ಕೇರಳದ ಕೊಚ್ಚಿಯಲ್ಲಿ ಕನ್ನಡದ ಕಂಪು ಸೂಸಿದ ಕನ್ನಡತಿ

Team Udayavani, Jul 8, 2019, 1:10 PM IST

ಬದಿಯಡ್ಕ: ಸಾಹಿತಿ, ಶಿಕ್ಷಕಿ ಪರಿಣಿತ ರವಿಯವರ ತೃತೀಯ ಕೃತಿ ‘ಭಾವಬಿಂದು’ ಇತ್ತೀಚಿಗೆ ಕೊಚ್ಚಿಯ ಕನ್ನಡ ಸಂಘದಲ್ಲಿ ಲೋಕಾರ್ಪಣೆಗೊಂಡಿತು.

ಸಿಂಪರ‌ ಪ್ರಕಾಶನದಿಂದ ಪ್ರಕಾಶಿಸಲ್ಪಟ್ಟ ‘ಭಾವಬಿಂದು’ 150 ಹನಿಗವನಗಳ ಸಂಕಲನ ಇದು. ಹಿರಿಯ ಉದ್ಯಮಿಗಳಾದ ಶಿವನಾಥ್ ಕೌಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉದ್ಯಮಿಗಳಾದ ಕೆ.ಎನ್. ಸೂರ್ಯ ನಾರಾಯಣ ರಾವ್ ಕೃತಿ ಬಿಡುಗಡೆ ಮಾಡಿದರು. ನಿವೃತ್ತ ಸಿ.ಐ.ಎಫ್.ಟಿ ವಿಜ್ಞಾನಿ ಡಾ| ಶ್ರೀನಿವಾಸ್ ಗೊಪಾಲ್ ಕೃತಿಯ ಮೊದಲ ಪ್ರತಿಯನ್ನು ಸ್ವೀಕರಿಸಿದರು.

ವಿಜ್ಞಾನಿಗಳು, ವೈದ್ಯರು, ಉದ್ಯಮಿಗಳು, ಅಧ್ಯಾಪಕರು ಹೀಗೆ ವಿವಿಧ ರಂಗದ ಗಣ್ಯರು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕೊಚ್ಚಿಯಲ್ಲಿ ಬಿಡುಗಡೆಗೊಂಡ ಮೊದಲ ಕನ್ನಡ ಕೃತಿ ಇದು ಎಂಬ ಪ್ರಶಂಸೆಗೆ ಪಾತ್ರವಾಯಿತು.

ಭಾರತೀಯ ವಿದ್ಯಾಭವನದ ಅಧ್ಯಾಪಕಿ ವಿದ್ಯಾ ರವಿಶಂಕರ್ ಕೃತಿ ಪರಿಚಯ ಮಾಡಿದರು. ಕನ್ನಡ ಸಂಘದ ಮಹಿಳಾ ವೇದಿಕೆಯ ಕಾರ್ಯದರ್ಶಿ ಲತಾ ಈಶ್ವರ್ ಕಾರ್ಯಕ್ರಮ ನಿರೂಪಿಸಿದರು. ಕೃತಿಗಾರ್ತಿ ಪರಿಣಿತ ಧನ್ಯವಾದ ಸಮರ್ಪಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ