ಕಾಸರಗೋಡಿನ ಅಂಧ ವಿದ್ಯಾರ್ಥಿಯ ಸಂಗೀತ‌ದ ಜೊತೆಗಿನ ಚಂದದ ಸಾಧನೆ

Team Udayavani, May 15, 2019, 7:25 PM IST

ಬದಿಯಡ್ಕ: ಕಣ್ಣುಗಳು ಹೊರಜಗತ್ತಿನ ಚೆಲುವನ್ನು ಕಾಣುವಲ್ಲಿ ವಿಫಲವಾದಾಗ ಅಂತರಂಗದಲ್ಲಿ ಸಂಗೀತದ ಹರಿವು ದೆ„ವದತ್ತವಾಗಿ ಪ್ರಾಪ್ತವಾದ ಬಾಲಕಿ ಕು.ವಿಷ್ಣುಪ್ರಿಯಾ. ವಿಶ್ವನಾಥ ಹಾಗೂ ಆಶಾದೇವಿ ದಂಪತಿಗಳ ಪ್ರಿಯ ಪುತ್ರಿ ವಿಷ್ಣುಪ್ರಿಯಾಳಿಗೆ ಸಂಗೀತವೇ ನೋಟ. ಉಸಿರು. ಈಕೆ ಶಾಸ್ತ್ರೀಯ ಸಂಗೀತ, ಜನಪದ ಹಾಡುಗಳು, ಭಾವಗೀತೆ, ಭಕ್ತಿಗೀತೆಗಳನ್ನು ನಿರರ್ಗಳವಾಗಿ ರಾಗ ಭಾವ ತಾಳ ಲಯದಿಂದ ಹಾಡಲಾರಂಭಿಸಿದರೆ ಕೇಳುಗ ಮೂಕಪ್ರೇಕ್ಷಕನಾಗುವುದರಲ್ಲಿ ಸಂದೇಹವಿಲ್ಲ. ಮನಸುಗಳನ್ನು ತನ್ನ ರಾಗಸುಧೆಯಲ್ಲಿ ಹಿಡಿದಿಡುವ ಸರಸ್ವತಿಯ ವರಪುತ್ರಿ ವಿಷ್ಣುಪ್ರಿಯಾ 2018-19ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್‌ ಗ್ರೇಡ್‌ ಪಡೆದು ಕಲಿಕೆಯಲ್ಲೂ ತಾನು ಮುಂದು ಎಂದು ಸಾಭೀತು ಪಡಿಸಿರುತ್ತಾಳೆ.

ದೆ„ವದತ್ತವಾದ ಸ್ವರಮಾಧುರ್ಯ, ಸಂಗೀತಕ್ಕೆ ಕಿವಿಯಾಗುವ ಹಂಬಲ, ಗಾಯನಕ್ಕೆ ಮಿಡಿಯುವ ಮನಸನ್ನು ಅಥೆ„ìಸಿಕೊಂಡ ಸಂಗೀತ ವಿದೂಷಿ ಶ್ರೀಮತಿ ಉಷಾ ಭಟ್‌ ಮಜೆಕ್ಕಾರ್‌ ವಿಷ್ಣುಪ್ರಿಯಾಳನ್ನು ತನ್ನ ಶಿಷ್ಯೆಯಾಗಿ ಸ್ವೀಕರಿಸಿ ಉಚಿತವಾಗಿ ಸಂಗೀತ ಪಾಠವನ್ನು ಪ್ರಾರಂಭಿಸಿದರು. ಎರಡನೇ ತರಗತಿಯಲ್ಲಿ ಓದುತ್ತಿದ್ದ ವಿಷ್ಣುಪ್ರಿಯಾಳ ಸಂಗೀತ ಯಾತ್ರೆ ಇಂದು ಈಕೆಯನ್ನು ಓರ್ವ ಉತ್ತಮ ಗಾಯಕಿಯನ್ನಾಗಿ ರೂಪಿಸಿದೆ. ಉಷಾ ಭಟ್‌ ಅವರ ಸಂಪೂರ್ಣ ಬೆಂಬಲ, ಹಾಗೂ ಪೊÅàತ್ಸಾಹ ವಿಷ್ಣುಪ್ರಿಯಾಳೆಂಬ ಗಾಯಕಿಯನ್ನು ಗಡಿನಾಡಿಗೆ ಪರಿಚಯಿಸುವುದಲ್ಲಿ ಪ್ರಮುಖ ಪಾತ್ರವಹಿಸಿದೆ.

ಮುಂದೆ ಕೊಝಿಕ್ಕೋಡು ಆಕಾಶವಾಣಿಯ ಎ ಗ್ರೇಡ್‌ ಕಲಾವಿದರಾದ ಶ್ರೀನಿವಾಸನ್‌. ವಿದ್ಯಾನಗರ ಅಂಧ ವಿದ್ಯಾಲಯದಲ್ಲಿ ಕಲಿಯುತ್ತಿದ್ದ ವಿಷ್ಣುಪ್ರಿಯಾಳಿಗೆ ಉಚಿತವಾಗಿ ಸಂಗೀತ ಪಾಠಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡರು. ಪ್ರಸ್ತುತ ಜಿ.ವಿ.ಎಸ್‌.ಎಸ್‌ ಕಾರಡ್ಕ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಈಕೆ ಎರಡನೇ ತರಗತಿಯಿಂದ ಏಳನೇ ತರಗತಿ ವರೆಗೆ ಸತತವಾಗಿ ಕೇರಳ ರಾಜ್ಯ ಸ್ಪೆಷಲ್‌ ಸ್ಕೂಲ್‌ ಕಲೋತ್ಸವದಲ್ಲಿ ಗಾಯನ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸುತ್ತಾ ಬಂದಿರುತ್ತಾಳೆ. ಏಳನೇ ತರಗತಿಯಲ್ಲಿ ಐದು ಸ್ಪರ್ಧೆಗಳಲ್ಲಿ (ಸಮೂಹ ಗಾಯನ, ಶಾಸ್ತ್ರೀಯ ಸಂಗೀತ, ಮಲಯಾಳಂ ಪದ್ಯ ಕಂಠಪಾಠ, ಸುಗಮಸಂಗೀತ ಹಾಗೂ ಹರಿಕಥೆ) ಎ ಗ್ರೇಡಿನೊಂದಿಗೆ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿರುತ್ತಾಳೆ.

ಕಳೆದೆರಡು ವರ್ಷಗಳಿಂದ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡ ವಿಷ್ಣುಪ್ರಿಯ ಈ ಬಾರಿ ಕಥಕ್ಕಳಿ ಸಂಗೀತದಲ್ಲೂ ಎ ಗ್ರೇಡ್‌ ಪಡೆದಿರುತ್ತಾಳೆ.

ಗುರು ಉಷಾ ಭಟ್‌ ಜತೆಯಲ್ಲಿ ಹಲವಾರು ಕಡೆಗಳಲ್ಲಿ ಕಛೇರಿಯನ್ನು ನಡೆಸಿರುವ ವಿಷ್ಣುಪ್ರಿಯಳ ಕಛೇರಿಯೊಂದಿಗೆ ಮಹಾಲಕ್ಷಿ¾àಪುರಂ ಮಹಿಷಮರ್ಧಿನಿ ಕ್ಷೇತ್ರದಲ್ಲಿ ಕಳೆದೆರಡು ವರ್ಷಗಳಿಂದ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಹಿಂದೆ ಉಷಾ ಭಟ್‌ ಅವರ ಕಛೇರಿಯೊಂದಿಗೆ ಉತ್ಸವ ಪ್ರಾರಂಭವಾಗುತ್ತಿತ್ತು. ಈ ವರ್ಷ ಬಹಳ ಚಿಕ್ಕ ಪ್ರಾಯದಲ್ಲೇ ಸಂಗೀತ ಕಛೇರಿಯನ್ನು ನಡೆಸುವ ಈ ಪ್ರಬುದ್ಧ ಪ್ರತಿಭೆಯ ಗಾಯನವನ್ನು ಕೇಳಿ ಭಾವಪರವಶರಾದ ಕಣ್ಣೂರು ಯಂ.ಪಿ. ಶ್ರೀಮತಿ ಟೀಚರ್‌ ಈಕೆಯನ್ನು ಎತ್ತಿಹಿಡಿದು ಅಭಿನಂಧಿಸಿದ್ದಾರೆ. ಮಾತ್ರವಲ್ಲದೆ ಪ್ರತಿತಿಂಗಳು ಸಾವಿರ ರೂಪಾಯಿಯಂತೆ ಈಕೆಗೆ ಮೀಸಲಿಡುತ್ತಿದ್ದಾರೆ. ಈ ಪುಟ್ಟ ಹುಡುಗಿಯ ಗಾಯನದ ಮೋಡಿ ಅವಳಿಗೆ ಇನ್ನಷ್ಟು ಕಛೇರಿಗಳನ್ನು ನಡೆಸುವ ಅವಕಾಶದ ಬಾಗಿಲನ್ನು ತೆರೆಯುತ್ತಿರುವುದು ಸಂತಸದ ವಿಷಯ.

ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯು ತನ್ನ ಮುಖಪುಟದಲ್ಲಿ ವಿಷ್ಣುಪ್ರಿಯಾಳ ಕುರಿತು ಸಚಿತ್ರ ಲೇಖನವನ್ನು ಪ್ರಕಟಿಸಿತ್ತು. ಇದನ್ನು ಗಮನಿಸಿದ ಹೆಸರಾಂತ ಉದ್ಯಮಿ, ಮƒದಂಗವಾದಕರೂ ಆಗಿರುವ ಕಸ್ತೂರಿರಂಗನ್‌ ಪತ್ರಿಕಾ ಕಛೇರಿಗೆ ತಲುಪಿ ಒಂದೂವರೆ ಲಕ್ಷ ರೂಪಾಯಿ ಧನಸಹಾಯ ನೀಡಿದ್ದು ಪತ್ರಿಕೆಯ ಉದ್ಯೋಗಿಗಳೇ ಈ ಮೊತ್ತವನ್ನು ಈಕೆಗೆ ತಂದೊಪ್ಪಿಸಿದ್ದರು. ಈ ವರ್ಷ ಶಾಲಾ ಕಲೋತ್ಸವದ ಸಂದರ್ಭದಲ್ಲಿ ಕಸ್ತೂರಿರಂಗನ್‌ ವಿಷ‌್ಣುಪ್ರಿಯಾಳನ್ನು ಭೇಟಿಮಾಡಿ ಹರಸಿರುತ್ತಾರೆ. ಕ್ರೀಡಾ ತಾರೆ ಚಿತ್ರಾ ಅವರು ತನಗೆ ಕಸ್ತೂರಿರಂಗನ್‌ ಅವರು ಬಹುಮಾನವಾಗಿ ನೀಡಿದ ಒಂದು ಲಕ್ಷ ರೂಪಾಯಿಯಿಂದ ಐವತ್ತು ಸಾವಿರ ರೂಪಾಯಿಗಳನ್ನು ಈಕೆಗೆ ನೀಡಿರುವುದು ಇನ್ನೊಂದು ವಿಶೇಷ. ಈ ಸಂದರ್ಭದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಚಿತ್ರಾ ಅವರನ್ನು ಶಾಲೆಗೆ ಕರೆತರಲಾಗಿತ್ತು.

ಈಗಾಗಲೇ ಸಿ.ಸಿ.ಆರ್‌.ಟಿ. ಸ್ಕೋಲರ್‌ಶಿಪ್‌ಗಿರುವ ಅರ್ಹತೆಯನ್ನೂ ಪಡೆದಿರುವ ಈಕೆಗೆ ಈ ಮೂಲಕ ದೆಹಲಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಅವಕಾಶ ದೊರಕ್ಕಿತ್ತಾದರೂ ರಾಜ್ಯ ಶಾಲಾ ಕಲೋತ್ಸವದಲ್ಲಿ ಭಾಗವಹಿಸ ಬೇಕಾಗಿರುವುದರಿಂದ ಆ ಅವಕಾಶವನ್ನು ಕೈಬಿಡಬೇಕಾಯಿತು. ವಿಷ್ಣುಪ್ರಿಯಾಳ ತಂದೆ ಹƒದ್ರೋಗಿಯಾಗಿದ್ದು ದುಡಿಯುವ ಸ್ಥಿತಿಯಲ್ಲಿಲ್ಲ. ತಾಯಿ ಬಿ.ಎಡ್‌. ಪಧವೀದರೆಯಾಗಿದ್ದರೂ ದೃಷ್ಟಿದೋಷದಿಂದಾಗಿ ಇದುವರೆಗೆ ಉದ್ಯೋಗ ದೊರೆಯದೆ ವಿಷ್ಣುಪ್ರಿಯಾಳನ್ನು ಆಶ್ರಯಿಸಿ ಬದುಕಬೇಕಾದ ಪರಿಸ್ಥಿತಿ.

ಊರ ಜನರು ತಮ್ಮ ಮಗಳಂತೆ ಕೊಂಡಾಡುವ ಈ ಬಾಲಕಿಗೆ ಬೆಳಕಾಗಿ ಬಂದವರು ಅವರ ಸಂಬಂಧಿ ವಿಶ್ವನಾಥ ಅವರು. ಕೇರಳ ಕೆ.ಎಸ್‌.ಆರ್‌.ಟಿ.ಸಿ. ಕಂಡೆಕ್ಟರ್‌ ಆಗಿರುವ ಇವರು ಕಾರ್ಯಕ್ರಮಗಳಿಗೆ, ಸ್ಪರ್ಧಾ ವೇದಿಕೆಗಳಿಗೆ ಈಕೆಯನ್ನು ಕರೆದೊಯ್ಯುವ ಪೂರ್ಣ ಜವಾಬ್ದಾರಿಯನ್ನು ಸ್ವ ಇಚ್ಛೆಯಿಂದ ಹೊತ್ತಿದ್ದು ಪ್ರೀತಿಯಿಂದ ಅತ್ಯಂತ ಅಭಿಮಾನದಿಂದ ಈಕೆಯನ್ನು ಮುನ್ನಡೆಸುತ್ತಿದ್ದಾರೆ. ಸಮಸ್ಯೆಗಳನ್ನೂ ತನ್ನಿಂದಾದ ರೀತಿಯಲ್ಲಿ ಹೋಗಲಾಡಿಸಲು ನೆರವಾಗುತ್ತಿದ್ದಾರೆ.

ಶಂಕರ ಟಿವಿ ನಡೆಸಿದ ಸಂಗೀತ ಯಾತ್ರೆಯಲ್ಲಿ ಭಾಗವಹಿಸಿದ್ದ ವಿಷ್ಣುಪ್ರಿಯಾ ಫÉವರ್ ಚಾನಲ್‌ ಕಾಮಿಡಿ ಉತ್ಸವ ಕಾರ್ಯಕ್ರಮದಲ್ಲೂ ಭಾಗವಹಿಸುವ ಅರ್ಹತೆಯನ್ನು ಗಳಿಸಿದ್ದು ಸ್ಪೆಷಲ್‌ ಸೆಗೆ¾ಂಟ್‌ ವಿಭಾಗದಲ್ಲಿ ತನ್ನ ಸಂಗೀತ ಧಾರೆಯನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾಳೆ. ಈಕೆಯ ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಅಭಿನಂಧಿಸಿದ್ದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪಯಣ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧ್ಯಕ್ಷರಾದ ನಾಗಲಕ್ಷಿ¾à ಬಾಯಿಯವರು ಈಕೆಯನ್ನು ಸನ್ಮಾನಿಸಿ ಅಭಿನಂದಿಸಿರುತ್ತಾರೆ.

ವಿಷ್ಣುಪ್ರಿಯಾಳ ತಮ್ಮ ಅಭಿಷೇಕ್‌ ಈಕೆಯ ಸಹಪಾಠಿಯಾಗಿದ್ದು ಆತನೂ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್‌ ಪಡೆದು ಉತ್ತೀರ್ಣನಾಗಿದ್ದಾನೆ. ಶಾಲೆಗೆ ಹೋಗುವುದರಿಂದ ಹಿಡಿದು ಎಲ್ಲದರಲ್ಲಿಯೂ ಅಕ್ಕನಿಗೆ ತಮ್ಮ ಸಾಥ್‌ ನೀಡುತ್ತಾನೆ.

ನೋಟ ಮೌನವಾದರೂ ಮಾತು ಹಾಡಾಗುವ ಈ ಅಪ್ರತಿಮ ಪ್ರತಿಭಾವಂತ ಸಾಧಕಿಯ ಜೀವನವು ಸಂಗೀತದಂತೆ ಅಡೆತಡೆಗಳಿಲ್ಲದೆ ಗೆಲುವಿನ ಹಾದಿಯಲ್ಲಿ ಮುಂದುವರಿಯಲಿ ಎಂಬುದು ನಮ್ಮ ಹಾರೈಕೆ.

– ಅಖೀಲೇಶ್‌ ನಗುಮುಗಂ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ