- Friday 13 Dec 2019
ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಇಲ್ಲವೇ?
ಪೆರಡಾಲ ಕೊರಗ ಕಾಲನಿಯಲ್ಲಿ ನೀರಿಲ್ಲ
Team Udayavani, May 22, 2019, 6:10 AM IST
ಬದಿಯಡ್ಕ: ಧರೆ ಹೊತ್ತಿ ಉರಿಯುವಂತೆ ಭಾಸವಾಗುವ ಸುಡುಬಿಸಿಲಿನ ಬೇಗೆಯಲಿ ಭೂಜಲವೆಲ್ಲ ಬತ್ತಿಹೋಗಿ ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಭುಗಿಲೆದ್ದಿದೆ. ಪೇಟೆ ಪಟ್ಟಣಗಳಲ್ಲದೆ ಹಳ್ಳಿಗಳಲ್ಲೂ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಬದಿಯಡ್ಕ ಪೆರಡಾಲ ಕೊರಗ ಕಾಲನಿಯು ಇದಕ್ಕೆ ಹೊರತಾಗಿಲ್ಲ. ಇಲ್ಲಿನ ನಿವಾಸಿಗಳು ಒಂದು ಕೊಡ ನೀರಿಗಾಗಿ ಅಲೆದಾಡುವಂತಾಗಿದೆ.
ಪಂಚಾಯತ್ನಾದ್ಯಂತ ನೀರು ಸರಬರಾಜು ಮಾಡುವ ಮೂಲಕ ಜನರ ಸಮಸ್ಯೆಯನ್ನು ಒಂದಷ್ಟು ಕಡಿಮೆಗೊಳಿಸುವ ಪ್ರಯತ್ನವನ್ನು ಪಂಚಾಯತ್ ಕೈಗೊಂಡಿದೆಯಾದರೂ ಕಾಲನಿಗೆ ಇದುವರೆಗೂ ನೀರು ತಲುಪದಿ ರುವುದು ಆತಂಕಕ್ಕೀಡು ಮಾಡಿದೆ.
40 ಕುಟುಂಬಗಳಲ್ಲಿ 150ರಷ್ಟು ಮಂದಿ ವಾಸಿಸುತ್ತಿದ್ದು ಏಕ ಅಧ್ಯಾಪಕ ಶಾಲೆ ಹಾಗೂ ಅಂಗನವಾಡಿ ಈ ಕಾಲನಿಯಲ್ಲಿದೆ. ಕುಡಿಯುವ ನೀರಿಗಾಗಿ ಕೊಳವೆ ಬಾವಿಯಿಂದ ಟ್ಯಾಂಕ್ಗೆ ಪಂಪ್ ಮೂಲಕ ನೀರು ಹಾಯಿಸಲಾಗುತ್ತದೆ.
ಅಲ್ಲದೇ ಒಂದು ಬಾವಿಯೂ ಇದೆ. ಆದರೆ ಈ ವರ್ಷ ಬೇಸಗೆಯ ಬೇಗೆಯಲ್ಲಿ ನೀರು ಸಂಪೂರ್ಣ ಬತ್ತಿಹೋಗಿದೆ. ಹಲವು ವರ್ಷಗಳಿಂದ ಈ ಬಾವಿಯ ಹೂಳೆತ್ತದ ಕಾರಣ ನೀರು ಬತ್ತಿದ್ದು ಬಾವಿ ಸ್ವತ್ಛಗೊಳಿಸಿದಲ್ಲಿ ಅಗತ್ಯದ ನೀರು ಸಂಗ್ರಹವಾಗುವ ಸಾಧ್ಯತೆ ಇದೆ. ಆದರೆ ಈ ಸಂಬಂಧವಾಗಿ ಅಧಿಕಾರಿಗಳು ಇದು ವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪ್ರಾಥಮಿಕ ಅಗತ್ಯಗಳಿಗೂ ಕೂಡ ದೂರದಿಂದ ನೀರು ತರಬೇಕಾದ ಪರಿಸ್ಥಿತಿ. ನೀರಿನ ûಾಮ ತೀವ್ರಗೊಂಡ ಕಾರಣ ನೆರೆಮನೆಗಳಿಂದಲೂ ನೀರು ಸಿಗದಂತಾಗಿದೆ.
ಮಳೆಗಾಲ ಪ್ರಾರಂಭವಾದರೆ ಸಾಂಕ್ರಾ ಮಿಕ ರೋಗಗಳ ಗೂಡಾಗುವ ಈ ಕೋಲನಿಯಲ್ಲಿ ಕಳೆದ ಮಳೆಗಾಲದಲ್ಲಿ ಡೆಂಗ್ಯೂ ಜ್ವರ ಬಾಧಿಸಿ ಒಬ್ಬರು ಮೃತಪಟ್ಟಿದ್ದರು. 10ರಷ್ಟು ಮಂದಿ ಚಿಕಿತ್ಸೆ ಗೊಳಗಾಗಿದ್ದರು. ಆದರೂ ಈ ವರ್ಷವೂ ಆರೋಗ್ಯ ಇಲಾಖೆಯ ಮುಂಜಾಗ್ರತಾ ಕ್ರಮಗಳು ಈ ಕಾಲನಿಯಲ್ಲಿ ನಡೆಯ ಲಿಲ್ಲ ಎಂದು ಕಾಲನಿ ನಿವಾಸಿಗಳು ಹೇಳುತ್ತಿದ್ದಾರೆ.
ಹತ್ತು ಹಲವು ಯೋಜನೆಗಳನ್ನು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಪ್ರೊಮೋಟರ್ಗಳನ್ನು ಸರಕಾರದಿಂದ ನೇಮಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳೂ ಇತ್ತ ಗಮನ ಹರಿಸದಿರು ವುದು ಕಾಲನಿ ನಿವಾಸಿಗಳನ್ನು ಮತ್ತೂ ಸಂಕಷ್ಟಕ್ಕೀಡು ಮಾಡಿದೆ. ಆದರೆ ಅವರೂ ಪೆರಡಾಲ ಕಾಲನಿಯೆಡೆ ತೋರುವ ನಿರ್ಲಕ್ಷ್ಯ ಒಂದು ದುರಂತವೇ ಸರಿ.
ಪಂಚಾಯತ್ನಿಂದ ವಿತರಿಸುವ ನೀರು ಇಲ್ಲಿಗೂ ತಲುಪಿಸಬೇಕೆಂದು ಕೋಲನಿ ನಿವಾಸಿಗಳು ಮನವಿ ಮಾಡಿದ್ದಾರೆ. ಅಂಗೆ„ ಅಗಲದ ಜಾಗ ಸ್ವತ್ಛಗೊಳಿಸಿ ಪಂಚಾಯತ್ಗೊಳಪಟ್ಟ ಎಲ್ಲ ಪ್ರದೇಶಗಳೂ ಸ್ವತ್ಛಗೊಳಿಸಲಾಯಿತು ಎನ್ನುವಂತೆ ಸುಲಭ ಸಾಧ್ಯವಾದ ಪ್ರದೇಶದ ಜನರಿಗೆ ಮಾತ್ರ ನೀರು ಸರಬರಾಜು ಮಾಡಿ ಒಳಪ್ರದೇಶದ ಹಾಗೂ ಕಾಲನಿ ನಿವಾಸಿಗಳ ಪಾಲಿಗೆ ಅನ್ಯಾಯವಾಗುವಂತೆ ಮಾಡುವ ವ್ಯವಸ್ಥೆ ಇನ್ನಾದರೂ ಕೊನೆಯಾಗಲಿ.
ಕೊಳವೆ ಬಾವಿ ಬೇಕು
ಬದಿಯಡ್ಕ ಪಂಚಾಯತ್ನಲ್ಲೇ ಅತ್ಯಧಿಕ ಜನಸಂಖ್ಯೆಯುಳ್ಳ ಕಾಲನಿಯಾಗಿದೆ ಪೆರಡಾಲ. ಇದ್ದ ಒಂದು ಬಾವಿಯಾನ್ನಾದರೂ ಹೂಳೆತ್ತಿ ಸ್ವತ್ಛ ಗೊಳಿಸಿದ್ದರೆ ನಮಗೆ ನೀರಿನ ಅಭಾವ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತಿತ್ತು.
ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಗಮನಹರಿಸಲಿಲ್ಲ. ಕಾಲನಿಗೆ ಕನಿಷ್ಠ ಎರಡು ಬಾವಿ ಅಥವಾ ಕೊಳವೆ ಬಾವಿಯಾದರೂ ಅಗತ್ಯವಿದೆ .
-ವಿಮಲಾ ಕೊರಗ ಕಾಲನಿ ನಿವಾಸಿ
ಶೀಘ್ರ ಪರಿಹಾರ
ಬದಿಯಡ್ಕ ಕೊರಗ ಕಾಲನಿಯಲ್ಲಿ ನೀರಿನ ಕೊರತೆಯಿರುವುದಾಗಿ ಗಮನಕ್ಕೆ ಬಂದಿರಲಿಲ್ಲ. ಆದಷ್ಟು ಬೇಗ ಕಾಲನಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಿ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು.
-ಕೆ.ಎನ್. ಕೃಷ್ಣ ಭಟ್, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷರು.
– ಅಖೀಲೇಶ್ ನಗುಮುಗಂ
ಈ ವಿಭಾಗದಿಂದ ಇನ್ನಷ್ಟು
-
ಕಾಸರಗೋಡು: ಮಹಿಳೆಯೊಬ್ಬರು ತನ್ನ ಆರು ವರ್ಷದ ಮಗುವನ್ನು ಮರೆತು ಬಸ್ಸಿನಲ್ಲೇ ಬಿಟ್ಟು ಹೋದ ಘಟನೆ ನಗರದಲ್ಲಿ ಬುಧವಾರ ನಡೆದಿದೆ. ಬಸ್ ಹೊಸ ಬಸ್ ನಿಲ್ದಾಣಕ್ಕೆ...
-
ಕಾಸರಗೋಡು: ಒಂದಿಂಚೂ ಬಂಜರು ಭೂಮಿಯಿಲ್ಲ. ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆಗೆ ಪ್ರತ್ಯೇಕ ಘಟಕವಿದೆ. ಪಂಚಾಯತ್ನಲ್ಲೇ ಉತ್ಪಾದಿಸಿದ ಬ್ರ್ಯಾಂಡೆಡ್ ಉತ್ಪನ್ನಗಳು...
-
ಮಡಿಕೇರಿ: ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ವಿಪರೀತವಾಗಿದ್ದು, ಕಾಡಾನೆ ಹಾವಳಿಯಿಂದಾಗಿ ಮಾನವ ಪ್ರಾಣ ಹಾನಿ, ಬೆಳೆ ಹಾನಿ ಉಂಟಾಗುತ್ತಿದ್ದು, ಜನರು ಭಯ ಭೀತಿಯಿಂದ...
-
ಕಾಸರಗೋಡು : ಈಗ ದಿನಾ ಅತ್ಯಾಚಾರ, ಲೈಂಗಿಕ ಕಿರುಕುಳ, ಹಿಂಸೆ ಇವುಗಳದ್ದೇ ಸುದ್ದಿ. ದೇಶದ ಮೂಲೆ ಮೂಲೆಯಲ್ಲೂ ಲೈಂಗಿಕ ಕಿರುಕುಳ ಸುದ್ದಿಯಾಗುತ್ತಿರುವಂತೆ ಕೇರಳದಲ್ಲೂ...
-
ಸೋಮವಾರಪೇಟೆ : ಉಪ ಚುನಾವಣೆ ಫಲಿತಾಂಶದಿಂದ ರಾಜ್ಯ ಬಿಜೆಪಿ ಸರ್ಕಾರ ಸುಭದ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿರುವ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮುಂದಿನ ದಿನಗಳಲ್ಲಿ...
ಹೊಸ ಸೇರ್ಪಡೆ
-
ಕೊರಟಗೆರೆ: ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಸಂಕಲ್ಪದಂತೆ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಯಂತಿ ಅಂಗವಾಗಿ ಆಯೋಜಿಸಿರುವ ರಥಯಾತ್ರೆಗೆ ಪಟ್ಟಣದಲ್ಲಿ ಅದ್ಧೂರಿ...
-
ತೀರ್ಥಹಳ್ಳಿ: ತಾಲೂಕಿನಲ್ಲಿ ಕೆರೆಗಳ ಸರ್ವೇ ಕಾರ್ಯ ಸಮಾಧಾನಕರ ಆಗಿಲ್ಲ. 305 ಕೆರೆಗಳ ಗಡಿ ಗುರುತಿಸುವ ಕಾರ್ಯ ವಿಳಂಬವಾಗಿದೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಡಿಡಿಎಲ್ಆರ್...
-
ಮಣಿಪಾಲ: ಪಂಚಭಾಷಾ ನಟ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಯಾವ ಕನ್ನಡ ಸಿನಿಮಾ ನಿಮಗಿಷ್ಟ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ....
-
ನವದೆಹಲಿ/ಹೈದರಾಬಾದ್: ದಿಲ್ಲಿಯ ನಿರ್ಭಯಾ, ತೆಲಂಗಾಣದ ದಿಶಾ, ಉನ್ನಾವ್ ಅತ್ಯಾಚಾರ ಪ್ರಕರಣಗಳು ದೇಶವನ್ನೇ ಬೆಚ್ಚಿಬೀಳಿಸಿದ್ದಲ್ಲದೇ ಆರೋಪಿಗಳಿಗೆ ಕಠಿಣ ಶಿಕ್ಷೆ...
-
ಹುಳಿಯಾರು: ಶಾಲಾ ಬಿಸಿಯೂಟಕ್ಕೆ ಹುಳು ಬಿದ್ದಿರುವ ಬೇಳೆ ಸರಬರಾಜು ಮಾಡುತ್ತಿರುವುದರಿಂದ ಆಕ್ರೋಶಗೊಂಡ ಪೋಷಕರು ಬೇಳೆ ಇಳಿಸಲು ಬಂದ ಲಾರಿ ತಡೆದು ಪ್ರತಿಭಟನೆ...