ಕೇಂದ್ರ ಸರಕಾರದ ಆಯುಷ್ಮಾನ್‌ಭವ ವಿಮಾ ಯೋಜನೆಗೆ ಅಡ್ಡಿ !

ಜಾರಿಗೆ ರಾಜ್ಯ ಸರಕಾರ ಹಿಂದೇಟು

Team Udayavani, Jun 20, 2019, 6:00 AM IST

ಕುಂಬಳೆ: ಕೇಂದ್ರ ಸರಕಾರವು ಆಯುಷ್ಮಾನ್‌ಭವ ಕಾರುಣ್ಯ ಆರೋಗ್ಯವಿಮಾ ಯೋಜನೆಯನ್ನು ಬಡವರಿಗಾಗಿ ಸಾಕಷ್ಟು ಹಿಂದೆಯೇ ಜ್ಯಾರಿಗೊಳಿಸಿದೆ.ಈ ಯೋಜನೆಯಲ್ಲಿ ಬಡವರ ಕುಟುಂಬಕ್ಕೆ 5 ಲಕ್ಷದ ಚಿಕಿತ್ಸಾ ನೆರವು ದೊರೆಯಲಿದೆ.ಆದರೆ ಆರಂಭದಲ್ಲಿ ಈ ಯೋಜನೆಯನ್ನು ಕೇರಳ ರಾಜ್ಯ ಸರಕಾರ ರಾಜ್ಯದಲ್ಲಿ ಜಾರಿಗೊಳಿ ಸಲು ಕೆಲವೊಂದು ಕಾರಣದ ನೆಪದಲ್ಲಿ ಹಿಂದೇಟು ಹಾಕಿದೆ.

ಕೊನೆಗೆ ಇತರೆಲ್ಲ ರಾಜ್ಯ ಸರಕಾರಗಳು ಯೋಜನೆಯ ನಿರ್ವಹಣೆಗೆ ಮುಂದಾದಾಗ ಅನ್ಯಮಾರ್ಗವಿಲ್ಲದೆ ರಾಜ್ಯದಲ್ಲಿ ಯೋಜನೆಯನ್ನು ವಿಳಂಬವಾಗಿ ಜಾರಿಗೊಳಿಸಿದ ಕಾರಣ ಯೋಜನೆಯಿಂದ ಹಲವು ಬಡರೋಗಿಗಳು ವಂಚಿತರಾಗಬೇಕಾ ಯಿತು. ಕೊನೆಗೂ ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ನಿಧಾನವೇ ಪ್ರಧಾನ ಎಂಬುದಾಗಿ ರಾಜ್ಯ ಸರಕಾರ ವಿಮಾಯೋಜನೆಯ ನಿರ್ವಹಣೆಗೆ ಮುಂದಾಗಿದೆ.ಇದರಂತೆ ಕಾಸಗೋಡು ಜಿಲ್ಲೆಯಲ್ಲಿ ಜೂ.20 ರ ತನಕ ಮಾತ್ರ ಗ್ರಾಮ ಪಂಚಾಯತ್‌ಗಳಲ್ಲಿ ಶಿಬಿರ ಆಯೋಜಿಸಿದೆ.ಹಿಂದೆ ಆರೋಗ್ಯ ಕಾರ್ಡು ಹೊಂದಿದವರು ಕ್ಯಾಂಪಿಗೆ ಆಗಮಿಸಿ ತಮ್ಮ ಆರೋಗ್ಯ ಕಾರ್ಡನ್ನು ಆಯುಷ್ಮಾನ್‌ಭವ ಕಾರುಣ್ಯ ಆರೋಗ್ಯವಿಮಾ ಯೋಜನೆಗೆ ಮರ್ಜಿ ಮಾಡಲು ಮುಂದಾಗಿರುವರು.ಆದರೆ ಇದಕ್ಕೆ ಹೆಚ್ಚಿನ ಪ್ರಚಾರವಿಲ್ಲದೆ ಬಡವರು ಕಾಂಪಿಗೆ ಆಗಮಿಸಿದರೂ ಶಿಬಿರದಲ್ಲಿ ಇದಕ್ಕೆ ಒಂದಲ್ಲೊಂದು ಅಡಚಣೆಗಳು ತಪ್ಪುತ್ತಿಲ್ಲ.ಪದೇಪದೇ ಸರ್ವರ್‌ ಕೈಕೊಡುತ್ತಿರುವುದರಿಂದ ಸುಗಮವಾಗಿ ಕಾರ್ಡುಗಳನ್ನು ವಿತರಿಸಲಾಗುತ್ತಿಲ್ಲ.ಜೂ.16 ರಂದು ರವಿವಾರದಂದು ಶಿಬಿರ ಇದೆ ಎಂದ ಘೋಷಿಸಿದರೂ ಶನಿವಾರ ಮಧ್ಯಾಹ್ನ ಕಡಿತಗೊಂಡ ಸರ್ವರ್‌ ಸೋಮವಾರ ಮರಳಿದೆ.ಇದರ ಮಧ್ಯೆ ಮಾಹಿತಿ ತಿಳಿಯದೆ ಅದಷೋr ಮಂದಿ ಎರಡು ದಿನವೂ ಫಲಾನುಭವಿಗಳು ಶಿಬಿರಕ್ಕೆ ಮರಳಿ ಹಿಡಿಶಾಪ ಹಾಕಿ ಮರಳಬೇಕಾಯಿತು.

ಕಾರ್ಡ್‌ ನವೀಕರಿಸುವ ಕೇಂದ್ರದಲ್ಲಿ ವಿದ್ಯುತ್‌ ಕಡಿತಗೊಂಡರೆ ಬದಲಿ ವ್ಯವಸ್ಥೆ ಕೂಡ ಇಲ್ಲದೆ ಗಂಟೆಗಟ್ಟಲೆ ಕಾಯಬೇಕಾಗಿದೆ. ಹತ್ತಿಪ್ಪತ್ತು ವಾರ್ಡಿನ ಜನರಿಗೆ ಒಂದೇ ಕೇಂದ್ರ ದಲ್ಲಿ ಶಿಬಿರ ಆಯೋಜಿಸಿ ಈ ಕೇಂದ್ರ ಗಳಿಗೆ ಎಲ್ಲರಿಗೂ ಆಗಮಿಸಲು ಅನನು ಕೂಲವಾಗುವುದು.

ಟೋಕನ್‌ ಪಡೆದು ಮರುದುನ ಮತ್ತೆ ಬರಬೇಕಾಗುವುದು.ಅಲ್ಲದೆ ನವೀಕರಣ ಕೇಂದ್ರಗಳಲ್ಲಿ ಕಾರ್ಡಿನ ಓರ್ವ ಸದಸ್ಯನ ಹೆಸರನ್ನು ಮಾತ್ರ ನವೀಕರಿಸಲಾಗುವುದು.ಉಳಿದ ಹೆಸರುಗಳನ್ನು ಕೆಲವು ತಿಂಗಳ ಬಳಿಕ ನವೀಕರಿಸುವುದಂತೆ.ಕಾರ್ಡಿನ ಎಲ್ಲರ ಹೆಸರನ್ನು ವಿಮೆಯಲ್ಲಿ ಒಳಪಡಿಸಲು ಹೆಚ್ಚಿನ ಸಮಯ ಬೇಕಾಗುವುದರಿಂದ ಇದೀಗ ಸಾಂಕೇತಿಕವಾಗಿ ಮಾತ್ರ ನವೀಕರಿಸಲಾಗುವುದೆಂಬ ಉತ್ತರ ಶಿಬಿರ ಸಂಘಾಟಕರದು.

ಆದರೆ ಕಾರ್ಡಿನಲ್ಲಿ ಒಳಪಟಿಟಿರುವ ಬಡರೋಗಿಗಳಿಗೆ ರೋಗ ತಗಲಿದಲ್ಲಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರೆಯ ದಂತಾಗಿದೆ.ಕರ್ನಾಟಕ ರಾಜ್ಯದಲ್ಲಿ ಕೇರಳದ ಆರೋಗ್ಯ ಕಾರ್ಡು ಕೇವಲ ಬೆರಳೆಣಿಕೆಯ ಒಡಂಬ ಡಿಕೆಯಾದ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆಗೆ ಅವಕಾಶವಿತ್ತು.ಆರೋಗ್ಯ ಕಾರ್ಡಿನಲ್ಲಿ ಮನೆಯವರೆಲ್ಲರೂ ಒಳಪಟ್ಟಿಲ್ಲವಾದ ಆದೆಷೋr ಕಾರ್ಡುಗಳಿವೆ.ಉಳಿದವರನ್ನು ಕಾರ್ಡಿನಲ್ಲಿ ಒಳಪಡಿಸಲು ಇನ್ನಷ್ಟು ತಿಂಗಳು ಕಾಯಬೇಕಂತೆ.ಬಡವರ ಕೇÒಮ ಯೋಜನೆಗೂ ಕನ್ನ ಹಾಕುವ ರಾಜ್ಯ ಆಡಳಿತ ರಾಜಕೀಯ ಮೇಲಾಟಕ್ಕೆ ಬಡ ಫಲಾನುಭವಿಗಳು ಹಿಡಿಶಾಪ ಹಾಕುತಿದ್ದಾರೆ.
ಆದುದರಿಂದ ಆರೋಗ್ಯ ಕಾರ್ಡಿನ ನವೀಕರಣದ ಅವಧಿಯನ್ನು ಜೂ. 20ಕ್ಕೆ ಸೀಮಿತಗೊಳಿಸದೆ ಕಾಲಾವಧಿ ಮುಂದುವರಿಸಬೇಕಾಗಿದೆ.

ಬಡವರನ್ನು ವಂಚಿಸಲಾಗಿದೆ ಆರೋಗ್ಯ ಕಾರ್ಡ್‌ ನವೀಕರಣದ ಶುಲ್ಕವನ್ನು 30 ರೂವಿನಿಂದ 50 ಕ್ಕೆ ಏರಿಸಿ ಬಡವರನ್ನು ವಂಚಿಸಲಾಗಿದೆ.ಕೇಂದ್ರ ಸರಕಾರ ಬಡವರಿಗಾಗಿ ಆಯುಷ್ಮಾನ್‌ಭವ ಕಾರುಣ್ಯ ಆರೋಗ್ಯವಿಮಾ ಯೋಜನೆಯನ್ನು ದೇಶದಾದ್ಯಂತ ಹಮ್ಮಿ ಬಡವರಿಗೆ ವರದಾನವಾಗಿದೆ.ಇದರಲ್ಲೂ ರಾಜಕೀಯ ಮಾಡಿದವರಿಗೆ ಮತದಾರರು ಸರಿಯಾದ ಬುದ್ಧಿ ಕಲಿಸಿದ್ದಾರೆ.ಇದನ್ನರಿತು ಇನ್ನಾದರೂ ಈ ಯೋಜನೆಗೆ ವಿಘ್ನ ಮಾಡದೆ ಸಮರ್ಪಕವಾಗಿ ನಿರ್ವಹಿಸಲು ಸರಕಾರ ಮುಂದಾಗಬೇಕಾಗಿದೆ.
-ರವಿಚಂದ್ರ ಕುಂಬಳೆ
ಯೋಜನೆಯ ಫಲಾನುಭವಿ

ವಿತರಣೆಯಾಗದೇ ಬಡವರಿಗೆ ವಂಚನೆ
ಪ್ರಧಾನಮಂತ್ರಿಯವರ ಕಾರ್ಯಾಲಯದಿಂದ ಲೋಕಸಭಾ ಚುನಾವಣೆಗೆ ಮುನ್ನವೇ ಬಿ.ಪಿ.ಎಲ್‌. ಪಡಿತರ ಕಾರ್ಡು ಹೊಂದಿದವರಿಗೆ ಆಯುಷ್ಮಾನ್‌ಭವ ಕಾರುಣ್ಯ ಆರೋಗ್ಯವಿಮಾ ಯೋಜನೆಯಲ್ಲಿ ಒಳಪಡಿಸಿರುವುದಾಗಿ ನೇರಪತ್ರ ಬಂದಿತ್ತು.ಆದರೆ ಈ ಪತ್ರ ಹೆಚ್ಚಿನವರಿಗೆ ಕೈ ಸೇರಿಲ್ಲವೆಂಬ ಆರೋಪ ಸಾಕಷ್ಟಿದೆ.ಕೆಲವು ಪತ್ರದಲ್ಲಿ ವಿಳಾಸ ಸರಿಯಾಗಿಲ್ಲದೆ ಮರಳಿಕಳುಹಿಸಲಾಗಿದೆ. ಇನ್ನು ಕೆಲವು ಅಂಚೆ ಕಚೇರಿ ಪೇದೆಗಳು ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಇದನ್ನು ಬಡವರಿಗೆ ವಿತರಿಸಿಲ್ಲವೆಂಬ ಆರೋಪವೂ ಇದೆ.ಇದರಿಂದಲಾಗಿ ಬಡವರಿಗೆ ವಂಚನೆಯಾಗಿದೆ .ಆದುದರಿಂದ ಅದೆಷೋr ಮಂದಿ ರೋಗಿಗಳು ಈ ವಿಮಾ ಯೋಜನೆಯ ಆರ್ಥಿಕ ನೆರವು ದೊರೆಯದೆ ವಂಚಿತರಾಗಿದ್ದಾರೆ.ಹಿಂದಿನ ಆರೋಗ್ಯ ಕಾರ್ಡಿನಲ್ಲಿ ಮಾರಕ ರೋಗಕ್ಕೂ ಕೇವಲ 30ಸಾವಿರ ರೂ. ಲಭ್ಯ.ಆಯುಷ್ಮಾನ್‌ ಕಾರ್ಡಿನಲ್ಲಿ 5 ಲಕ್ಷ ದೊರೆಯುತ್ತದೆ.

-ಅಚ್ಯುತ ಚೇವಾರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಸುಮಾರು 1800 ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರ ನೇಮಕಾತಿ ಅರ್ಹತೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರ...

  • ಧಾರವಾಡ: ಎಲ್ಲೆಂದರಲ್ಲಿ ಸತ್ತು ಬೀಳುತ್ತಿವೆ ಕಪ್ಪೆ, ಇಲಿ, ಹಾವು, ಪಕ್ಷಿಗಳು, ಸುರಿಯುವ ಮಳೆಯಲ್ಲೂ ಸುಟ್ಟು ಹೋಗುತ್ತಿದೆ ಹಸಿರು ಹುಲ್ಲು, ತಿಳಿಯದೇ ಎರಡು ಹಿಡಿ...

  • ಕೊರಟಗೆರೆ: ಸರ್ಕಾರದಿಂದ 1 ಲಕ್ಷ ರೂ. ಸಹಾಯಧನ ಕೂಡಿಸುವುದಾಗಿ ನಂಬಿಸಿ ತಾಲೂಕಿನ 650 ಸ್ತ್ರೀ ಶಕ್ತಿ ಸಂಘಗಳಿಂದ ಕೋಟ್ಯಾಂತರ ರೂ. ಪಡೆದು ಕೊರಟಗೆರೆ ವಲಯ ಮೇಲ್ವಿಚಾರಕ...

  • ಚಿಕ್ಕನಾಯಕನಹಳ್ಳಿ: ಸಣ್ಣ ವಹಿವಾಟಿನ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಚಿಲ್ಲರೆ ಸಮಸ್ಯೆ ಯಾಗುವುದು ಸಾಮಾನ್ಯ. ಇದರಿಂದ ವ್ಯಾಪಾರಿಗಳಿಗೆ ನಷ್ಟ ಅಥವಾ ಗ್ರಾಹಕರು...

  • ಮಾಗಡಿ: ಒಂದು ವರ್ಷದಲ್ಲಿ ಒಂದು ಕೋಟಿ ಸಸಿ ನೆಡಲು ರೋಟರಿ ಮಾಗಡಿ ಸೆಂಟ್ರಲ್ ಸಂಸ್ಥೆ ತೀರ್ಮಾನ ಮಾಡಿದೆ ಎಂದು ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಡಿ.ಎನ್‌. ಸಿದ್ದಲಿಂಗಯ್ಯ...

  • ರಾಮನಗರ: ನುರಿತ ಉಪನ್ಯಾಸಕರಿಂದ ಪಠ್ಯಕ್ರಮಗಳ ಉಪನ್ಯಾಸಗಳ ವೀಡಿಯೋ ರೆಕಾರ್ಡ್‌ಗಳನ್ನು ಯೂಟ್ಯೂಬ್‌ ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ನೂತನ ವ್ಯವಸ್ಥೆಯನ್ನು...