ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


Team Udayavani, May 11, 2019, 6:00 AM IST

Crime-545

ನಕಲಿ ಚಿಕಿತ್ಸೆ : ನಕಲಿ ವೈದ್ಯನ ವಿರುದ್ಧ ಕೇಸು ದಾಖಲು
ಪೆರ್ಲ: ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.ಪೆರ್ಲ ಇಡಿಯಡ್ಕದಲ್ಲಿ ನಾಲ್ಕು ವರ್ಷಗಳಿಂದ ಚಿಕಿತ್ಸೆ ನೀಡುತ್ತಿದ್ದ ಕರ್ನಾಟಕ ನಿವಾಸಿ ಸಯ್ಯಿದ್‌ ಆಬಿದ್‌ ತಂಙಳ್‌ (55) ವಿರುದ್ಧ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರ ಆದೇಶದಂತೆ ಕೇಸು ದಾಖಲಿಸಲಾಗಿದೆ.

ಮರಳು ಸಾಗಾಟ : ಪೊಲೀಸರಿಗೆ ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ತಂಡದಿಂದ ದಂಪತಿಗೆ ಹಲ್ಲೆ
ಕುಂಬಳೆ: ನಿರಂತರವಾಗಿ ಮರಳು ಸಾಗಾಟ ಬಗ್ಗೆ ಪೊಲೀಸರಿಗೆ ನೀಡಿದ ದೂರು ಸೋರಿಕೆಯಾಗಿದೆ. ಇದರಿಂದ ದೂರು ನೀಡಿದ ಮನೆಯವರಿಗೆ ತಂಡವೊಂದು ಹಲ್ಲೆ ಮಾಡಿದ ಘಟನೆ ನಡೆದಿದೆ. ಮಂಜೇಶ್ವರ ಹೊಸಬೆಟ್ಟು ಕಡಪ್ಪುರ ನಿವಾಸಿ ಅಬ್ದುಲ್‌ ಹಕೀಂ (37) ಮತ್ತು ಪತ್ನಿ ನಸೀಮಾ (30) ಅವರಿಗೆ ತಂಡವೊಂದು ಮನೆಗೆ ನುಗ್ಗಿ ಹಲ್ಲೆ ಮಾಡಿದೆ. ಮೇ 9ರಂದು ರಾತ್ರಿ 9.30 ಕ್ಕೆ ಮನೆಗೆ ನುಗ್ಗಿದ ಮೂರು ಮಂದಿಯ ತಂಡ ಮೂವರು ಮಕ್ಕಳ ಮುಂದೆಯೇ ಕಬ್ಬಿಣದ ಸರಳಿನಿಂದ ಹೊಡೆದು ಹಲ್ಲೆ ಮಾಡಿದೆ.

ಗಾಯಾಳುಗಳು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೊಸಬೆಟ್ಟು ಕಡಪ್ಪುರದಿಂದ ಮರಳು ಕಳ್ಳ ಸಾಗಾಟ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತೆನ್ನಲಾಗಿದೆ.

ಕಾರು ಢಿಕ್ಕಿ : ಮೀನು ಕಾರ್ಮಿಕ ಸಾವು
ಕಾಸರಗೋಡು: ಬೇಕಲ ಸೇತುವೆ ಬಳಿ ಕಾರು ಢಿಕ್ಕಿ ಹೊಡೆದು ಮೀನು ಕಾರ್ಮಿಕ ಬೇಕಲ ತಂಬುರಾನ್‌ವಳಪ್‌ ವೇಲಿಪುರಂ ಹೌಸ್‌ನ ಕಣ್ಣನ್‌ ಅವರ ಪುತ್ರ ಬಾಬು ಕೆ. (58) ಸಾವಿಗೀಡಾದರು.

ನೀರು ವಿತರಿಸುತ್ತಿದ್ದ
ಟ್ಯಾಂಕರ್‌ ಪಲ್ಟಿ : ಇಬ್ಬರಿಗೆ ಗಾಯ
ಉಪ್ಪಳ: ನೀರು ವಿತರಿಸುತ್ತಿದ್ದ ಟ್ಯಾಂಕರ್‌ ಲಾರಿಯೊಂದು ಹಿಂಬದಿಯ ಆ್ಯಕ್ಸಿಲ್‌ ತುಂಡಾಗಿ ಪಲ್ಟಿಯಾದ ಘಟನೆ ಬಂದ್ಯೋಡು ಪಂಜದಲ್ಲಿ ಮೇ 10ರಂದು ಬೆಳಗ್ಗೆ ನಡೆದಿದೆ.ಟ್ಯಾಂಕರ್‌ನಲ್ಲಿದ್ದ ಚಾಲಕ ಪಚ್ಲಂಪಾರೆ ನಿವಾಸಿ ನಿಶಾಂತ್‌(25) ಮತ್ತು ಸಹಾಯಕ ಅಜೇಶ್‌ ಗಾಯಗೊಂಡಿದ್ದಾರೆ. ಅವರನ್ನು ಬಂದ್ಯೋಡ್‌ನ‌ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಸಾರಾಯಿ ಸಹಿತ ಬಂಧನ
ಅಡೂರು: 10 ಲೀಟರ್‌ ಸಾರಾಯಿ ಸಹಿತ ಬಳ್ಳಕಾನ ನಿವಾಸಿ ಕೃಷ್ಣೇಶ್‌ (37) ನನ್ನು ಅಬಕಾರಿ ಅಧಿಕಾರಿಗಳು ಬಳ್ಳಕಾನದಿಂದ ಬಂಧಿಸಿದ್ದಾರೆ.

ಸ್ಕೂಟರ್‌ ಢಿಕ್ಕಿ : ಗಾಯ
ಉಪ್ಪಳ: ಅಂಗಡಿಪದವಿನಲ್ಲಿ ಬೈಕ್‌ ಢಿಕ್ಕಿ ಹೊಡೆದು ಸ್ಕೂಟರ್‌ ಸವಾರ ಅಂಗಡಿಪದವು ಶಾಂತಿನಗರ ನಿವಾಸಿ ಅಂದುಂಞಿ ಅವರ ಪುತ್ರ ಅಬ್ದುಲ್‌ ರಹಿಮಾನ್‌ (47) ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಪೊದೆಗೆ ಬೆಂಕಿ
ಉಪ್ಪಳ: ದೈಗೋಳಿಯಲ್ಲಿ ಡಾ| ಶಾರದಾ ಅವರ ಹಿತ್ತಿಲಿನಲ್ಲಿ ಪೊದೆಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು.

ಸೋಂಕಾಲು ಗುಳಿಗ ಬನದ ಪರಿಸರದಲ್ಲಿ ಪೊದೆಗೆ ಬೆಂಕಿ ಹತ್ತಿಕೊಂಡಿದ್ದು ಉಪ್ಪಳದ ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು.

ಮುಳ್ಳು ಹಂದಿ ಬೇಟೆ : ಇಬ್ಬರು ಶರಣು
ಕಾಸರಗೋಡು: 2018 ಜ.26 ರಂದು ವಿದ್ಯಾನಗರ ಪಡುವಡ್ಕದ ಖಾಸಗಿ ಹಿತ್ತಿಲೊಂದರಿಂದ ಮುಳ್ಳುಹಂದಿಯನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕುತ್ತಿಕ್ಕೋಲ್‌ ನುರುವೀಟಿಲ್‌ ಅಂಬುಜಾಕ್ಷನ್‌ (45) ಮತ್ತು ಮುನ್ನಾಡಿನ ರಾಮಚಂದ್ರನ್‌ ಯಾನೆ ಪೊಕ್ಕನ್‌ (60) ಕಾಸರಗೋಡು ರೇಂಜ್‌ನ ಅರಣ್ಯ ಪಾಲಕರ ಮುಂದೆ ಶರಣಾಗಿದ್ದಾರೆ.

ಬಸ್‌ನಿಂದ ಮದ್ಯ ವಶಕ್ಕೆ
ಉಪ್ಪಳ: ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್‌ ನಲ್ಲಿ ವಾಹನ ತಪಾಸಣೆ ವೇಳೆ ಬಸ್‌ನಿಂದ ವಾರೀಸುದಾರರಿಲ್ಲದ 3 ಲೀಟರ್‌ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.