ಅಪಾಯ ಭೀತಿಯಲ್ಲಿ ಅಚ್ಚಾಂತುರ್ತಿ-ಕೋಟ್ಟಪ್ಪುರಂ ಕಾಲ್ಸೇತುವೆ 

Team Udayavani, Jul 10, 2018, 6:00 AM IST

09ksde4.jpg

ಚೆರ್ವತ್ತೂರಿನ ಅಚ್ಚಾಂತುರ್ತಿ ಮತ್ತು ನೀಲೇಶ್ವರದ  ಕೋಟ್ಟಪ್ಪುರಂ ಸಂಪರ್ಕಿಸುವ ಈ ಕಾಲ್ಸೇತುವೆಯನ್ನು 2000ನೇ ಇಸವಿಯಲ್ಲಿ ನಿರ್ಮಿಸಲಾಗಿತ್ತು. 310 ಮೀಟರ್‌ ಉದ್ದವಿರುವ ಕಾರ್ಯಂಗೋಡು ಹೊಳೆಗೆ ಸೇತುವೆ ನಿರ್ಮಿಲಾಗಿದ್ದು, ರಾಜ್ಯದಲ್ಲೇ ಅತ್ಯಂತ ಉದ್ದದ ಕಾಲ್ಸೇತುವೆ ಎಂಬ ಖ್ಯಾತಿಯನ್ನೂ ಪಡೆದಿದೆ. ಕಾಲ್ಸೇತುವೆಗೆ ಬಳಸಿರುವ ಇದಿಗ ಕ್ಷಯಿಸಿರುವ ಹಲಗೆಗಳನ್ನು, ಕಂಬಗಳನ್ನು ದುರಸ್ತಿಗೊಳಿಸಬೇಕು ಇಲ್ಲವೇ ಹಲಗೆ ಮತ್ತು ಕಂಬಗಳನ್ನು ಬದಲಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾಸರಗೋಡು: ಅಚ್ಚಾಂತುರ್ತಿ ದ್ವೀಪ ನಿವಾಸಿಗಳನ್ನು ದಡಕ್ಕೆ ಸೇರಿಸುವ ಅಚ್ಚಾಂತುರ್ತಿ – ಕೋಟ್ಟಪ್ಪುರಂ ಕಾಲ್ಸೇತುವೆ ಅಪಾಯದ ಭೀತಿಯಲ್ಲಿದೆ. ಅಚ್ಚಾಂತುರ್ತಿ – ಕೋಟ್ಟಪ್ಪುರಂ ಕಾಲ್ಸೇತುವೆ ನಡು ಭಾಗ ಕೆಳಕ್ಕೆ ಕುಸಿದಿದೆ. 

ಭಾರೀ ಮಳೆಯ ಹಿನ್ನೆಲೆಯಲ್ಲಿ ನೀರಿನ ಹರಿವು ಅಧಿಕವಾದುದರಿಂದ ಕಾಲ್ಸೇತುವೆಯ ಮಧ್ಯ ಭಾಗ ಕೆಳಕ್ಕೆ ಕುಸಿದಿದೆ. ಹೊಳೆಯಲ್ಲಿ ಹರಿದು ಬಂದ ಭೀಮ ಗಾತ್ರದ ಮರಗಳ ರೆಂಬೆಗಳು ಹಾಗೂ ಇತರ ವಸ್ತುಗಳು ಕಾಲ್ಸೇತುವೆಯ ಕಂಬಕ್ಕೆ ಢಿಕ್ಕಿ ಹೊಡೆದು ಸೇತುವೆಯ ಮಧ್ಯಭಾಗ ಪಕ್ಕಕ್ಕೆ ವಾಲಲು ಕಾರಣವಾಗಿದೆ.

ಈ ಕಾಲ್ಸೇತುವೆಯಲ್ಲಿ  ಅತ್ಯಗತ್ಯವಿರುವ ಮಂದಿ ಮಾತ್ರವೇ ಸಾಗುತ್ತಾರೆ. ಇತ್ತೀಚೆಗೆ ನೂತನವಾಗಿ ನಿರ್ಮಾಣವಾಗಿರುವ ಸೇತುವೆಯ ಕಾರಣದಿಂದ ಬಹುತೇಕ ಜನರು ಹೊಸ ಸೇತುವೆಯನ್ನು ಬಳಸು ತ್ತಿದ್ದಾರೆ. ಇದೀಗ ಈ ಸೇತುವೆಯನ್ನು ಬಳಸು ವವರು ಬಹಳಷ್ಟು ಕಡಿಮೆ ಮಂದಿ.
ನೂತನ ಸೇತುವೆ ನಿರ್ಮಾಣ ಸಂದರ್ಭದಲ್ಲಿ ಸೇತುವೆ ಕಾಮಗಾರಿಗೆ ತಂದಿದ್ದ ಜಂಕರ್‌ ನೀರಿನಲ್ಲಿ ಹರಿದು ಹೋಗಿ ಕಾಲ್ಸೇತುವೆಯ ಕಂಬಗಳಿಗೆ ಈ ಹಿಂದೆ ಬಡಿದು ಸೇತುವೆಯ ಒಂದು ಭಾಗ ಪಕ್ಕಕ್ಕೆ ವಾಲಿತ್ತು. ಈ ಹಿನ್ನೆಲೆಯಲ್ಲಿ ಅಂದು ಈ ಕಾಲ್ಸೇತುವೆ ಮುರಿದು ಬೀಳದಂತೆ ತೆಂಗಿನ ಕಂಬವನ್ನು ಜೋಡಿಸಿ ಬಲಪಡಿಸಲಾಗಿತ್ತು. ಆದರೆ ಈ ತೆಂಗಿನ ಕಂಬ ಯಾವುದೇ ಸಂದರ್ಭದಲ್ಲೂ ಜೋಡಣೆ ಬಿಡುವ ಸಾಧ್ಯತೆಯಿದೆ. 

ಶೀಘ್ರದಲ್ಲೇ ಕಾಲ್ಸೇತುವೆ ದುರಸ್ತಿ ಗೊಳಿಸದಿದ್ದಲ್ಲಿ ಮಳೆಯ ನೀರಿನ ಹರಿವಿಗೆ ಕುಸಿದು ಬೀಳುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಸ್ಮಾರಕವಾಗಿ ಉಳಿಸಿಕೊಳ್ಳಲು ಆಗ್ರಹ 
ಕೇರಳ ರಾಜ್ಯದ ಅತ್ಯಂತ ನೀಳದ ಕಾಲ್ಸೇತುವೆಯನ್ನು ಸ್ಮಾರಕವಾಗಿ ಉಳಿಸಿ ಕೊಳ್ಳಬೇಕೆಂದು ಸ್ಥಳೀಯರು ಈ ಹಿಂದೆ ಸಂಬಂಧಪಟ್ಟವರನ್ನು ಆಗ್ರಹಿಸಿದ್ದರು. ಈ ಸೇತುವೆಯಿಂದ ಕೆಲವೇ ದೂರದಲ್ಲಿ ನೂತನ ಸೇತುವೆಯನ್ನು ನಿರ್ಮಿಸಿರುವ ಕಾರಣದಿಂದ ಹಳೆಯ ಸೇತುವೆ ಬಳಕೆ ಕಡಿಮೆಯಾದರೂ, 2000ನೇ ಇಸವಿಯಲ್ಲಿ ಸ್ಥಾಪಿಸಲಾಗಿದ್ದ ರಾಜ್ಯದಲ್ಲೇ ಅತ್ಯಂತ ನೀಳದ ಕಾಲ್ಸೇತುವೆಯನ್ನು ಉಳಿಸಿಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದರು. 310 ಮೀಟರ್‌ ಉದ್ದದ ಕಾಲ್ಸೇತುವೆ ಹೊಸ ಸೇತುವೆ ನಿರ್ಮಾಣಕ್ಕೆ ಮುನ್ನ  ಅಚ್ಚಾಂತುರ್ತಿ – ಕೋಟ್ಟಪ್ಪುರಂವನ್ನು ಪರಸ್ಪರ ಸಂಪರ್ಕಿಸುತ್ತಿತ್ತು. ಆ ಹಳೆಯ ನೆನಪು ಮಾಸದಂತೆ ಕಾಲ್ಸೇತುವೆಯನ್ನು ಉಳಿಸಿಕೊಳ್ಳಬೇಕೆಂಬುದು ಸ್ಥಳೀಯರ ಸಂಕಲ್ಪವಾಗಿದೆ.

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.