“2020ರ ಡಿಸೆಂಬರ್‌ ವೇಳೆಗೆ ಎಲ್ಲರಿಗೂ ವಸತಿ ಭಾಗ್ಯ’

Team Udayavani, Dec 10, 2019, 7:53 PM IST

ಕಾಸರಗೋಡು: 2020ನೇ ಇಸವಿಯ ಡಿಸೆಂಬರ್‌ ತಿಂಗಳಲ್ಲಿ ಮನೆ ಯಿಲ್ಲದ ಎಲ್ಲರಿಗೂ ವಸತಿ ಭಾಗ್ಯ ಒದಗಲಿದೆ ಎಂದು ಸ್ಥಳೀಯಾಡಳಿತ ಸಚಿವ ಎ.ಸಿ. ಮೊಯ್ದಿನ್‌ ಭರವಸೆ ನೀಡಿದರು.

ವೆಸ್ಟ್‌ ಏಳೇರಿ ಪಂಚಾಯತ್‌ನಲ್ಲಿ ನಡೆದ ಸಮಾರಂಭದಲ್ಲಿ ಲೈಫ್‌ ಮಿಷನ್‌ ಯೋಜನೆ ಪ್ರಕಾರ ನಿರ್ಮಿಸಿರುವ ವಸತಿ ಗಳ ಕೀಲಿಕೈ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎರಡು ವರ್ಷಗಳ ಅವ ಧಿಯಲ್ಲಿ 320 ಮನೆಗಳನ್ನು ನಿರ್ಮಿಸುವ ಮೂಲಕ ವೆಸ್ಟ್‌ ಏಳೇರಿ ಗ್ರಾಮ ಪಂಚಾಯತ್‌ ಇತರರಿಗೆ ಮಾದರಿಯಾಗಿದೆ. ಈ ಯೋಜನೆಯ ಮೊದಲ ಹಂತದಲ್ಲಿ 54 ಸಾವಿರ ಮಂದಿ ಸದಸ್ಯರಾಗಿದ್ದರು. ಎರಡನೇ ಹಂತದಲ್ಲಿ ಇವರ ಸಂಖ್ಯೆ 1.37 ಲಕ್ಷವಾಗಿ ಹೆಚ್ಚಳಗೊಂಡಿತ್ತು. ರಾಜ್ಯದ 50 ಕ್ಕೂ ಅ ಧಿಕ ಪ್ರದೇಶಗಳಲ್ಲಿ ನೂರಾರು ವಸತಿ ಸಮುಚ್ಚಯಗಳನ್ನು ನಿರ್ಮಿಸಿ ನೀಡುವ ಯೋಜನೆ ಮೂರನೇ ಹಂತವಾಗಿ ನಡೆಯುತ್ತಿದೆ. ಹೆಚ್ಚುವರಿಯಾಗಿ 200 ಪ್ರದೇಶಗಳನ್ನು ಈ ನಿಟ್ಟಿನಲ್ಲಿ ಆಯ್ಕೆ ಮಾಡಲಾಗಿದೆ ಎಂದವರು ತಿಳಿಸಿದರು.

ಸಭೆಯಲ್ಲಿ ತ್ರಿಕ್ಕರಿಪುರ ಶಾಸಕ ಎಂ. ರಾಜಗೋಪಾಲನ್‌ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಪಿ.ರಾಜನ್‌, ವೆಸ್ಟ್‌ ಏಳೇರಿ ಗ್ರಾಮ ಪಂಚಾಯತ್‌ ಉಪಾದ್ಯಕ್ಷ ಟಿ.ಕೆ. ಸುಕುಮಾರನ್‌, ಖಾದಿ ಮಂಡಳಿಯ ಮಾಜಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್‌, ಲೈಫ್‌ ಮಿಷನ್‌ ಜಿಲ್ಲಾ ಸಂಚಾಲಕ ಎಂ.ವತ್ಸಲನ್‌ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ