ಬದಿಯಡ್ಕ: ಅಂಗವಿಕಲರಿಗೆ ಸವಲತ್ತು ವಿತರಣೆ
Team Udayavani, Mar 7, 2019, 1:00 AM IST
ಬದಿಯಡ್ಕ: ಅಂಗವಿಕಲರಿಗಾಗಿ ವಿಶೇಷ ವಾಹನಗಳನ್ನು ನೀಡಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು. ಬದಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ 2018-19ನೇ ಸಾಲಿನ ಅರ್ಹ ಫಲಾನುಭವಿಗಳಾದ 7ಮಂದಿ ಅಂಗವಿಕಲರಿಗೆ ವಿಶೇಷ ದ್ವಿಚಕ್ರ ವಾಹನವನ್ನು ವಿತರಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸೈಬುನ್ನೀಸಾ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಅನ್ವರ್ ಓಜೋನ್, ಶ್ಯಾಮಪ್ರಸಾದ್ ಮಾನ್ಯ, ಗ್ರಾಮ ಪಂಚಾಯತ್ ಸದಸ್ಯರಾದ ವಿಶ್ವನಾಥ ಪ್ರಭು ಕರಿಂಬಿಲ, ಬಾಲಕೃಷ್ಣ ಶೆಟ್ಟಿ ಕಡಾರು, ಮುನೀರ್ ಉಪಸ್ಥಿತರಿದ್ದು ಮಾತನಾಡಿದರು. ಒಟ್ಟು ಏಳು ಮಂದಿ ಫಲಾನುಭವಿಗಳಿಗೆ ಹೀರೋ ಕಂಪೆನಿಯ ಸ್ಕೂಟರ್ ಅನ್ನು ವಿತರಿಸಲಾಯಿತು. ಆಯ್ಕೆ ಸಮಿತಿಯ ಐಸಿಡಿಎಸ್ನ ಜ್ಯೋತಿ ಸ್ವಾಗತಿಸಿ, ಭವ್ಯಾ ವಂದಿಸಿದರು.