ಮುಚ್ಚಿ ಹೋಗಿದೆ ಚರಂಡಿ; ಕೃತಕ ನೆರೆ ಸಂಭವ

ಮಳೆಗಾಲದ ಪೂರ್ವ ತಯಾರಿ: ಮುನ್ನೆಚ್ಚರಿಕೆ ವಹಿಸದ ಲೋಕೋಪಯೋಗಿ ಇಲಾಖೆ

Team Udayavani, May 22, 2019, 6:09 AM IST

ಈಶ್ವರಮಂಗಲ: ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ಈಶ್ವರಮಂಗಲ ಪೇಟೆಯಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಯ ಇಕ್ಕೆಲಗಳ ಚರಂಡಿಯಲ್ಲಿ ಹೂಳು ತುಂಬಿ ಕೃತಕ ನೆರೆಯ ಭೀತಿ ಕಾಡುತ್ತಿದೆ. ಮಳೆಗಾಲದ ಪೂರ್ವ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಿಡಬ್ಲೂéಡಿ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಪೇಟೆಯಲ್ಲಿ ಕೃತಕ ನೆರೆಯ ಭೀತಿ ಕಾಡುತ್ತಿದೆ. ಕಳೆದ ಬಾರಿ ಮುಂಗಾರು ಮಳೆಯ ಸಂದರ್ಭ ಪೇಟೆಯಲ್ಲಿ ಕೃತಕ ನೆರೆಯಿಂದ ಸಾರ್ವಜನಿಕರ ಸಹಿತ ವಾಹನ ಸವಾರರು ಹಲವು ರೀತಿಯ ತೊಂದರೆ ಎದುರಿಸಿದ್ದರು. ಇದಾಗಿ ಒಂದು ವರ್ಷ ಉರುಳಿ ಹೋದರೂ ಇಲಾಖೆ ಸ್ಪಂದಿಸಿಲ್ಲ. ತುರ್ತು ಕಾಮಗಾರಿ ನಡೆಸಲು ಅವಕಾಶಗಳು ಇದ್ದರೂ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ಪೇಟೆಯ ಮುತುವರ್ಜಿ
ಸ್ಥಳೀಯ ಗ್ರಾ.ಪಂ. ಕಳೆದ ಹಲವು ವರ್ಷಗಳಿಂದ ಪೇಟೆ ಭಾಗದಲ್ಲಿ ಚರಂಡಿ ದುರಸ್ತಿ ಕಾರ್ಯ ನಡೆಸುತ್ತಿದೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಕೃತಕ ನೆರೆ ಉಂಟಾದ ಸಂದರ್ಭ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಿದೆ. ಇಲಾಖೆ ಮಾಡಬೇಕಾಗುವ ಕೆಲಸವನ್ನು ಪಂಚಾಯತ್‌ ಮಾಡುತ್ತಿದೆ.

ಬದಲಾಗುತ್ತಿರುವ ಅಧಿಕಾರಿಗಳು
ಇಲಾಖೆಯ ಅಧಿಕಾರಿಗಳು ಬದಲಾಗುತ್ತಿರುವುದರಿಂದ ಪೇಟೆಯ ಸಮಸ್ಯೆಗಳು ಹಾಗೆಯೇ ಉಳಿದು ಕೊಂಡಿವೆೆ. ಕಳೆದ ವರ್ಷ ನೆಟ್ಟಣಿಗೆ ಮುಟ್ನೂರು ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಇದ್ದ ಪಿಡಬ್ಲೂéಡಿ ಅಧಿಕಾರಿ ವರ್ಗಾವಣೆ ಗೊಂಡಿದ್ದಾರೆ. ಬೇರೆ ಅಧಿಕಾರಿಗಳು ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಳೆ ಗಾಲದಲ್ಲಿ ಈ ಸಮಸ್ಯೆ ಅವರ ಗಮನಕ್ಕೆ ಬರುತ್ತದೆ.

ಮುಂದಿನ ವರ್ಷ ಮಳೆಗಾಲದ ಒಳಗಡೆ ವರ್ಗಾವಣೆಗೊಳ್ಳುತ್ತಾರೆ. ಹೀಗೆ ಅಧಿಕಾರಿಗಳು ವರ್ಗಾವಣೆಗೊಳ್ಳುತ್ತಾ ಇರುವು ದರಿಂದ ಪೇಟೆ ಸಮಸ್ಯೆ ಹೀಗೆ ಉಳಿದುಕೊಂಡಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಜನಪ್ರತಿನಿಧಿಗಳು ಸ್ಪಂದಿಸಲಿ
ಈಶ್ವರಮಂಗಲ ಪೇಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮಳೆಗಾಲ ಸದ್ಯದಲ್ಲೇ ಆರಂಭವಾಗಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಚರಂಡಿ ಹೂಳು ತೆಗೆಯುವ ಕೆಲಸವಾಗಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು ಎಂದು ಈಶ್ವರಮಂಗಲ ನವಚೇತನ ಮಿತ್ರ ವೃಂದದ ಅಧ್ಯಕ್ಷ ಪ್ರಶಾಂತ್‌ ನಾಯರ್‌ ಕುಂಟಾಪು ಅವರು ಹೇಳಿದರು.

ಚರಂಡಿಯಲ್ಲಿ ಕಸಕಡ್ಡಿಗಳು
ಬೆಳೆಯುತ್ತಿರುವ ಪೇಟೆಯಲ್ಲಿ ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಕಸ ವಿಲೇವಾರಿಗೆ ಸರಿಯಾದ ವ್ಯವಸ್ಥೆಗಳನ್ನು ಮಾಡದೇ ಇರುವುದರಿಂದ ಪೇಟೆಯ ಸುತ್ತಮುತ್ತದ ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿ ಹೋಗಿವೆೆ. ಕಳೆದ ಮಳೆಗಾಲದಲ್ಲಿ ಈಶ್ವರಮಂಗಲ ಪೊಲೀಸ್‌ ಚೆಕ್‌ಪೋಸ್ಟ್‌ ಬಳಿಯ ಮೋರಿಯಲ್ಲಿ ಹೂಳು ತುಂಬಿ ಕೃತಕ ನೆರೆ ಉಂಟಾಗಿತ್ತು. ಇದನ್ನು ಇನ್ನೂ ದುರಸ್ತಿ ಮಾಡಿಲ್ಲ.

- ಮಾಧವ ನಾಯಕ್‌ ಕೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ