ಕಾರು ಪಲ್ಟಿ: ಯುವಕ ಸ್ಥಳದಲ್ಲೇ ಸಾವು

Team Udayavani, Jul 9, 2019, 9:16 AM IST

ಮಡಿಕೇರಿ: ಕಾರು ಪಲ್ಟಿಯಾಗಿ ಯುವಕನೊಬ್ಬ ಸ್ಥಳ ದಲ್ಲೇ ಮೃತಪಟ್ಟ ಘಟನೆ ರವಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಸುಂಟಿ ಕೊಪ್ಪದ ಶಾಂತಗಿರಿ ಸಮೀಪದ ಕೂರ್ಗಳ್ಳಿ ತೋಟದ ಸಮೀಪದಲ್ಲಿ ಸಂಭವಿಸಿದೆ.

ಕಾರು ಚಲಾಯಿಸುತ್ತಿದ್ದ ಅರವ ತ್ತೂಕ್ಲು ಗ್ರಾಮದ ನಿವಾಸಿ ಹರ್ಷಿತ್‌ ಗೌಡ (27) ಮೃತಪಟ್ಟವರು. ಜತೆಯಲ್ಲಿದ್ದ ಸ್ನೇಹಿತ ಸುಮಂತ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಹರ್ಷಿತ್‌ ಅವರು ತಂದೆಯನ್ನು ಅರವತ್ತೋಕ್ಲು ಗ್ರಾಮಕ್ಕೆ ಬಿಟ್ಟು ಸ್ನೇಹಿತನ ಜತೆಯಲ್ಲಿ ವಾಪಸಾಗುತ್ತಿದ್ದಾಗ ಅವಘಡ ಸಂಭವಿಸಿದೆ.

ಸ್ಥಳಕ್ಕೆ ಕುಶಾಲನಗರ ಸಿಐ ಕುಮಾರ್‌ ಆರಾಧ್ಯ, ಸುಂಟಿಕೊಪ್ಪದ ಠಾಣಾಧಿಕಾರಿ ಜಯರಾಂ ಹಾಗೂ ಸಿಬಂದಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ