55 ಕೇಂದ್ರಗಳಲ್ಲಿ ಹಸುರು ಯೋಜನೆ: ಸಚಿವ

ಹಸುರು ಉದ್ಯಾನ ಕಾರ್ಯಕ್ರಮ ಉದ್ಘಾಟನೆ

Team Udayavani, Jun 8, 2019, 6:00 AM IST

ಬದಿಯಡ್ಕ: ಹಸಿರು ಮಿಷನ್‌ ಆಶ್ರಯದಲ್ಲಿ ಸಿದ್ಧಪಡಿಸುವ ಹಸುರು ಉದ್ಯಾನದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕಾಞರಪಳ್ಳಿ ಜಿಎಚ್‌ಎಸ್‌ನಲ್ಲಿ ರಾಜ್ಯ ಕಂದಾಯ ಮತ್ತು ಭವನ ನಿರ್ಮಾಣ ಖಾತೆ ಸಚಿವ ಇ. ಚಂದ್ರಶೇಖರನ್‌ ಉದ್ಘಾಟಿಸಿದರು.

ಮಡಿಕೈ ಗ್ರಾ.ಪಂ., ಜಿಲ್ಲಾ ಸಾಮಾ ಜಿಕ ಅರಣ್ಯೀಕರಣ ವಿಭಾಗ, ಹಸಿರು ಕೇರಳ ಮಿಷನ್‌, ಜೀವ ವೈವಿಧ್ಯ ಮಂಡಳಿ, ಎಂ.ಜಿ.ಎನ್‌.ಆರ್‌.ಇ.ಜಿ., ಕುಟುಂಬಶ್ರೀ ಮೊದಲಾದವುಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆ ಯಿತು. ಬರಿದಾಗುತ್ತಿರುವ ಗ್ರಾಮೀಣ ಸ್ವರೂಪವನ್ನು ಪುನಃ ಸ್ಥಾಪಿಸಲು ಮತ್ತು ನಗರ ಪ್ರದೇಶಗಳಲ್ಲಿ ಹಸುರೀಕರಣದ ಜೀವ ವೈವಿಧ್ಯವನ್ನು ಪುನಃ ಸ್ಥಾಪಿಸುವುದೇ ಇದರ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 20 ಪಂಚಾಯತ್‌ಗಳಲ್ಲಿ ಆಯ್ಕೆ ಮಾಡಿದ 55 ಕೇಂದ್ರಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.

ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಸೂಕ್ತ ಸ್ಥಳಗಳನ್ನು ಪತ್ತೆ ಹಚ್ಚಿ ಉದ್ಯಾನ ಸೃಷ್ಟಿಸುವುದು. ಅರಣ್ಯ ಮಾದರಿಯಲ್ಲಿ ಸಸಿ ನೆಟ್ಟು ರಕ್ಷಿಸುವುದು. ಈ ರೀತಿ ಯಲ್ಲಿ ಅರಣ್ಯವನ್ನು ಸೃಷ್ಟಿಸುವ ಮೂಲಕ ವಾತಾವರಣದ ತಾಪವನ್ನು ನಿಯಂತ್ರಿಸುವುದರೊಂದಿಗೆ ಪಕ್ಷಿಗಳ ಸಹಿತ ಇತರ ವನ್ಯಜೀವಿಗಳಿಗೆ ಆವಾಸ ಸ್ಥಾನವನ್ನು ಒದಗಿಸಿದಂತಾಗುವುದು. ಜೀವ ವೈವಿಧ್ಯ ಉದ್ಯಾನಗಳು, ಕಾಡುಗಳ ಸಂರಕ್ಷಣೆ, ಪುನರ್‌ಜೀವ, ಜಲಸಂರಕ್ಷಣೆ ಮೊದಲಾದವುಗಳು ಯೋಜನೆಯ ಪ್ರಧಾನ ಅಂಶಗಳಾಗಿವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಞಂಗಾಡು ಬ್ಲಾಕ್‌ ಪಂಚಾಯತಿ ಅದ್ಯಕ್ಷ ಎಂ. ಗೌರಿ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ನಡೆದ ಹಲಸು ಫೆಸ್ಟ್‌ ಉದ್ಘಾಟನೆಯನ್ನು ಮಾಜಿ ಸಂಸದ ಪಿ. ಕರುಣಾಕರನ್‌ ನಿರ್ವಹಿಸಿದರು.

ನಕ್ಷತ್ರ ಅರಣ್ಯೀಕರಣ ಸಾರ್ವಜನಿಕ ಬನ ಸಂರಕ್ಷಣೆಯ ಉದ್ಘಾಟನೆಯನ್ನು ಎಂ.ಗೌರಿ, ಔಷಧ ಸಸ್ಯ ತೋಟವನ್ನು, ಫೋಟೋ ಸಿನಿಮಾ ಪ್ರದರ್ಶನವನ್ನು ಮಡಿಕೈ ಗ್ರಾ.ಪಂ. ಅಧ್ಯಕ್ಷ ಸಿ. ಪ್ರಭಾ ಕರನ್‌ ನಿರ್ವಹಿಸಿದರು. ಕೆ. ಪ್ರಮೀಳಾ, ಎಂ. ಕುಂಞಂಬು, ಶಶೀಂದ್ರನ್‌ ಮಡಿಕೈ, ಎಂ.ಅಬ್ದುಲ್‌ ರಹಮಾನ್‌, ಸಿ. ಇಂದಿರಾ, ಓಮನಾ, ಪಿ.ಕೆ. ಅನೂಪ್‌, ವಿ.ಕೆ. ದಿಲೀಪ್‌, ಎಂ.ಪಿ. ಸುಬ್ರಹ್ಮಣ್ಯನ್‌, ಟಿ.ಟಿ. ಸುರೇಂದ್ರನ್‌, ಪಿ. ಕೃಷ್ಣನ್‌, ಪಿ. ಪ್ರಸೀತಾ, ಬೇಬಿ ಬಾಲಕೃಷ್ಣನ್‌, ಎಂ. ರಾಜನ್‌ ಮತ್ತಿತರರು ಭಾಗವಹಿಸಿದ್ದರು.

ಕಾಸರಗೋಡು ಫಾರೆಸ್ಟ್‌ ಸಹಾಯಕ ಅಧಿಕಾರಿ ಪಿ. ಬಿಜು ಸ್ವಾಗತಿಸಿ, ಸಂಘಟಕ ಸಮಿತಿ ಸಂಚಾಲಕ ಸನಲ್‌ ಷಾ ಮಾಸ್ಟರ್‌ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲೂ ಅಕ್ಟೋಬರ್‌ರೊಳಗೆ ಕಡ್ಡಾಯವಾಗಿ ಶೌಚಾಲಯಗಳನ್ನು ಹೊಂದಲೇಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ನಾಲ್ಕು...

  • ಹೊಸದಿಲ್ಲಿ: ಕರ್ನಾಟಕದ 10 ಮಂದಿ ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಅಂಗೀಕಾರದ ಬಗ್ಗೆ ನಿರ್ಧಾರ ಕೈಗೊಳ್ಳಲು ಸ್ಪೀಕರ್‌ ರಮೇಶ್‌ ಕುಮಾರ್‌ ವಿಳಂಬ ಮಾಡುತ್ತಿದ್ದಾರೆ...

  • ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರದ ಅಗ್ನಿಪರೀಕ್ಷೆಯಾದ ವಿಶ್ವಾಸಮತ ಯಾಚನೆಗೆ ಗುರುವಾರ ಸಮಯ ನಿಗದಿಪಡಿಸಲಾಗಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆಗಳು ತಾರ್ಕಿಕ...

  • ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಶಾಸಕ ಆರ್‌. ರೋಷನ್‌ ಬೇಗ್‌ ಅವರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣ...

  • ಅರಂತೋಡು: ತೊಡಿಕಾನ ಗ್ರಾಮದ ಶಾಲಾ ಬಳಿಯ ಅಂಗನವಾಡಿ ಕಟ್ಟಡ ಕಾಮಗಾರಿ ಹಲವು ವರ್ಷಗಳ ಬಳಿಕ ಪೂರ್ಣಗೊಂಡಿದೆ. ಒಂದು ವಾರದಲ್ಲಿ ಇಲಾಖೆಗೆ ಹಸ್ತಾಂತರ ನಡೆಯಲಿದೆ. 2015ನೇ...

  • ಮಂಜೇಶ್ವರ: ಬರಗಾಲದ ಅಪಾಯ ಎದುರಿಸುತ್ತಿರುವ ನಾಡಿಗೆ ನೀರಿನ ಸಿಂಚನ ನೀಡಬಲ್ಲ ಬಿದಿರನ್ನು ಕಾಸರಗೋಡು ಜಿಲ್ಲೆಯನ್ನು ಬಿದಿರಿನ ರಾಜಧಾನಿಯಾಗಿ ಪರಿವರ್ತಿಸುವ...