‘ಜೀವನದ ಗುರಿಯತ್ತ ಕಾಣುವ ಕನಸು ಎತ್ತರಕ್ಕೊಯ್ಯುತ್ತದೆ: ಹಂಸ


Team Udayavani, Mar 29, 2018, 9:50 AM IST

Hamsa-28-3.jpg

ಕಾಸರಗೋಡು: ಓರ್ವ ನಾಯಕ ಪರಿಪೂರ್ಣನಾಗಬೇಕಾದರೆ ಆತನಲ್ಲಿ ಉನ್ನತ ಮಟ್ಟದ ಕನಸು ಮನೆ ಮಾಡಿರಬೇಕು. ಜೀವನದಲ್ಲಿ ನಾವು ಕಾಣುವ ಕನಸು ನಮ್ಮನ್ನು ಎತ್ತರಕ್ಕೊಯ್ಯಬಲ್ಲದು. ‘ಟೈಮ್‌, ಎನರ್ಜಿ, ಮನಿ’ ಉಪಯೋಗಿಸಲು ನಾಯಕನಾದವ ಸಿದ್ಧನಿರಬೇಕು ಎಂದು ಪ್ರಸಿದ್ಧ ತರಬೇತುದಾರರಾದ ಹಂಸ ಪಾಲಕ್ಕಿ ತಿಳಿಸಿದರು. ಅವರು ಮಂಗಳವಾರ ಬದಿಯಡ್ಕದಲ್ಲಿ ವ್ಯಾಪಾರಿಗಳ ನೇತೃತ್ವ ಪರಿಶೀಲನಾ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ನಾಯಕನಾಗಬೇಕೆಂಬ ಹಂಬಲ ಎಲ್ಲರಲ್ಲೂ ಮನೆಮಾಡಿರುತ್ತದೆ. ನಮ್ಮ ಕುಟುಂಬಕ್ಕೆ, ನಮ್ಮ ಸಂಸ್ಥೆಗೆ ನಾವು ಲೀಡರ್‌ ಆಗಿರದಿದ್ದರೆ ನಮ್ಮನ್ನು ಲೀಡ್‌ ಮಾಡಲು ಬೇರೊಬ್ಬ ಬರುತ್ತಾನೆ. ಸಮಯ, ಶಕ್ತಿ, ಯುಕ್ತಿ ನಮ್ಮಲ್ಲಿರಬೇಕು. ಅಗತ್ಯಕ್ಕೆ ತಕ್ಕಂತಹ ಹಣವನ್ನು ಖರ್ಚುಮಾಡುವಲ್ಲಿ ನಾವು ಎಡವಬಾರದು. ನಮ್ಮೊಳಗಿನ ಸಂಘಟನಾತ್ಮಕ ಶಕ್ತಿಯನ್ನು ಹೊರತರಬೇಕು. ಸಂಘಟನೆಗಳನ್ನು ಅಳೆಯುವುದು ಅದರ ಉನ್ನತ ಕಾರ್ಯಗಳಿಂದ. ಪ್ರತಿ ಯೂನಿಟ್‌ ಸದಸ್ಯರೂ ಸಭೆ ಸೇರುವುದು, ಭಾಷಣ ಕಲೆಯನ್ನು ಕರಗತಮಾಡಿಕೊಳ್ಳಬೇಕು. ಸಂಘಟನೆಯ ಪ್ರಧಾನ ಆಧಾರ ಸ್ತಂಭವಾದ ಅಧ್ಯಕ್ಷನು ಆತನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದರೆ ಸಂಘಟನೆಯು ಬಲಗೊಳ್ಳುತ್ತದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಿಗೆ ಅಭಿನಂದನ ಸಮಾರಂಭವೂ ನಡೆಯಿತು. ವಲಯ ಅಧ್ಯಕ್ಷ ಕುಂಜಾರ್‌ ಮುಹಮ್ಮದ್‌ ಹಾಜಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಧ್ಯಕ್ಷ ಅಹಮ್ಮದ್‌ ಶರೀಫ್‌ ಅಭಿನಂದನೆಯನ್ನು ಸ್ವೀಕರಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಉತ್ತಮ ತರಬೇತುದಾರರು ನಮಗೆ ಉತ್ತಮ ಮಾರ್ಗದರ್ಶಕರೂ ಆಗಿದ್ದಾರೆ. ಇದರಿಂದ ನಮ್ಮ ಸದಸ್ಯರಿಗೆ ಅನುಕೂಲವಾಗಲಿದೆ. ಎಲ್ಲರೂ ಉತ್ತಮ ನಾಯಕರಾಗಿ ಸಂಘಟನೆಯನ್ನು ಮುನ್ನಡೆಸೋಣ ಎಂದು ಕರೆಯಿತ್ತರು. ಜಿಲ್ಲಾ ಕಾರ್ಯದರ್ಶಿ ಜೋಸ್‌ ತಯ್ಯಿಲ್‌ ಮಾತನಾಡುತ್ತಾ ಬದಲಾವಣೆಯು ನಮ್ಮನ್ನು ಪುರೋಗತಿಯತ್ತ ಕೊಂಡೊಯ್ಯುತ್ತದೆ. ತಾನೋರ್ವ ನಾಯಕನಾದರೆ ಮಾತ್ರ ನಿಜ ಜೀವನದಲ್ಲಿಯೂ ಜಯ ಸಾಧಿಸಲು ಸಾಧ್ಯ ಎಂದರು.

ಕೋಶಾಧಿಕಾರಿ ಮಾಹಿನ್‌ ಕೋಳಿಕ್ಕರ, ಜಿಲ್ಲಾ ಉಪಾಧ್ಯಕ್ಷ ಎಸ್‌.ಎನ್‌.ಮಯ್ಯ ಬದಿಯಡ್ಕ, ಪೈಕ ಅಬ್ದುಲ್ಲ ಕುಂಞಿ ಹಾಗೂ ತರಬೇತುದಾರ ಹಂಸ ಪಾಲಕ್ಕಿಯವರನ್ನು ಶಾಲು ಹೊದೆಸಿ ಅಭಿನಂದಿಸಲಾಯಿತು. ಅಬ್ದುಲ್‌ ರಹಿಮಾನ್‌ ಪೆರ್ಲ, ಬಾಲಕೃಷ್ಣ ರೈ ಮುಳ್ಳೇರಿಯ, ದಿವಾಕರ ಮಾವಿನಕಟ್ಟೆ, ಬಾಲಸುಬ್ರಹ್ಮಣ್ಯ ಭಟ್‌ ನೀರ್ಚಾಲು ಮಾತನಾಡಿದರು. ಮೊದು ಅಡೂರು ಸ್ವಾಗತಿಸಿ, ಗಣೇಶ ವತ್ಸ ಮುಳ್ಳೇರಿಯ ವಂದಿಸಿದರು. ಯೂತ್‌ ವಿಂಗ್‌ ಹಾಗೂ ವನಿತಾ ವಿಂಗ್‌ನ ಪದಾಧಿಕಾರಿಗಳೂ ಹಾಜರಿದ್ದರು.

ಚಿತ್ರ : ಅಶ್ವಿ‌ನಿ ಸ್ಟುಡಿಯೋ ಬದಿಯಡ್ಕ

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.