ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


Team Udayavani, Jun 8, 2019, 6:00 AM IST

Crime-545

ಲಾಟರಿ ಏಜೆಂಟ್‌ನ ನಗದು, ಫೋನ್‌
ಎಗರಿಸಿದ ಪ್ರಕರಣ : ಇಬ್ಬರ ಬಂಧನ
ಕಾಸರಗೋಡು: ಲಾಟರಿ ಏಜೆಂಟ್‌ ಕಲ್ಲಕಟ್ಟ ನಿವಾಸಿ ಅಶೋಕನ್‌ ಅವರ ಮೊಬೈಲ್‌ ಫೋನ್‌, 1,500 ರೂ. ಇದ್ದ ಪರ್ಸ್‌ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಧೂರು ಕಲ್ಲಕಟ್ಟ ನಿವಾಸಿ ಮೊಹಮ್ಮದ್‌ ಸಾಲಿ (22) ಮತ್ತು 17 ವರ್ಷ ಪ್ರಾಯದ ಬಾಲಕನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

2018ರ ಮಾರ್ಚ್‌ 21ರಂದು ರಾತ್ರಿ ಮನೆಗೆ ನಡೆದು ಹೋಗುತ್ತಿದ್ದಾಗ ದಾರಿ ಮಧ್ಯೆ ಪರ್ಸ್‌ ಎಗರಿಸಿದ ಘಟನೆ ನಡೆದಿತ್ತು. ಅಂದು ಬಂಧಿತ ಇಬ್ಬರು ಆರೋಪಿಗಳ ಸಹಿತ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು. ಈ ಪ್ರಕರಣದ ಇನ್ನೋರ್ವ ಆರೋಪಿ ಕೊಲ್ಲಿಗೆ ಪರಾರಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ನಿಗೂಢ ಸಾವು : ತೀವ್ರ ತನಿಖೆ
ಕುಂಬಳೆ: ಇಚ್ಲಂಗೋಡು ಪಾಣಂ ವೀಟಿಲ್‌ ಅಬೂಬಕ್ಕರ್‌ ಅವರ ಪತ್ನಿ ಮರಿಯುಮ್ಮ (49) ಅವರ ನಿಗೂಢ ಸಾವಿಗೆ ಸಂಬಂಧಿಸಿ ಕುಂಬಳೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಮರಿಯುಮ್ಮ ಅವರ ಸಾವಿನ ಬಗ್ಗೆ ನಿಗೂಢತೆ ವ್ಯಕ್ತಪಡಿಸಿ ಅವರ ಪುತ್ರಿಯೊಬ್ಬರು ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ದೂರು ನೀಡಿದ್ದರು. ಅದರಂತೆ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಎಪ್ರಿಲ್‌ 7ರಂದು ಮರಿಯುಮ್ಮ ಮನೆಯ ಬೆಡ್‌ ರೂಂನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನೆಲದಲ್ಲಿ ಇದ್ದ ಮೃತದೇಹದ ಮೂಗು ಹಾಗೂ ಕಿವಿಯಿಂದ ರಕ್ತ ಒಸರುತ್ತಿತ್ತೆಂದು ಹೇಳಲಾಗುತ್ತಿದೆ. ಇದು ಮೃತದೇಹಕ್ಕೆ ಸ್ನಾನ ಮಾಡಿಸಿದವರ ಗಮನಕ್ಕೂ ಬಂದಿತ್ತು ಎನ್ನಲಾಗಿದೆ. ಮೃತದೇಹವನ್ನು ಮೊದಲು ಕಂಡ ಯುವಕ ಹಾಗೂ ಮೃತದೇಹಕ್ಕೆ ಸ್ನಾನ ಮಾಡಿಸಿದವರ ಸಹಿತ ಹಲವರಿಂದ ಪೊಲೀಸರು ಹೇಳಿಕೆ ಸಂಗ್ರಹಿಸಿದ್ದಾರೆ.

ಕಾರು-ಸ್ಕೂಟರ್‌ ಢಿಕ್ಕಿ
ನೀರ್ಚಾಲು: ನೀರ್ಚಾಲು ಮೇಲಿನ ಪೇಟೆಯಲ್ಲಿ ಕಾರು-ಸ್ಕೂಟರ್‌ ಢಿಕ್ಕಿ ಹೊಡೆದು ಬದಿಯಡ್ಕ ಬಸ್‌ ನಿಲ್ದಾಣದಲ್ಲಿ ಪತ್ರಿಕೆ ಮಾರಾಟ ಮಾಡುವ ಪೊಯೆÂಕಂಡ ನಿವಾಸಿ ಬಾಲಕೃಷ್ಣ(54) ಅವರು ಗಾಯಗೊಂಡಿದ್ದಾರೆ. ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಹಲ್ಲೆ ಪ್ರಕರಣ : ಸಜೆ
ಕಾಸರಗೋಡು: 2012ರ ಸೆ. 6ರಂದು ಕಾಸರಗೋಡು ನಗರದ ಐಸಿಐಸಿಐ ಬ್ಯಾಂಕ್‌ನ ಶಾಖೆಯ ಮೆಟ್ಟಿಲಲ್ಲಿ ಕೂಡ್ಲು ನಿವಾಸಿ ಸುಧೀಶ್‌ ಕುಮಾರ್‌ ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೂಡ್ಲು ಕೇಳುಗುಡ್ಡೆ ಹಿಝತ್‌ನಗರದ ಮೊಹಮ್ಮದ್‌ ಹಾರಿಸ್‌(21)ಗೆ ಕಾಸರಗೋಡು ಸಿಜೆಎಂ ನ್ಯಾಯಾಲಯ ಒಂದು ಸೆಕ್ಷನ್‌ನಲ್ಲಿ ಒಂದು ತಿಂಗಳು, ಎರಡು ಸೆಕ್ಷನ್‌ಗಳಲ್ಲಿ ತಲಾ ಎರಡು ತಿಂಗಳು ಸಜೆ ಸಹಿತ ಒಟ್ಟು ಐದು ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದೆ. ಸಜೆಯನ್ನು ಒಟ್ಟಿಗೆ ಎರಡು ತಿಂಗಳಲ್ಲಾಗಿ ಅನುಭವಿಸಿದರೆ ಸಾಕೆಂದೂ ತೀರ್ಪಿನಲ್ಲಿ ತಿಳಿಸಿದೆ.

ಲೈಂಗಿಕ ಪ್ರಚೋದನೆ ಯತ್ನ :
ಇಬ್ಬರಿಗೆ ಸಜೆ, ದಂಡ
ಕಾಸರಗೋಡು: ಹದಿನೈದು ವರ್ಷದ ಬಾಲಕಿಗೆ ಆಮಿಷವೊಡ್ಡಿ ಲೈಂಗಿಕ ಪ್ರಚೋದನೆ ನೀಡಲೆತ್ನಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(ಪ್ರಥಮ) ತಲಾ ಮೂರು ವರ್ಷ ಕಠಿನ ಸಜೆ ಮತ್ತು 10,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಬೇಳ ಉಳ್ಳೋಡಿ ಚೇಡೆಕ್ಕಲ್‌ ಹೌಸಿನ ಚೋಮ (47) ಮತ್ತು ಕುಂಬಳೆ ಕೊಯಿಪ್ಪಾಡಿ ಪೆರುವಾಡಿ ಮುಳಯಂ ಹೌಸಿನ ಸಿದ್ದಿಕ್‌(48)ಗೆ ಶಿಕ್ಷೆ ವಿಧಿಸಲಾಗಿದೆ.

ದಂಡ ಪಾವತಿಸದಿದ್ದಲ್ಲಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. ಕುಂಬಳೆ ಪೊಲೀಸರು ಈ ಬಗ್ಗೆ ಕೇಸು ದಾಖಲಿಸಿಕೊಂಡಿದ್ದರು.

ಘರ್ಷಣೆ : ಐವರಿಗೆ ಗಾಯ
ಮುಳ್ಳೇರಿಯ: ಬೆಳ್ಳೂರು ಕುಳದಪಾರೆಯಲ್ಲಿ ಎರಡು ತಂಡಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡ ಸಿಪಿಎಂ ನೇತಾರ ಕುಳದಪಾರೆಯ ಶಶಿಧರ, ಸ್ನೇಹಿತರಾದ ಸುಜಿತ್‌, ಮಹೇಶ್‌, ಶಶಿಧರ ಅವರ ಪತ್ನಿ ಜಯಂತಿ ಅವರನ್ನು ಚೆಂಗಳದ ಆಸ್ಪತ್ರೆಗೂ, ಬಿಜೆಪಿ ಕಾರ್ಯಕರ್ತ ಹರ್ಷಿತ್‌ ಅವರನ್ನು ಕಾಸರಗೋಡಿನ ಜನರಲ್‌ ಆಸ್ಪತೆಗೂ ಸೇರಿಸಲಾಗಿದೆ.

ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ
ಪ್ರಕರಣ: ಆರೋಪಿಗಳ ಖುಲಾಸೆ
ಕಾಸರಗೋಡು: ಮಧೂರು ದೇವಸ್ಥಾನ ಪರಿಸರದಲ್ಲಿ 2013ರ ಎಪ್ರಿಲ್‌ 14ರಂದು ಫ್ಲೆಕ್ಸ್‌ ಬೋರ್ಡ್‌ ತೆರವುಗೊಳಿಸುವ ವಿಷಯದಲ್ಲಿ ಉಂಟಾದ ಘರ್ಷಣೆಯಲ್ಲಿ ಅಂದು ವಿದ್ಯಾನಗರ ಪೊಲೀಸ್‌ ಠಾಣೆಯ ಎಸ್‌.ಐ. ಆಗಿದ್ದ ಉತ್ತಮ್‌ದಾಸ್‌ ಅವರಿಗೆ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ ಹಲ್ಲೆಗೊಳಿಸಲಾಯಿತೆಂದು ಆರೋಪಿಸಿ ವಿದ್ಯಾನಗರ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಕಾಸರಗೋಡು ಸಿಜೆಎಂ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಮಧೂರು ಪರಿಸರ ನಿವಾಸಿಗಳಾದ ಧನಂಜಯನ್‌ (22), ಪ್ರಸನ್ನ ಕುಮಾರ್‌ (25), ಸಂದೀಪ್‌ (22), ವಿಜಯನ್‌ (25), ರಾಘವನ್‌ (27) ಮತ್ತು ವಿಶ್ವನಾಥ (42) ಅವರನ್ನು ಖುಲಾಸೆಗೊಳಿಸಿದೆ.

ದೇವಸ್ಥಾನ ಪರಿಸರದಲ್ಲಿ ಚೆಗುವರ ಅವರನ್ನು ಆಕ್ಷೇಪಿಸುವ ರೀತಿಯಲ್ಲಿ ಫ್ಲೆಕ್ಸ್‌ ಬೋರ್ಡ್‌ ಸ್ಥಾಪಿಸಲಾಗಿತ್ತೆಂದೂ ಅದನ್ನು ಪೊಲೀಸರು ತೆರವುಗೊಳಿಸಲು ಬಂದಾಗ ಘರ್ಷಣೆಗೆ ದಾರಿ ಮಾಡಿಕೊಟ್ಟಿದ್ದು, ಪೊಲೀಸರು ಕೇಸು ದಾಖಲಿಸಿದ್ದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.