ಕಳ್ಳ ಮತದಾನ ಆರೋಪ: ಜಿಲ್ಲಾಧಿಕಾರಿಗಳಿಂದ ಆಯೋಗಕ್ಕೆ ವರದಿ ಸಲ್ಲಿಕೆ

Team Udayavani, Apr 29, 2019, 6:30 AM IST

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೊಳಪಟ್ಟ ಕಣ್ಣೂರು ಜಿಲ್ಲೆಗೆ ಸೇರಿದ ಕಲ್ಯಾಶೆÏàರಿ ಮತ್ತು ಪಯ್ಯನ್ನೂರು ವಿಧಾನಸಭಾ ಕ್ಷೇತ್ರಗಳ ಹಲವು ಮತಗಟ್ಟೆಗಳಲ್ಲಿ ಎಪ್ರಿಲ್‌ 23 ರಂದು ನಡೆದ ಚುನಾವಣೆ ವೇಳೆ ವ್ಯಾಪಕ ಕಳ್ಳಮತ ಚಲಾಯಿಸಿರುವ ವೀಡಿಯೋ ದೃಶ್ಯಗಳು ಹೊರ ಬಂದಿರುವಂತೆಯೇ ಆ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಟೀಕಾರಾಮ್‌ ಮೀಣಾ ತಿಳಿಸಿದ್ದಾರೆ.

ಇದು ಗಂಭೀರ ವಿಷಯವಾಗಿದೆ. ಆ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳಿಂದ ಸ್ಪಷ್ಟೀಕರಣ ಕೇಳಲಾಗಿದೆ. ಅದು ಲಭಿಸಿದ ಬಳಿಕ ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಇಂತಹ ದೂರುಗಳು ಇನ್ನೂ ಲಭಿಸದಲ್ಲಿ ಅದನ್ನು ಪರಿಶೀಲಿಸಲಾಗುವುದೆಂದು ಮೀಣಾ ತಿಳಿಸಿದ್ದಾರೆ. ಇದೇ ವೇಳೆ ಕಳ್ಳಮತ ನಡೆದಿದೆ ಎಂದು ಆರೋಪಿಸಿ ಎದ್ದ ದೂರುಗಳು ಕಣ್ಣೂರು ಜಿಲ್ಲೆಗೆ ಸೇರಿದ ಮತಗಟ್ಟೆಗಳಲ್ಲಾಗಿದೆ ಎಂದೂ, ಈ ಹಿನ್ನೆಲೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿರುವುದು ಕಣ್ಣೂರು ಜಿಲ್ಲಾಧಿಕಾರಿಗೆ ಸೇರಿದ ವಿಚಾರವಾಗಿದೆ ಎಂದು ಸ್ಪಷ್ಟಪಡಿಸಿ ಕಾಸರಗೋಡು ಚುನಾವಣಾಧಿಕಾರಿಯೂ ಆಗಿರುವ ಕಾಸರಗೋಡು ಜಿಲ್ಲಾಧಿಕಾರಿ ಡಾ|ಡಿ.ಸಜಿತ್‌ಬಾಬು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ. ಕಣ್ಣೂರು ಜಿಲ್ಲೆಯ ವ್ಯಾಪ್ತಿಗೊಳಪಟ್ಟ ಪ್ರದೇಶಗಳ ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಸಿಬ್ಬಂದಿಗಳನ್ನು ನೇಮಿಸುವುದು ಕಣ್ಣೂರು ಜಿಲ್ಲಾಧಿಕಾರಿಯಾಗಿದ್ದಾರೆ. ಮಾತ್ರವಲ್ಲ ಕಣ್ಣೂರು ಜಿಲ್ಲೆಯ ಚುನಾವಣಾಧಿಕಾರಿಯೂ ಅವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ನಡೆದಿರುವುದಾಗಿ ಆರೋಪಿಸಲಾಗುತ್ತಿರುವ ನಕಲಿ ಮತಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕಾಗಿರುವುದು ಅಲ್ಲಿನ ಜಿಲ್ಲಾಧಿಕಾರಿಯವರೇ ಆಗಿದ್ದಾರೆಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕಳ್ಳಮತ ನಡೆದಿರುವ ಆರೋಪ ಕಣ್ಣೂರು ಜಿಲ್ಲೆಗೆ ಸೇರಿದ ಮತಗಟ್ಟೆಗಳಲ್ಲಿ ಉಂಟಾಗಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಕಣ್ಣೂರು ಜಿಲ್ಲೆಯ ಚುನಾವಣಾಧಿಕಾರಿಯೂ ಆಗಿರುವ ಕಣ್ಣೂರು ಜಿಲ್ಲಾಧಿಕಾರಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ. ಕಳ್ಳಮತ ಚಲಾಯಿಸಲಾಗಿರುವುದಾಗಿ ತೋರಿಸಿ ಪ್ರಕಟಿಸಲಾಗಿರುವ ವೀಡಿಯೋ ದೃಶ್ಯಗಳು ಅಂತಹ ಮತಗಟ್ಟೆಗಳ ವೆಬ್‌ಕಾಸ್ಟ್‌ನಿಂದ ಲಭಿಸಿದ ಅಸಲಿ ದೃಶ್ಯಗಳಾಗಿವೆ ಎಂದುಅಧಿಕಾರಿಗಳೂ ಸ್ಪಷ್ಟಪಡಿಸಿದ್ದಾರೆ.

ವೀಡಿಯೋ ದೃಶ್ಯ
ಕಲ್ಯಾಶೆÏàರಿ ವಿಧಾನಸಭಾ ಕ್ಷೇತ್ರದ 19 ನೇ ನಂಬ್ರದ ಮತಗಟ್ಟೆ ಪಯ್ಯನ್ನೂರು ವಿಧಾನಸಭಾ ಕ್ಷೇತ್ರದ 136 ನೇ ನಂಬ್ರದ ಮತಗಟ್ಟೆಗಳಲ್ಲಿ ವ್ಯಾಪಕ ಕಳ್ಳಮತ ಚಲಾಯಿಸಿದ ವೆಬ್‌ಕಾಸ್ಟ್‌ ವೀಡಿಯೋ ದೃಶ್ಯಗಳನ್ನು ಕಾಂಗ್ರೆಸ್‌ ಹೊರ ತಂದಿದೆ.

ಕಲ್ಯಾಶೆÏàರಿಯ ಪಿಲಾತ್ತರ ಎಯುಪಿ ಶಾಲೆಯ 19 ನೇ ಮತಗಟ್ಟೆಯಲ್ಲಿ ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ ದೃಶ್ಯಗಳು ಗೋಚರಿಸಿದೆ. ನೇತಾರರೂ ಚಲಾಯಿಸುವ ಇತರ ಓಟು ಹೊಂದಿರುವ ಮತಗಟ್ಟೆಯಲ್ಲಿ ಪಂಚಾಯತ್‌ ಸದಸ್ಯ ಮತ್ತು ಸಿಪಿಎಂ ನ ಸ್ಥಳೀಯ ನೇತಾರ ಮತ ಚಲಾಯಿಸುವ ದೃಶ್ಯವೂ ಗೋಚರಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಶಿವಮೊಗ್ಗ: ಮಕ್ಕಳು ರಾಷ್ಟ್ರದ ಸಂಪತ್ತು. ಕಲಿಯುವ ವಯಸ್ಸಿನಲ್ಲಿ ಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಸಿ ದುಡಿಮೆಯಲ್ಲಿ ತೊಡಗಿಸುವುದು ಸಂವಿಧಾನದ ವಿರುದ್ಧವಾಗಿದೆ...

  • ಚಳ್ಳಕೆರೆ: ಹಿರಿಯೂರು, ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 20 ಗುತ್ತಿಗೆದಾರರಿಗೆ ವೇದಾವತಿ ನದಿಪಾತ್ರದ ಮರಳನ್ನು ಸರ್ಕಾರದ...

  • ಚಿಕ್ಕೋಡಿ: ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದಲ್ಲಿ ಸಮರ್ಪಕ ಬಸ್‌ ನಿಲ್ಲಿಸಬೇಕೆಂದು ಒತ್ತಾಯಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸಂಘಟನೆಯಿಂದ ಗುರುವಾರ...

  • ಚಿಕ್ಕಮಗಳೂರು: ಬೇಸಿಗೆ ಕಾಲ ಆರಂಭವಾಗುತ್ತಿದ್ದು, ಕಾಡು ಪ್ರಾಣಿಗಳ ಕುಡಿಯುವ ನೀರಿಗಾಗಿ ಜಲಮೂಲ ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ...

  • ಬಳ್ಳಾರಿ: ಶರಣರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು. ಅವರ ವ್ಯಕ್ತಿತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು...