ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ: ಕಟೀಲ್‌

ಮಂಜೇಶ್ವರ ವಿಧಾನಸಭಾ ಕ್ಷೇತ್ರ ಉಪಚುನಾವಣೆ

Team Udayavani, Oct 7, 2019, 5:25 AM IST

ಕುಂಬಳೆ: ಕೇರಳದ ನಾಸ್ತಿಕ ಸರಕಾರ ಶಬರಿಮಲೆ ಆಚಾರ ಸಂರಕ್ಷಣೆ ಯನ್ನು ಕೆಡಿಸಲು ಯತ್ನಿಸಿದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್‌ಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಸ್ತಿಕರು ಮತದಾನದ ಮೂಲಕ ತಕ್ಕ ತಕ್ಕ ಉತ್ತರ ನೀಡಿದ್ದಾರೆ.

ಇದರಂತೆ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಅಭೂತಪೂರ್ವ ಗೆಲುವು ಸಾಧಿಸ ಲಿರುವುದಾಗಿ ದ.ಕ. ಲೋಕಸಭಾ ಸದಸ್ಯ, ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಮಂಡಲ ಎನ್‌ಡಿಎ ಚುನಾವಣ ಸಮಾವೇಶ ಉದ್ಘಾಟಿಸಿ ಮಾತನಾಡಿದ ನಳಿನ್‌ ಅವರು ಭಾರತದ ನವನಿರ್ಮಾಣ ಕ್ಕಾಗಿ ಪ್ರ‌ಧಾನಿ ನರೇಂದ್ರ ಮೋದಿಯವರು ಪ್ರಯತ್ನಿಸಿ ಭಾರತಕ್ಕೆ ವಿಶ್ವದಲ್ಲಿ ಮನ್ನಣೆ ದೊರೆತಿದೆ. ಭಯೋ ತ್ಪಾದನೆ ಮತ್ತು ಉಗ್ರವಾದ ನಿಗ್ರಹ, ಕಾಶ್ಮೀರಕ್ಕೆ ಸ್ವಾಯತ್ತತೆಯ ಮೂಲಕ ಜನರ ಅಖಂಡ ಭಾರತದ ಸಂಕಲ್ಪ ಈಡೇರಿದೆ ಎಂದರು. ಕಳೆದ ನಾಲ್ಕು ವರ್ಷದ ಕೇರಳದ ರಾಜ್ಯಾಡಳಿತದಲ್ಲಿ ಅದೆಷ್ಟೋ ಸಂಘ ಪರಿವಾರದ ಕಾರ್ಯಕರ್ತರನ್ನು ಬರ್ಬರ ಹತ್ಯೆಗೈದ ಸರಕಾರ ಅಭಿವೃದ್ಧಿಯನ್ನು ಅವಗಣಿಸಿರುವುದಾಗಿ ಆರೋಪಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್‌ ಸಮಾವೇಶದ ಅಧ್ಯಕ್ಷತೆ ವಹಿಸಿದರು.

ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ, ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್‌, ಬಿಜೆಪಿ-ಎನ್‌ಡಿಎ ಘಟಕಗಳ‌ ರಾಜ್ಯ ಮತ್ತು ಜಿಲ್ಲಾ ನಾಯಕರಾದ, ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ಟಿ.ವಿ. ಬಾಬು, ಮಾನುವಲ್‌ ಟಿ. ಕಾಪನ್‌, ತಿರುವಲ್ಲೂರು ಮುರಳಿ, ಸುಧೀರ್‌ ಜಿ ಕೊಲ್ಲರ, ಜಿಜಿ ಥೋಮಸ್‌, ನ್ಯಾಯವಾದಿ ಹರಿಕುಮಾರ್‌, ಬೇಬಿ ಕೊಲ್ಲಂಕೊಂಬಿಲ್‌ ಭಾಗವಹಿಸಿ ಮಾತನಾಡಿದರು. ನಾಯಕ ರಾದ ವಿ. ಕೆ. ಸಜೀವನ್‌, ಪುಷ್ಪಾ ಅಮೆಕ್ಕಳ, ಎಂ. ರಾಮಪ್ಪ ಮಂಜೇಶ್ವರ ಎ. ವೇಲಾಯುಧನ್‌, ಪಿ. ರಮೇಶ್‌, ಗಂಗಾಧರ್‌, ಎಚ್‌. ಸತ್ಯಶಂಕರ ಭಟ್‌, ನ್ಯಾಯವಾದಿ ರಾಮ ಪಾಟಾಳಿ, ಟಿಪಿ. ಪಿ. ರಂಜಿತ್‌, ಎಂ.ಎನ್‌. ಗಿರಿ ಉಪಸ್ಥಿತ ರಿದ್ದರು. ಸವಿತಾ ಬಾಳಿಕೆ ಪ್ರಾರ್ಥಿಸಿದರು. ಮಂಜೇಶ್ವರ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಮುರಳೀಧರ ಯಾದವ್‌ ವಂದಿಸಿದರು. ಪಕ್ಷದ ರಾಜ್ಯ ಸಮತಿ ಸದಸ್ಯ ಪಿ. ಸುರೇಶ್‌ ಕುಮಾರ್‌ ಶೆಟ್ಟಿ 1,001 ಮಂದಿಯನ್ನೊಳಗೊಂಡ ಚುನಾವಣ ಸಮಿತಿಯನ್ನು ಘೋಷಿಸಿದರು. ಅಧ್ಯಕ್ಷರಾಗಿ ಅರಿಬೈಲು ಗೋಪಾಲ ಶೆಟ್ಟಿ, ಪ್ರಧಾನ ಸಂಚಾಲಕ ರಾಗಿ ನ್ಯಾಯವಾದಿ ಶ್ರೀಕಾಂತ್‌ಮತ್ತು ಸಂಚಾಲಕ‌ ರಾಗಿ ಕೋಳಾರು ಸತೀಶ್ಚಂದ್ರ ಭಂಡಾರಿ ಯವರನ್ನು ಆಯ್ಕೆ ಮಾಡಲಾಯಿತು.

ದೇಶಪ್ರೇಮದ ರಾಷ್ಟ್ರ ಪುತ್ರ
ಕಣ್ಣೂರು ಲೋಕಸಭಾ ಮಾಜಿ ಸದಸ್ಯ,ಮಾಜಿ ಶಾಸಕ ಎ.ಪಿ. ಅಬ್ದುಲ್ಲ ಕುಟ್ಟಿ ಮಾತನಾಡಿ ಬಿಜೆಪಿ ಶಕ್ತಿ ಕೇಂದ್ರವಾದ ಮಂಜೇಶ್ವರ ಮಂಡಲದಲ್ಲಿ ಉಭಯ ರಂಗಗಳ ಸರಕಾರಗಳು ಅಭಿವೃದ್ಧಿಯನ್ನು ಅವಗಣಿಸಿದೆ. ದೇಶ ರಕ್ಷಣೆಗಾಗಿ ಬಿಜೆಪಿಗೆ ಮತ ನೀಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿರೆಂದರು. ತಾನು ಬಿಜೆಪಿಗೆ ಸೇರಿ ದೇಶಪ್ರೇಮದ ರಾಷ್ಟ್ರ ಪುತ್ರಅಬ್ದುಲ್ಲ ಕುಟ್ಟಿಯಾಗಿ ಹೆಮ್ಮೆಪಡುವೆನೆಂದರು.ಚುನಾವಣೆಯಲ್ಲಿ ಮತದಾರರು ಶ್ರೀ ಶಬರಿಮಲೆ ಅಯ್ಯಪ್ಪನನ್ನು ಧ್ಯಾನಿಸಿ ಎನ್‌ಡಿಎ ಗೆ ಮತ ನೀಡಿ ಅಭ್ಯರ್ಥಿಯವರನ್ನು ಚುನಾಯಿಸಿ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ