ಸೌಹಾರ್ದತೆಯಲ್ಲಿ ಏಕತೆ ಮೆರೆದ ಕಾಸರಗೋಡಿನ ಭಟ್ಟರು

Team Udayavani, May 15, 2019, 7:30 PM IST

ಬದಿಯಡ್ಕ: ಮಗನ ಮದುವೆ ದಿನ ಮುಸ್ಲಿಮರಿಗೆ ಇಫ್ತಾರ್‌ ಕೂಟ ಏರ್ಪಡಿಸುವ ಮೂಲಕ ಸೌಹಾರ್ದತೆ ಮೆರೆದು ಮಾದರಿಯಾಗಿದ್ದಾರೆ ಬದಿಯಡ್ಕದ ಸಮಾಜಸೇವಕರು, ಕೃಷಿಕರಾದ ತಿರುಪತಿ ಭಟ್‌. ತಾನು ನಂಬಿದ ನಂಬಿಕೆ ವಿಶ್ವಾಸ, ಪರಂಪರೆ-ಸಂಪ್ರದಾಯದ ಚೌಕಟ್ಟಿನೊಳಗೆ ಭಾವೈಕ್ಯದ ಸಂದೇಶ ಸಾರುವಲ್ಲಿ ಯಶಸ್ವಿಯಾದರು.

ತಿರುಪತಿ ಭಟ್‌-ಸರೋಜ ದಂಪತಿಗಳ ಮಗ ಕೃಷ್ಣ ಕುಮಾರ್‌ನ ವಿವಾಹವು ಮಲಪ್ಪುರದ ಅಂಜನಾಳ ಜತೆ ನಡೆಯಿತು. ಆಸುಪಾಸಿನ ಮುಸಲ್ಮಾನ ಸ್ನೇಹಿತರು ರಂಝಾನ್‌ ಉಪವಾಸದ ಕಾರಣ ಮದುವೆಗೆ ಬಂದು ಶುಭ ಹಾರೈಸಿ ಔತಣಕೂಟದಲ್ಲಿ ಪಾಲ್ಗೊಳ್ಳದೆ ತೆರಳಿದ್ದರು. ಹೀಗಾಗಿ ಭಟ್ಟರು ತಮ್ಮ ಮನೆಯಲ್ಲಿಯೇ ಇಫ್ತಾರ್‌ ಕೂಟವನ್ನು ಏರ್ಪಡಿಸಿ ತಮ್ಮ ಸಂತೋಷವನ್ನು ಅವರೊಂದಿಗೆ ಹಂಚಿಕೊಂಡರು. ಸಮಾಜಸೇವೆ ಮನೆಯಿಂದ ಪ್ರಾರಂಭವಾಗಬೇಕು ಎಂಬ ಮೂಲ ಉದ್ದೇಶದೊಂದಿಗೆ ಶಾಂತಿ, ಸೌಹಾರ್ಧತೆ ಹಾಗೂ ಸಹೋದರತೆಯ ಸಂಕೇತವಾದ ಈದ್‌ ಉಲ್‌ ಫಿತರ್‌ ಹಬ್ಬದ ಪೂರ್ವಭಾವಿಯಾಗಿ ಆಚರಿಸುವ ಉಪವಾಸವನ್ನು ಕೈಗೊಳ್ಳುವವರಿಗೆ ಆಹಾರ ನೀಡಿ ಹಿಂದೂ ಮುಸ್ಲಿಂ ಸೌಹಾರ್ದತೆ ಮೇಳೆ„ಸುವಂತೆ ಮಾಡಿದರು.

ಬಹುತ್ವ ತುಂಬಿರುವ ನಮ್ಮ ದೇಶದಲ್ಲಿ ನೂರಾರು ಬಗೆಯ ಹಬ್ಬ ಆಚರಣೆಗಳಿವೆ. ಅದರಲ್ಲಿ ಬಹುತೇಕ ಹಬ್ಬಗಳನ್ನು ಹಿಂದು-ಕ್ರೆŒ„ಸ್ತ- ಮುಸ್ಲಿಂ ಎನ್ನುವ ಬೇಧ ಮತ ಭಾವವಿಲ್ಲದೆ ಆಚರಿಸುವುದು ಭಾತರದ ವೈವಿಧ್ಯತೆ. ಸೌಹಾರ್ದತೆಗೆ ಸಾಕ್ಷಿಯಾದ ಮದುವೆಯ ಇಫ್ತಾರ್‌ ಕೂಟದಲ್ಲಿ ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು, ಮಾಜಿ ಸಚಿವ ಸಿ.ಟಿ.ಅಹಮ್ಮದಲಿ, ಮಾಜಿ ಬದಿಯಡ್ಕ ಪಂಚಾಯತು ಅಧ್ಯಕ್ಷ ಮಾಹಿನ್‌ ಕೇಳ್ಳೋಟ್‌, ಪಿ.ಜಿ. ಚಂದ್ರಹಾಸ ರೈ ಮುಂತಾದ ಗಣ್ಯರು ಭಾಗವಹಿಸುವ ಮೂಲಕ ಸಂಪನ್ನಗೊಳಿಸಿದರು. ಮಾತ್ರವಲ್ಲದೆ ಭಾವೈಕ್ಯತೆಯ ಸಂದೇಶವನ್ನು ಎತ್ತಿಹಿಡಿದರು.

ಉತ್ತಮ ಕೃಷಿಕರೂ ಆಗಿರುವ ಭಟ್ಟರು ಹೆ„ನುಗಾರಿಕೆಯಲ್ಲೂ ಎತ್ತಿದ ಕೈ. ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುವ ಭಟ್ಟರ ಮನೆಯಲ್ಲಿ ಹಬ್ಬದ ವಾತಾವರಣ ಸƒಷ್ಟಿಯಾಗಿತ್ತು. ನೂರಾರು ಪುರುಷರು ಮತ್ತು ಮಹಿಳೆಯರು ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದರು. ದಿನದ ಉಪವಾಸ ಕೊನೆಗೊಳಿಸಲು ಅಗತ್ಯವಿರುವ ವಿವಿಧ ರೀತಿಯ ಪಾನೀಯ, ಸಮೋಸ ಸೇರಿದಂತೆ ಕರಿದ ತಿಂಡಿ ತಿನಿಸುಗಳು ಕಲ್ಲಂಗಡಿ ಮೊದಲಾದ ಹಣ್ಣು ಹಂಪಲುಗಳನ್ನು ನೀಡಿ ಸತ್ಕರಿಸಲಾಯಿತು.

ತಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಮುಸ್ಲಿಂ ಸ್ನೇಹಿತರಿಗೆ ಇಫ್ತಾರ್‌ ಕೂಟವನ್ನು ಏರ್ಪಡಿಸಿದುದರಿಂದ ಅವರೂ ನಮ್ಮ ಸಂಭ್ರಮದಲ್ಲಿ ಪಾಲ್ಗೊಳ್ಳುವಂತಾಯಿತು. ನಶ್ವರ ಬದುಕಿನಲ್ಲಿ ಸೌಹಾರ್ಧತೆ, ಪ್ರೀತಿ, ವಿಶ್ವಾಸ ಮತ್ತು ಪರಸ್ಪರರ ನಂಬಿಕೆ ವಿಶ್ವಾಸಗಳನ್ನು ಗೌರವಿಸುವುದನ್ನು ರೂಢಿಸಿಕೊಂಡಾಗ ಸಮಾಜದಲ್ಲಿ ಶಾಂತಿ ಸಮಾಧಾನ ನೆಲೆಸುತ್ತದೆ.
– ತಿರುಪತಿ ಭಟ್‌, ಸಮಾಜ ಸೇವಕರು ಬದಿಯಡ್ಕ

ಇಫ್ತಾರ್‌ ಎನ್ನುವುದು ಅತ್ಯಂತ ವಿಶೇಷ ಹಾಗೂ ಪುಣ್ಯ ಕಾರ್ಯ. ದಾರಿದ್ರŒÂ ಮತ್ತು ಆಹಾರದ ಮಹತ್ವವನ್ನು ತಿಳಿಸುವ ರಂಝಾನ್‌ ಮಾಸದಲ್ಲಿ ತಿರುಪತಿ ಭಟ್‌ ಇಫ್ತಾರ್‌ ಕೂಟವನ್ನು ಏರ್ಪಡಿಸಿ ಪರಸ್ಪರ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸಿದ್ದಾರೆ. ಐಕ್ಯತೆಯನ್ನು ಸಾರುವ ಪ್ರಯತ್ನ ಮಾಡಿದ್ದಾರೆ.
– ಸಿ.ಟಿ.ಅಹಮ್ಮದಲಿ, ಮಾಜಿ ಸಚಿವರು ಕೇರಳ ಸರಕಾರ

– ಅಖಿಲೇಶ್ ನಗುಮುಗಂ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ