“ದ್ವೀಪಗಳಂತೆ ಆಚರಣೆಗಳು ನಶಿಸುವ ಹಂತದಲ್ಲಿವೆ’

Team Udayavani, May 28, 2019, 6:10 AM IST

ಕುಂಬಳೆ: ವಿಭಿನ್ನ ಸಂಸ್ಕೃತಿ, ಜೀವನ ಕ್ರಮಗಳ ಕರಾವಳಿಯ ನೆಲದಲ್ಲಿ ಇಂತಹ ವಿಭಿನ್ನತೆಯಿಂದಲೇ ಗೋಕಾಕ್‌ ಚಳವಳಿಯಂತಹ ಹೋರಾಟಗಳು ನಮ್ಮಲ್ಲಿ ಮೂಡಿಬಂದಿಲ್ಲ. ಸಾಮೂಹಿಕ ಆಚರಣೆಯಂತಹ ಏಕಸೂತ್ರಿತ ಒಗ್ಗಟ್ಟು ಇಲ್ಲದಿರುವುದರಿಂದ ದ್ವೀಪಗಳಂತೆ ನಮ್ಮ ಆಚರಣೆಗಳು ಇಂದೀಗ ನಶಿಸುವ ಹಂತದಲ್ಲಿದ್ದು, ಆತ್ಮಾವಲೋಕದೊಂದಿಗೆ ಬೆಳೆಸಿ ಮುನ್ನಡೆಸುವ ಕಾರ್ಯ ಆಗಬೇಕಿದೆ ಎಂದು ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಡಾ| ವಸಂತಕುಮಾರ್‌ ಪೆರ್ಲ ಅವರು ತಿಳಿಸಿದರು.

ಸಿರಿಗನ್ನಡ ವೇದಿಕೆ ಬೆಂಗಳೂರು, ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ನಾರಾಯಣಮಂಗಲದ ಕುಳಮರ್ವ ಶ್ರೀನಿ ಧಿಯಲ್ಲಿ ಆಯೋಜಿಸಲಾಗಿದ್ದ ವಸಂತ ಸಾಹಿತ್ಯೋತ್ಸವ-ಪ್ರತಿಭಾ ಪುರಸ್ಕಾರ-ಕವಿಗೋಷ್ಠಿ ಸಮಾರಂಭದಲ್ಲಿ ಕನ್ನಡ ಜಾಗೃತಿ ವಿಶೇಷೋಪನ್ಯಾಸಗೈದು ಅವರು ಮಾತನಾಡಿದರು.

ಪರಂಪರೆಯನ್ನು ಸೃಷ್ಟಿಸಿದ ವಿನಾ ಸಂಸ್ಕೃತಿ ಉಳಿಯಲು ಸಾಧ್ಯವಿಲ್ಲ ಎಂದು ತಿಳಿಸಿದ ಅವರು, ವಿಚಾರವಂತಿಕೆಯೊಂದಿಗೆ ಆಚಾರವಂತಿಕೆಯ ಹೃದಯ ವೈಶಾಲ್ಯವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವ ಅನಿವಾರ್ಯ ಇದೆ ಎಂದು ಕರೆ ನೀಡಿದರು.

ಸಿರಿಗನ್ನಡ ವೇದಿಕೆ ಗಡಿನಾಡ ಘಟಕಾಧ್ಯಕ್ಷ ವಿ.ಬಿ. ಕುಳಮರ್ವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾ ರಂಭವನ್ನು ನಿವೃತ್ತ ಜಿಲ್ಲಾ ವಿದ್ಯಾ ಧಿಕಾರಿ ಲಲಿತಾಲಕ್ಷಿ$¾à ಕುಳಮರ್ವ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭ ಜಿಲ್ಲೆಯ ವಿವಿಧ ವಿಭಾಗಗಳಲ್ಲಿ ವ್ಯಾಸಂಗಗೈದು ವಿಶೇಷ ಸ್ಥಾನಮಾನಗಳೊಂದಿಗೆ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ರದ್ಧಾ ನಾಯರ್ಪಳ್ಳ, ಶ್ರೀಕೃಷ್ಣ ಶರ್ಮ ಕಡಪ್ಪು, ವರಲಕ್ಷಿ$¾à, ರûಾ ಕುಳಮರ್ವ, ಕಾವ್ಯಶ್ರೀ ಕುಳಮರ್ವ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಅವರು ಅಭಿನಂದನಾ ನುಡಿಗಳನ್ನಾಡಿದರು.

ಬಳಿಕ ಶ್ರದ್ಧಾ ನಾಯರ್ಪಳ್ಳ ಹಾಗೂ ಮೇಧಾ ನಾಯರ್ಪಳ್ಳ ಸಹೋದರಿಯರಿಂದ ಮೂಲ ರಾಮಚರಿತ ಮಾನಸವನ್ನು ಕನ್ನಡಕ್ಕೆ ಅನುವಾದಿಸಿದ ನೆತ್ತರಗುಳಿ ತಿರುಮ ಲೇಶ್ವರ ಭಟ್‌ ರಚಿಸಿದ ಕೃತಿಯಿಂದ ಆಯ್ದ “ವಾಲಿಮೋಕ್ಷ’ ಕಥಾನಕದ ವಾಚನ ಮತ್ತು ವ್ಯಾಖ್ಯಾನ ನಡೆಯಿತು.

ಶ್ರೀಕೃಷ್ಣಯ್ಯ ಅನಂತಪುರ ಹಾಗೂ ಡಾ| ಸುರೇಶ್‌ ನೆಗಳಗುಳಿ ಉಪಸ್ಥಿತರಿದ್ದು ಶುಭಹಾರೈಸಿದರು.

ಬಳಿಕ ಕವಿಗೋಷ್ಠಿ ಹಾಗೂ ವಿವಿಧ ಸಾಹಿತ್ತಿಕ ಕಾರ್ಯಕ್ರಮಗಳು ನಡೆದವು. ಪ್ರೊ| ಗಣಪತಿ ಭಟ್‌ ಕುಳಮರ್ವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಅಭಿನಂದನೀಯ
ಗಡಿನಾಡ ಪರಂಪರೆಯಲ್ಲಿ ಬೆಳೆದು ಬಂದಿದ್ದ ದೀಪಾವಳಿ ಆಚರಣೆಯಂತಹ ಜಾನಪದೀಯ ಸೊಗಡಿನ ಅನುಷ್ಠಾನಗಳು ಇಂದು ಸಾಮೂಹಿಕವಾಗಿ ಆಚರಿಸಲ್ಪಡಬೇಕು ಎಂದ ಅವರು ಆತ್ಮಾಭಿಮಾನ, ಭಾಷಾಭಿಮಾನದ ಕಾಳಜಿ ಇಲ್ಲಿಯ ಕನ್ನಡ-ತುಳು ಸಂಸ್ಕೃತಿಯನ್ನು ಬೆಸೆದು ಇನ್ನಷ್ಟು ಬೆಳೆಸುವುದು. ಯುವ ತಲೆಮಾರು ಆಸಕ್ತಿಯಿಂದ ಸಾಹಿತ್ಯ, ಸಂಸ್ಕೃತಿಗಳ ಹೊಕ್ಕುಬಳಕೆಯೊಂದಿಗೆ ಹುಟ್ಟಿದ ಮಣ್ಣಿನ ಋಣವನ್ನು ತೀರಿಸುವ ಹೊಣೆ ವಹಿಸಿಕೊಳ್ಳಬೇಕು.
-ಡಾ| ವಸಂತಕುಮಾರ ಪೆರ್ಲ ನಿವೃತ್ತ ನಿಲಯ ನಿರ್ದೇಶಕರು,
ಮಂಗಳೂರು ಆಕಾಶವಾಣಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ