ಭೀತಿ ಹುಟ್ಟಿಸುವ ಅಂಗನವಾಡಿ ಹಳೆ ಕಟ್ಟಡ

ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್‌

Team Udayavani, Jan 28, 2020, 5:43 AM IST

27KSDE14

ಕಾಸರಗೋಡು: ಕಲ್ಯೋಟ್‌ ಪೇಟೆ ಪರಿಸರದಲ್ಲಿ ಕಾರ್ಯಾಚರಿಸುವ ಪುಲ್ಲೂರು – ಪೆರಿಯ ಗ್ರಾಮ ಪಂಚಾಯತ್‌ನ ಐದನೇ ವಾರ್ಡ್‌ಗೊಳಪಟ್ಟ ಪ್ರದೇಶದಲ್ಲಿ ಹಳೆಯದಾದ ಅಂಗನವಾಡಿ ಕಟ್ಟಡ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಶಿಕ್ಷಕರು, ರಕ್ಷಕರು ಹಾಗೂ ಮಕ್ಕಳು ಭೀತರಾಗಿದ್ದಾರೆ.

ಹಳೆಯದಾದ ಕಟ್ಟಡ ಮುರಿದು ಬೀಳುವ ಸ್ಥಿತಿಯಲ್ಲಿರುವುದರಿಂದ 2014 ರಲ್ಲಿ ಎಂಡೋಸಲ್ಫಾನ್‌ ಯೋಜನೆಗೊಳ ಪಡಿಸಿ ಅಂಗನವಾಡಿಗೆ ನೂತನ ಕಟ್ಟಡ ನಿರ್ಮಿಸಿಲಾಗಿತ್ತು. ಆದರೆ ಅಲ್ಲಿ ಕಾರ್ಯಾ ಚರಿಸುತ್ತಿದ್ದ ಹಳೆಯ ಅಂಗನವಾಡಿ ಕಟ್ಟಡ ಈಗಲೂ ಹಾಗೆಯೇ ಮುರಿದು ಬೀಳುವ ಸ್ಥಿತಿಯಲ್ಲಿದೆ. ಯಾವ ಸಂದರ್ಭದಲ್ಲಿಯೂ ಈ ಹಳೆಯ ಕಟ್ಟಡ ಮುರಿದು ಬೀಳುವ ಸ್ಥಿತಿಯಲ್ಲಿದೆ. ನೂತನ ಕಟ್ಟಡ ನಿರ್ಮಿಸಿ ಐದು ವರ್ಷಗಳಾದರೂ ಹಳೆಯ ಕಟ್ಟಡ ಅಲ್ಲೇ ನೆಲೆ ನಿಂತಿದೆ. ಹಳೆಯ ಕಟ್ಟಡದ ಮರದ ಪಕ್ಕಾಸು, ಹೆಂಚು, ಗೋಡೆ ಮೊದಲಾದ ಭಾಗಗಳೆಲ್ಲ ಮುರಿದು ಬೀಳುತ್ತಿರುವುದರಿಂದ ಮಕ್ಕಳ ರಕ್ಷಕರು ಶಾಲೆಗೆ ಕಳುಹಿಸಲು ಹಿಂಜರಿಯುತ್ತಾರೆ. ಈ ಅಂಗನವಾಡಿಯಲ್ಲಿ 20 ಮಕ್ಕಳು ಕಲಿಯು ತ್ತಿದ್ದು, ಮೂತ್ರಶಂಕೆಗಾಗಿ ಹಳೆಯ ಕಟ್ಟಡದ ಸಮೀಪಕ್ಕೆ ತೆರಳ ಬೇಕಾಗಿದೆ. ಹಳೆಯ ಕಟ್ಟಡದ ಸಮೀಪದಲ್ಲಿಯೇ ಶೌಚಾಲಯ ನಿರ್ಮಿಸಿರುವುದರಿಂದ ಮಕ್ಕಳನ್ನು ಅಲ್ಲಿಗೆ ಬಿಡುವುದೆಂದರೆ ಭೀತಿ ಹುಟ್ಟಿಸುತ್ತದೆ. ಅಲ್ಲದೆ ಈ ಹಳೆಯ ಕಟ್ಟಡದ ಪಕ್ಕದಲ್ಲಿ ಹಾವು ಮೊದಲಾದ ವಿಷ ಜಂತುಗಳು ಕಂಡು ಬರುತ್ತಿರುವುದಾಗಿ ದೂರುಗಳಿವೆ. ಆದುದರಿಂದ ಮಕ್ಕಳನ್ನು ಅಂಗಳದಲ್ಲಿ ಆಟವಾಡಲು ಬಿಡಲು ಶಿಕ್ಷಕಿಯರು ಹಿಂಜರಿಯುತ್ತಾರೆ.

ಪಂ. ಅಸಿಸ್ಟೆಂಟ್‌ ಎಂಜಿನಿಯರ್‌ಅವರಿಂದ‌ ಫಿಟ್‌ನೆಸ್‌ ಸರ್ಟಿಫಿಕೇಟ್‌ ಲಭಿ ಸಿದ ಕೂಡಲೇ ಹಳೆಯ ಅಂಗನವಾಡಿ ಕಟ್ಟಡ ತೆರವು ಕುರಿತು ಆಲೋಚಿಸಲಾಗುವುದು ಎಂದು ಪುಲ್ಲೂರು-ಪೆರಿಯ ಪಂಚಾಯತ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಮ ಕೈಗೊಂಡಿಲ್ಲ
ಈ ಹಳೆ ಕಟ್ಟಡವನ್ನು ಕೆಡವಿದಲ್ಲಿ ಮಕ್ಕಳಿಗೆ ಆಟ ವಾಡಲು ವಿಶಾಲವಾದ ಮೈದಾನ ನಿರ್ಮಿಸ ಬಹುದಾಗಿದೆ. ಹಳೆಯ ಕಟ್ಟಡವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಪಂಚಾಯತ್‌ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಪುಲ್ಲೂರು – ಪೆರಿಯ ಪಂಚಾಯತ್‌ ಐಸಿಡಿಎಸ್‌ ಸೂಪರ್‌ವೈಸರ್‌ತಿಳಿಸಿದ್ದಾರೆ. ಆದರೆ ಈ ತನಕ ಕಟ್ಟಡವನ್ನು ಕೆಡವಲು ಪಂಚಾ ಯತ್‌ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳಲಿಲ್ಲ ಎನ್ನಲಾಗಿದೆ.

ಟಾಪ್ ನ್ಯೂಸ್

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.