆ ಹೆಚ್ಚಿನ ಬೇಡಿಕೆ ಕಂಡು ಬಂತು. ದರದಲ್ಲೂ ಹಬ್ಬದ ಹಿನ್ನೆಲೆಯಲ್ಲಿ ತುಸು ಹೆಚ್ಚಳವಾಗಿದೆ.

ಮಲ್ಲಿಗೆ ಅಟ್ಟೆಗೆ 600 ರೂ., ಸೇವಂತಿಗೆ ಮಾರಿಗೆ100 ರೂ., ಕಾಕಡ ಮಲ್ಲಿಗೆ ಮಾರಿಗೆ 100 ರೂ., ಜಿನಿಯಾ ಮಾರಿಗೆ 100 ರೂ. ದರದಲ್ಲಿ ಮಾರಾಟವಾಗಿದೆ. ಗಣೇಶ ವಿಗ್ರಹಗಳಿಗೆ ಅಂತಿಮ ಟಚ್‌ ನೀಡಲಾಗಿದೆ.

ಲಾಭಕ್ಕಿಂತ ನಷ್ಟವೇ ಅಧಿಕ!
ಕಳೆದ 8ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವ್ಯಾಪಾರ ಕುಂಠಿತವಾಗಿದೆ. ಮಳೆಯಿಂದಾಗಿ ಜನರು ಹೂವಿನ ಖರೀದಿಗೆ ಮುಂದೆ ಬರುತ್ತಿಲ್ಲ. ಸಾವಿರಾರು ರೂ. ವ್ಯಯಿಸಿ ಖರೀದಿ ಮಾಡಿದ ಹೂ ಮಾರಾಟವಾಗದೆ ಹಾಗೇ ಉಳಿದುಕೊಂಡಿದೆ. ಸೋಮವಾರ ಬೆಳಗ್ಗೆ 12 ಗಂಟೆಯ ಒಳಗೆ ಮಾರಾಟವಾಗದೆ ಹೋದರೆ ಹೂವಿನ ನಷ್ಟ ಕೈಯಿಂದ ಭರಿಸಬೇಕಾಗುತ್ತದೆ. ಉಳಿದ ಹೂವು ಊರಿಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆದ್ದ‌ರಿಂದ ಯಾವುದಾದರೂ ದೇವಸ್ಥಾನಕ್ಕೆ ನೀಡಿ ಹೋಗಬೇಕಾಗುತ್ತದೆ ಎಂದು ಚಿಕ್ಕಮಗಳೂರು ವ್ಯಾಪಾರಿ ಶಿವನ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

dinesh-gu

ಭಾಗವತ್‌ರ ಹೇಳಿಕೆ ಅರ್ಚಕರ ಬದುಕಿಗೆ ಕೊಳ್ಳಿ‌ ಇಡಲಿದೆ : ದಿನೇಶ್ ಗುಂಡೂರಾವ್

vghggy

ಇನ್ಮುಂದೆ ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ !

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

1-aa

ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳದ ಕಾರಣ ನೀವು ದಂಡ ಕಟ್ಟಬೇಕು: ಪದ್ಮಶ್ರೀ ಮಂಜಮ್ಮ ಜೋಗತಿ

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್: ಬಸ್‌ಗಳಿಗೆ ಬೇಡಿಕೆ ಕಡಿಮೆ; ಹಬ್ಬಕ್ಕೆ ಊರಿಗೆ ಬರುವವರ ಸಂಖ್ಯೆ ಶೇ. 80ರಷ್ಟು ಇಳಿಮುಖ

ಕೋವಿಡ್: ಬಸ್‌ಗಳಿಗೆ ಬೇಡಿಕೆ ಕಡಿಮೆ; ಹಬ್ಬಕ್ಕೆ ಊರಿಗೆ ಬರುವವರ ಸಂಖ್ಯೆ ಶೇ. 80ರಷ್ಟು ಇಳಿಮುಖ

ಹೊಸ ತೇಜಿಗೆ ನಾಂದಿಯಾಗಲಿ ವಿಘ್ನ ವಿನಾಶಕನ ಚತುರ್ಥಿ

ಹೊಸ ತೇಜಿಗೆ ನಾಂದಿಯಾಗಲಿ ವಿಘ್ನ ವಿನಾಶಕನ ಚತುರ್ಥಿ

ಕರಾವಳಿಯಾದ್ಯಂತ ಇಂದು ಭಕ್ತಿ ಸಡಗರದ ಗಣೇಶ ಚತುರ್ಥಿ

ಕರಾವಳಿಯಾದ್ಯಂತ ಇಂದು ಭಕ್ತಿ ಸಡಗರದ ಗಣೇಶ ಚತುರ್ಥಿ

ಮಂಗಳೂರು: ಭಕ್ತಿ ಸಂಭ್ರಮದ ಆಚರಣೆಗೆ ಸಿದ್ಧತೆ

ಗಣೇಶೋತ್ಸವ : ಮಂಗಳೂರು; ಭಕ್ತಿ ಸಂಭ್ರಮದ ಆಚರಣೆಗೆ ಸಿದ್ಧತೆ

ಗಣೇಶೋತ್ಸವ: ಹೂವು, ಕಬ್ಬು ಖರೀದಿ; ಪುತ್ತೂರು/ಸುಳ್ಯ ತಾಲೂಕುಗಳಲ್ಲಿ ಮಾರುಕಟ್ಟೆ ಚೇತರಿಕೆ

ಗಣೇಶೋತ್ಸವ: ಹೂವು, ಕಬ್ಬು ಖರೀದಿ; ಪುತ್ತೂರು/ಸುಳ್ಯ ತಾಲೂಕುಗಳಲ್ಲಿ ಮಾರುಕಟ್ಟೆ ಚೇತರಿಕೆ

MUST WATCH

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಹೊಸ ಸೇರ್ಪಡೆ

jgjuyuy

3ನೇ ಬಾರಿ ಇಡಿ ವಿಚಾರಣೆಗೆ ಬಾರದ ಜಾಕ್ವೆಲಿನ್‌! 

shivamogga news

ಸಿದ್ದು ಅಲ್ಪಸಂಖ್ಯಾತರಿಗೆ ಉತ್ತರ ನೀಡಲಿ: ಎಚ್ಡಿಕೆ

hampi news

ಹಂಪಿಗೆ ಹರಿದು ಬಂದ ಜನಸಾಗರ!

ಕಟಪಾಡಿ: ಶಾಸಕ ಲಾಲಾಜಿ ಮೆಂಡನ್ ರಿಂದ ಸ್ವಚ್ಛತಾ ಕಾರ್ಯಕ್ರಮಕ್ಕೆ  ಹಸಿರು ನಿಶಾನೆ

ಕಟಪಾಡಿ: ಶಾಸಕ ಲಾಲಾಜಿ ಮೆಂಡನ್ ರಿಂದ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ

chitradurga news

ಮುರುಘಾ ಶ್ರೀಗಳಿಂದ ಶೂನ್ಯ ಪೀಠಾರೋಹಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.