- Saturday 07 Dec 2019
ಗಾಳಿ, ನೀರು ಜೀವರಕ್ಷಕಗಳು: ಶ್ರೀಪಡ್ರೆ
ಪಡ್ರೆ: ಜಲ ಸಮೃದ್ಧಿ ಮಾಹಿತಿ ಶಿಬಿರ
Team Udayavani, Jun 20, 2019, 6:03 AM IST
ಪೆರ್ಲ: ಜಲ ಸಂಪನ್ಮೂಲಗಳು ಸಮೃದ್ಧಿಯಿಂದ ಇದ್ದರೆ ನಾಡು,ಕೃಷಿ,ಜೀವ ಜಾಲಗಳು ಸಂತೃಪ್ತವಾಗಿ ಇರುವುದು.ಗಾಳಿ ಮತ್ತು ನೀರು ಜೀವರಕ್ಷಗಳು ಎಂದು ಪರಿಸರ ಪ್ರೇಮಿ, ಜಲ ತಜ್ಞ ಶ್ರೀಪಡ್ರೆ ಅವರು ಹೇಳಿದರು.
ಅವರು ಸ್ವರ್ಗದಲ್ಲಿ ಜೂ.16ರಂದು ನಡೆದ ಜಲ ಕಾರ್ಯಕರ್ತರ ಮಾಹಿತಿ ಶಿಬಿರ ನಮ್ಮ ನಡಿಗೆ ತೋಡಿನೆಡೆಗೆ,ನೀರ ನೆಮ್ಮದಿಯತ್ತ ಪಡ್ರೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಹಳ್ಳಿ ಪ್ರದೇಶದ ಹೆಚ್ಚಿನ ಜನರು ಕೃಷಿ,ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು.ಇವೆರಡು ವ್ಯವಸಾಯಕ್ಕೆ ನೀರು ಪ್ರಧಾನ.ಈ ಮೊದಲು ಎಲ್ಲಾ ಋತುಗಳಲ್ಲೂ ಧಾರಾಳ ನೀರು ಲಭ್ಯವಾಗುತ್ತಿದ್ದ ಪ್ರದೇಶಗಳಲ್ಲಿ ಕೂಡ ನೀರಿನ ಬರ ತಲೆದೋರಿದೆ. ಇದಕ್ಕೆ ಪ್ರಧಾನ ಕಾರಣ ನೀರಿನ ಅತೀ ಬಳಕೆ.ಆದರೆ ನೀರನ್ನು ಇಂಗಿಸುವ ಕಾರ್ಯ ಇಲ್ಲದಿರುವುದು ನೀರಿನ ಕ್ಷಾಮಕ್ಕೆ ಪ್ರಮುಖ ಕಾರಣ.ಮಳೆ ನೀರು ಇಂಗದೆ ಸರಾಗ ಹರಿಯುವ ಕಾರಣ ಮಣ್ಣಿನ ಸತ್ವ ,ಸಾವಯವ ನಾಶ,ನೀರನ್ನು ಇಂಗಿಸುವ ಗುಣ ಕಳೆದುಕೊಳ್ಳುತ್ತಿದೆ.ಕಾಸರಗೋಡಿನಲ್ಲಿ ಸಾಮಾನ್ಯ ಒಂದು ಚ.ಮೀ.ವಿಸ್ತೀರ್ಣದ ಪ್ರದೇಶದಲ್ಲಿ 3,500 ಲೀ.ಮಳೆ ಸುರಿಯುತ್ತಿದೆ.10 ಸೆಂಟ್ಸ್ ಸ್ಥಳದಲ್ಲಿ 14ಲಕ್ಷ ಲೀ.ಮಳೆಯಾಗುತ್ತಿದೆ.ಸಣ್ಣ ಕುಟುಂಬದ ಒಂದು ವರ್ಷದ ಗೃಹ ಬಳಕೆಗೆ 2.5ಲಕ್ಷ ಲೀ.ನೀರು ಸಾಕಾಗುತ್ತದೆ ಎಂದು ಅಂಕಿ ಅಂಶದೊಂದಿಗೆ ತಿಳಿಸಿದರು.
ಭೂಮಿಗೆ ಬೀಳುವ ನೀರನ್ನು ಸಮರ್ಥವಾಗಿ ಹಿಡಿದಿರಿಸುವ ಪ್ರಯತ್ನ ಮಾಡಿದ್ದಲ್ಲಿ ನೀರಿನ ಕ್ಷಾಮ ಎದುರಾಗದು ಎಂದು ನುಡಿದರು.
ಜೂ.23: ಮಾಹಿತಿ ಕಾರ್ಯಾಗಾರ
ಶಿಬಿರದಲ್ಲಿ ಸ್ಲೆಡ್ ಶೋ,ಪ್ರಶ್ನೋತ್ತರ ಸಂವಾದಗಳು ನಡೆದವು.ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಭಟ್.ಕೆವೈ,ಶ್ರೀಧರ ಭಟ್,ಜಗದೀಶ್ ಕುತ್ತಾಜೆ,ಶ್ರೀನಿವಾಸ ಸ್ವರ್ಗ ಸಂವಾದದಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡರು. ಜೂ.23ರಂದು ಜಲಮೂಲಗಳ ನೀರಿನ ಮಟ್ಟ ಹೆಚ್ಚಿಸಲು ಸ್ಥಳ ಪರಿಶೀಲನೆ,ನೀರಿಂಗಿಸುವ ಸಾಧ್ಯತೆಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಲಿದೆ.
ಈ ವಿಭಾಗದಿಂದ ಇನ್ನಷ್ಟು
-
ಕುಂಬಳೆ : ಕೇರಳ ಮತ್ತು ಕರ್ನಾಟಕದ ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ದಿನನಿತ್ಯ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಆಶ್ರಯಿಸುತ್ತಿರುವ...
-
ಕಾಸರಗೋಡು: ತಿರುವನಂತ ಪುರದ ಕಿಳಮನ್ನೂರ್ನಲ್ಲಿ ಹೂತಿದ್ದ ರಾಜ ಮುದ್ರೆಯುಳ್ಳ 2,600 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಆರು ಕೋಟಿ ರೂ. ಮೊತ್ತದ ಕೇರಳ ಲಾಟರಿ ಬಂಪರ್...
-
ಮಂಗಳೂರು: ಈರುಳ್ಳಿ ಬೆಲೆ ನಿಯಂತ್ರಿಸಲು ಒತ್ತಾಯಿಸಿ ಗುರುವಾರದಂದು ಬಂದರಿನ ಕಾರ್ಮಿಕರ ಕಟ್ಟೆಯಲ್ಲಿ ಮಂಗಳೂರಿನ ಬಂದರು ಶ್ರಮಿಕರ ಸಂಘದ ವತಿಯಿಂದ ನೇಣು ಹಗ್ಗ...
-
ಕಾಸರಗೋಡು: ಬಹು ಭಾಷಾ ಸಂಗಮ ಭೂಮಿಯಾದ ಗಡಿನಾಡು ಕಾಸರಗೋಡಿನ ಮೂಲ ಪರಂಪರೆ ಯಾದ ಕನ್ನಡ-ತುಳು ಭಾಷೆ ಗಳ ಸಮೃದ್ಧ ನಾಡು ನುಡಿಯ ಸೇವೆ ಗಳಿಂದ ಶ್ರೀಮಂತಗೊಂಡಿದೆ. ಆದರೆ...
-
ಪೆರ್ಲ: ಜಲ ಸಂರಕ್ಷಣೆಗಾಗಿ ಅವಿರತ ದುಡಿಯುವ ನೀರ ನೆಮ್ಮದಿ ಯತ್ತ ಪಡ್ರೆ ಜಲಯೋಧರ ತಂಡದಿಂದ ಕಳೆದ ಬೇಸಗೆಯಲ್ಲಿ ಬತ್ತಿ ಬರಡಾಗಿದ್ದ ಪಡ್ರೆ ಪ್ರದೇಶದ ತೋಡುಗಳ ಪುನರುದ್ಧಾರ,...
ಹೊಸ ಸೇರ್ಪಡೆ
-
ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಕಾಣಿಸಿಕೊಂಡಿದ್ದ ಪ್ರವಾಹ ಹಿನ್ನೆಲೆಯಲ್ಲಿ ಈ ಬಾರಿ ಶೇ.30 ರಷ್ಟು ಕಬ್ಬು ಇಳುವರಿ ಕುಸಿತ ಕಂಡಿದೆ ಎಂದು ಸಕ್ಕರೆ ಸಚಿವ...
-
ಕೋಲ್ಕತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂಪರ್ಕಿಸಿ ಮಾತನಾಡುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್...
-
ಬೆಂಗಳೂರು: ಕನ್ನಡದ ಜನಪ್ರಿಯ ಲಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮ ನಿರೀಕ್ಷೆಗಿಂತ ಚೆನ್ನಾಗಿ ಮೂಡಿಬರುತ್ತಿದೆ. ಈಗಾಗಲೇ 50 ಎಪಿಸೋಡ್ಗಳನ್ನು ಪೂರೈಸಿದೆ....
-
ವಿಟ್ಲ: ಕಟ್ಟಡ ಕೆಲಸ ಮಾಡುತಿದ್ದ ಕಾರ್ಮಿಕರ ಮೇಲೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿಗೆ ಸಿಲುಕಿ ಸಾವನ್ನಪ್ಪಿದ್ದು ಓರ್ವ ಕಾರ್ಮಿಕ ಗಂಭೀರ ಗಾಯಗೊಂಡ...
-
ಮಂಗಳೂರು : ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾವನ್ನು ಸರ್ಕಾರ ವಶಕ್ಕೆ ಪಡೆದಿದೆ ಎನ್ನುವ ವದಂತಿಯ ಕುರಿತು ಸ್ಪಷ್ಟನೆ ನೀಡಿರುವ ದರ್ಗಾದ ನೂತನ ಆಡಳಿತಾಧಿಕಾರಿ...