ತಾತ್ಕಾಲಿಕ ಶೆಡ್‌ನಿಂದ ಸುಸಜ್ಜಿತ ಮನೆಗೆ 5 ಮಂದಿಯ ಕುಟುಂಬ

ಸಂಕಷ್ಟಕರ ಬದುಕಿಗೆ ಮುಕ್ತಿ ನೀಡಿದ ಲೈಫ್‌ ಮಿಷನ್‌ ಯೋಜನೆ

Team Udayavani, Sep 19, 2019, 5:11 AM IST

18KSDE1

ಕಾಸರಗೋಡು: ರಾಜ್ಯ ಸರಕಾರದ ಲೈಫ್‌ ಮಿಷನ್‌ ಯೋಜನೆ ಮೂಲಕ ಮನೆ ನಿರ್ಮಾಣಗೊಂಡಾಗ ನನಸಾದುದು 5 ಮಂದಿ ಸದಸ್ಯರ ಕುಟುಂಬದ ಅನೇಕ ವರ್ಷಗಳ ಕನಸು. ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್‌ನ ನೆಲ್ಲಿಯಡ್ಕ ನಿವಾಸಿ ಸಬೀನಾ ಅವರ ಕುಟುಂಬ ಈ ಮೂಲಕ ಸ್ವಂತ ಮನೆ ಪಡೆದುಕೊಂಡಿದೆ.

ಕಲಿಯುತ್ತಿರುವ ಮಕ್ಕಳು
ಪತಿ ಮಹಮ್ಮದ್‌ ಷರೀಫ್‌ ಮತ್ತು ಇನ್ನೂ ಶಾಲಾ ಕಲಿಕೆ ನಡೆಸುತ್ತಿರುವ ಇಬ್ಬರ ಸಹಿತ ಮೂವರು ಮಕ್ಕಳೊಂದಿಗೆ ಅನಾಥ ಸ್ಥಿತಿಯಲ್ಲಿ ಸಬೀನಾ ಬದುಕು ನಡೆಸುತ್ತಿದ್ದರು. ಹೃದ್ರೋಗಿಯಾಗಿರುವ ಮಹ್ಮಮದ್‌ ಷರೀಫ್‌ ಅವರಿಗೆ ದುಡಿಮೆಯ ಬದುಕು ಅಸಾಧ್ಯವಾಗಿದೆ. ಹಿಂದೆ ಕೂಲಿ ಕಾರ್ಮಿಕರಾಗಿದ್ದ ಅವರು ಇಂದು ಕೆಲಸಕ್ಕೆ ತೆರಳಲಾಗದ ಸ್ಥಿತಿಯಲ್ಲಿದ್ದಾರೆ.

ಹಿರಿಯ ಪುತ್ರ ಇರ್ಷಾದ್‌ ಚಾಯೋತ್‌ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿದ್ದಾನೆ. ದ್ವಿತೀಯಳಾದ ಪುತ್ರಿ ಅಸೀಫಾ ಕೀಳ್ಮಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಕಿರಿಯ ಪುತ್ರಿ ಷಿದಾಗೆ ಇನ್ನೂ ನಾಲ್ಕೂವರೆ ವರ್ಷ ಪ್ರಾಯ. ಬೀಡಿ ಕಾರ್ಮಿಕರಾಗಿರುವ ಸಬೀನಾ ಅವರು ದುಡಿದು ತರುವ ಸಣ್ಣ ಆದಾಯದಲ್ಲಿ ಈ ಕುಟುಂಬ ಹೊಟ್ಟೆಹೊರೆಯಬೇಕಿದೆ. ಸಬೀನಾರಿಗೆ ತಮ್ಮ ತಂದೆಯ ಮೂಲಕ ಲಭಿಸಿದ 10 ಸೆಂಟ್ಸ್‌ ಜಾಗದಲ್ಲಿ ತಾತ್ಕಾಲಿಕ ಶೆಡ್‌ ಒಂದನ್ನು ನಿರ್ಮಿಸಿ ಈ ಕುಟುಂಬ ಬದುಕು ಸವೆಸುತ್ತಿತ್ತು.

ಸ್ಥಳೀಯ ಗ್ರಾಮ ಪಂಚಾಯತ್‌ ನಡೆಸಿದ ಲೈಫ್‌ ಮಿಷನ್‌ ಯೋಜನೆ ಪ್ರಕಾರದ ಸಮೀಕ್ಷೆಯಲ್ಲಿ ಇವರ ಬವಣೆಯ ಬದುಕು ಗಮನಕ್ಕೆ ಬಂದಿತ್ತು. ಇಲ್ಲಿ ಅರ್ಹರ ಪಟ್ಟಿಗೆ ಸೇರಿದ ಸಬೀನಾ ಅವರಿಗೆ 400 ಚ.ಅ. ವಿಸ್ತೀರ್ಣದ ಮನೆ ನಿರ್ಮಾಣವಾಗಿದೆ. ಯೋಜನೆ ಪ್ರಕಾರದ ಮೂರು ಲಕ್ಷ ರೂ. ಸಹಿತ 4 ಲಕ್ಷ ರೂ. ವೆಚ್ಚದಲ್ಲಿ ಈ ಮನೆಯ ನಿರ್ಮಾಣವಾಗಿದೆ. ಎರಡು ಬೆಡ್‌ ರೂಂ ಗಳು, ಹಾಲ್‌, ಶೌಚಾಲಯ ಸಹಿತ ಸೌಲಭ್ಯಗಳಿರುವ ಮನೆ ಇದಾಗಿದೆ. ಇದು ಈ ಕುಟುಂಬದ ಮಂದಿಗೆ ಸಮಾಧಾನದ ನಿಟ್ಟುಸಿರು ತಂದಿದೆ.

ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್‌ನಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಸಮಾರಂಭದಲ್ಲಿ ರಾಜ್ಯ ಉದ್ದಿಮೆ- ಕ್ರೀಡಾ- ಯುವಜನ ಕಲ್ಯಾಣ ಸಚಿವ ಇ.ಪಿ. ಜಯರಾಜನ್‌ ಅವರು ಸಬೀನಾರಿಗೆ ಮನೆಯ ಕೀಲಿಕೈ ಹಸ್ತಾಂತರಿಸಿದರು. ತಮ್ಮ ಮಕ್ಕಳನ್ನು ಅವಚಿಕೊಂಡು ಆಗಮಿಸಿದ ಸಬೀನಾ ಕಣ್ಣೀರಿನೊಂದಿಗೆ ಕೀಲಿಕೈ ಪಡೆದುಕೊಂಡರು.

ಟಾಪ್ ನ್ಯೂಸ್

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.