ದೇಲಂಪಾಡಿ: ಗ್ರಾಮದಲ್ಲಿಯೇ ಮೊದಲ ಸಿಂಗಾರಿ ಮೇಳ ಕಲಾ ತಂಡ

Team Udayavani, Oct 15, 2019, 5:57 AM IST

ದೇಲಂಪಾಡಿ: ಗ್ರಾಮೀಣ ಪ್ರದೇಶಗಳಲ್ಲಿ ಕಲಾ ತಂಡಗಳು ಹೊರಹೊಮ್ಮುವುದು ಪ್ರಶಂಸನೀಯ. ಇತ್ತೀಚಿನ ದಿನಗಳಲ್ಲಿ ಯುವಕರ ತಂಡ ಕಲಾ ಸೇವೆಯಲ್ಲಿ ಮುಂದುವರಿಯುತ್ತಿದೆ. ಗ್ರಾಮಗಳಲ್ಲಿ ಹೆಚ್ಚಾಗಿ ಯುವಕ ಮಂಡಲ, ನ್ಪೋರ್ಟ್ಸ್ ಕ್ಲಬ್‌, ಆರ್ಟ್ಸ್ ಕ್ಲಬ್‌ಗಳನ್ನು ಆರಂಭಿಸುತ್ತಿದ್ದ ಯುವ ಮನಸ್ಸು ಇಲ್ಲಿ ಸಿಂಗಾರಿ ಮೇಳಕ್ಕೆ ಮಾರು ಹೋಗಿದೆ. ದೇಲಂಪಾಡಿಯ ಒಂದಷ್ಟು ಯುವಕರ ತಂಡ ಚೆಂಡೆ ಮೇಳದಲ್ಲಿ ಸಿಂಗಾರಿ ಮೇಳವನ್ನು ಅಭ್ಯಸಿಸಿ ರಂಗ ಪ್ರವೇಶಕ್ಕೆ ಅಣಿಯಾಗಿದೆ.

ಕೇರಳ ಚೆಂಡೆಗೆ ಅದರ¨ªೆ ಆದ ವೈವಿಧ್ಯತೆ ಮೆರಗು ಇದೆ. ಕೇರಳ ಚೆಂಡೆ ಮೇಳದಲ್ಲಿ ಸಿಂಗಾರಿ ಮೇಳವೂ ಪ್ರಸಿದ್ಧಿ ಹೊಂದಿದೆ. ಧಾರ್ಮಿಕ ಕಾರ್ಯಕ್ರಮದ ಹಸುರು ಹೊರೆಕಾಣಿಕೆ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಶೇಷ ಆಕರ್ಷಣೆಯಾಗಿ ಹಲವು ಸಂದರ್ಭಗಳಲ್ಲಿ ಸಿಂಗಾರಿ ಮೇಳದ ಚೆಂಡೆಯ ಸದ್ದು ಮೊಳಗುತ್ತದೆ. ಕುಣಿತವೂ ಜತೆಗೂಡುತ್ತದೆ. ಕರಾವಳಿ ಭಾಗದ ಸಮಾರಂಭಗಳಲ್ಲಿ ಹೆಚ್ಚಾಗಿ ಹೊರಜಿÇÉೆಯ ಕೇರಳಿಗರು ಚೆಂಡೆಮೇಳ ಪ್ರದರ್ಶಿಸುತ್ತಾರೆ. ಕೇರಳ ಕರ್ನಾಟಕ ಗಡಿ ಗ್ರಾಮಗಳಲ್ಲಿ ಸಿಂಗಾರಿ ಮೇಳ ತಂಡ ಚಿಗುರೊಡೆದಿದ್ದು ಮೊದಲ ಸಲ.

ತಂಡದ ಹಿನ್ನೆಲೆ
ದೇಲಂಪಾಡಿ ಗ್ರಾಮದ ಒಟ್ಟು 28 ಮಂದಿ ತಂಡದಲ್ಲಿ¨ªಾರೆ. ಚೆಂಡೆ ಕಲಿಯುವ ಆಸಕ್ತಿಯಿಂದಲೇ ಎಲ್ಲರೂ ಒಟ್ಟಾಗಿ¨ªಾರೆ. ಚೆಂಡೆ, ಡೋಲು, ತಾಳ ಮೂರು ವಿಭಾಗಗಳಲ್ಲಿ ಪ್ರದರ್ಶನ ನೀಡಲು ತರಬೇತಿ ಪಡೆದಿ¨ªಾರೆ. ತಂಡಕ್ಕೆ ಶ್ರೀ ಶಾಸ್ತರ ಸಿಂಗಾರಿ ಮೇಳ ಮಣಿಯೂರು ಎಂಬ ಹೆಸರಿಡಲಾಗಿದೆ. ಕೇರಳ ಭಾಗದ ಚೆಂಡೆಕಲೆಯಲ್ಲಿ ಪರಿಣಿತಿ ಪಡೆದ ರಾಜೇಶ್‌ ನೆಲ್ಲಿಕುನ್‌° ಅವರು ತರಬೇತಿ ನೀಡಿ¨ªಾರೆ. ಕೂಡ್ಲು ಶಿವಶೈಲು ಸಿಂಗಾರಿ ಮೇಳ ಆರಂಭಿಸಿದ ಅವರ ತಂvಬ್ಲೂ ವಿಲನ್ಸ್‌ ಎಂದೇ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಹಲವು ತಂಡಗಳು ಇವರಿಂದ ತರಬೇತಿ ಪಡೆದು ಯಶಸ್ವಿ ಸಿಂಗಾರಿ ಮೇಳ ತಂಡ ಕಟ್ಟಿವೆ.

ಐದು ತಿಂಗಳ ತರಬೇತಿ
ಐದು ತಿಂಗಳು ಮಣಿಯೂರು ಶ್ರೀ ಶಾಸ್ತರ ದೇವಸ್ಥಾನದಲ್ಲಿ ತರಬೇತಿ ನಡೆಯಿತು. ಎಲ್ಲ ದಿನ ರಾತ್ರಿ ಎರಡು ಗಂಟೆ ಹೊತ್ತು ಅಭ್ಯಾಸ ನಡೆಸುತ್ತಿದ್ದರು. ವಾರದಲ್ಲಿ ಒಂದು ದಿನ ರವಿವಾರ ತರೆಬೇತುದಾರ ರಾಜೇಶ್‌ ಅವರಿಗೆ ತರಬೇತಿ ನೀಡುತ್ತಿದ್ದರು. ಆರಂಭದಲ್ಲಿ ಮರದ ತುಂಡು ಬಳಸಿ ಕಲ್ಲಿಗೆ ಬಡಿದು ತರಬೇತಿ.
ಅನಂತರದ ತಿಂಗಳುಗಳಲ್ಲಿ ಚೆಂಡೆಯಲ್ಲಿ ಅಭ್ಯಾಸ ಮಾಡಿದ್ದರು. ಇದೀಗ ಚೆಂಡೆ ಕಲಿತು ರಂಗಪ್ರವೇಶಕ್ಕೆ ತಂಡ ಸಿದ್ಧವಾಗಿದೆ. ಅ. 17ರಂದು ಒಡಿಯೂರು ದೇವಸ್ಥಾನದಲ್ಲಿ ಇವರ ರಂಗ ಪ್ರವೇಶ ನಡೆಯಲಿದೆ.

 ಕಲಿಯುವ ಆಸಕ್ತಿ ಇತ್ತು
ಕಾಸರಗೋಡಿನಿಂದ ಇಲ್ಲಿಗೆ ತುಂಬಾ ದೂರವಿದೆ. ಆದರೂ ಇವರ ಕಲಿಯುವ ಆಸಕ್ತಿ ಕಂಡು ತರಬೇತಿ ನೀಡಲು ಒಪ್ಪಿಕೊಂಡೆ. ವಾರದಲ್ಲಿ ಒಂದು ದಿನ ತರಬೇತಿ ನೀಡುತ್ತಿದ್ದೆ. ವಾರವಿಡೀ ಅದನ್ನು ಅಭ್ಯಾಸವನ್ನು ಅವರು ಮಾಡುತ್ತಿದ್ದರು. ಈಗ ಪೂರ್ಣ ತರಬೇತಿ ಪಡೆದು ರಂಗ ಪ್ರವೇಶಕ್ಕೆ ಸಿದ್ಧವಾಗಿ¨ªಾರೆ.
– ರಾಜೇಶ್‌ ನೆಲ್ಲಿಕುನ್ನು, ತರಬೇತುದಾರ

 ಸತತ ಅಭ್ಯಾಸ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಚೆಂಡೆ ಮೇಳಗಳನ್ನು ನೋಡಿ ಕಲಿಯುವ ಆಸಕ್ತಿ ಉಂಟಾಯಿತು. ಸ್ನೇಹಿತರೊಂದಿಗೆ ಹೇಳಿ ಕೊಂಡಾಗ ಉತ್ಸಾಹ ತೋರಿದರು. ಹಾಗಾಗಿ 5 ತಿಂಗಳ ಅಭ್ಯಾಸದಿಂದ ಸಿಂಗಾರಿ ತಂಡ ಕಟ್ಟಿ ದೆವು. ಈಗ ಕಲೆಯೊಂದು ಕಲಿತ ತೃಪ್ತಿ ಇದೆ.
– ಸಾಯಿನಾಥ್‌ ರೈ ಮಣಿಯೂರು ತಂಡದ ಸದಸ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ