ಯಕ್ಷರಂಗದಲ್ಲಿ ಉತ್ತಮ ಅವಕಾಶ: ಮಂಜುನಾಥ

Team Udayavani, Oct 11, 2019, 5:36 AM IST

ಬದಿಯಡ್ಕ: ಹಿಂದಿನ ಕಾಲದಲ್ಲಿ ಕಲಾವಿದನಾಗುವುದು ಎಂಬುದು ಒಂದು ಸವಾಲಾಗಿತ್ತು. ಯಾಕೆಂದರೆ ಇಂದಿನಂತೆ ಸೌಕರ್ಯಗಳಿರಲಿಲ್ಲ.

ಪ್ರೋತ್ಸಾಹವೂ ಇಲ್ಲ. ಆದರೆ ನಮ್ಮೊಳಗೆ ಯಕ್ಷಗಾನ ಬಗ್ಗೆ ಅಪಾರವಾದ ಆಸಕ್ತಿ, ಆಕರ್ಷಣೆ ಮತ್ತು ಕಲಿಯುವ ತುಡಿತವಿತ್ತು. ಕಲಿಸುವವರಿಲ್ಲದ ಕಾಲದಲ್ಲಿ ಕಲಿತವರು ನಾವು. ಇಂದು ಧಾರಾಳ ಅವಕಾಶಗಳಿವೆ. ಅದನ್ನು ಸದುಪಯೋಗ ಪಡಿಸುವತ್ತ ಹೆಚ್ಚು ಗಮನ ಹರಿಸಬೇಕು. ಆ ಮೂಲಕ ಕಲೆಯನ್ನು ಹಸಿರಾಗಿಸಬೇಕು ಎಂದು ಬದಿಯಡ್ಕ ಪಂಚಾಯತ್‌ನ ಮಾಜಿ ಸದಸ್ಯ ಮಂಜುನಾಥ ಮಾನ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕೊಲ್ಲಂಗಾನ ಶ್ರೀನಿಲಯ ಶ್ರೀ ದುರ್ಗಾಪರಮೆಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಲಾದ ಯಕ್ಷ ದಶ ವೈಭವದ ಗೌರವಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ನರಸಿಂಹ ಭಟ್‌ ಬೆಟ್ಟಂಪಾಡಿಯವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸುಂದರ ಶೆಟ್ಟಿ ಕೊಲ್ಲಂಗಾನ, ಕರ್ನಾಟಕ ಜಾನಪದ ಪರಿಷತ್ತಿನ ಗೌರವ ಸಲಹೆಗಾರರಾದ ಪ್ರೊ| ಶ್ರೀನಾಥ್‌, ಸುಬ್ರಹ್ಮಣ್ಯ ಯಕ್ಷಗಾನ ಕಲಾ ಸಂಘದ ಕಾರ್ಯದರ್ಶಿ ರವಿಶಂಕರ ಶೆಟ್ಟಿ ಕೊಲ್ಲಂಗಾನ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉತ್ಸವದಂಗವಾಗಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ ನಡೆಸಿಕೊಟ್ಟ ಯಕ್ಷಗಾನ ಬಯಲಾಟ ಚಕ್ರವರ್ತಿ ದಶರಥ ಜನಮನ ಸೂರೆಗೊಂಡಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ