ಬೆಳ್ಳೂರು ಬಂಜರು ಗದ್ದೆಯಲ್ಲಿ ಮಳೆ ಸೊಬಗು

Team Udayavani, Jul 20, 2019, 5:33 PM IST

ಕಾಸರಗೋಡು : ಬೆಳ್ಳೂರು ಗ್ರಾ.ಪಂ. ಮತ್ತು ಕುಟುಂಬಶ್ರೀ ಸಿಡಿಎಸ್‌ ವತಿಯಿಂದ ಎಡಮೊಗೆರು ಗದ್ದೆಯಲ್ಲಿ ಮಳೆ ಸೊಬಗು ಕಾರ್ಯಕ್ರಮ ನಡೆಯಿತು.

ಕಣ್ಮರೆಯಾಗುತ್ತಿರುವಂತಹ ಪರಂಪರಾಗತ ಕೃಷಿ ಪದ್ಧತಿಯನ್ನು ಪುನರುದ್ಧರಿಸಲು ಹಾಗೂ ಬಂಜರು ಭೂಮಿಯನ್ನು ಅಭಿವೃದ್ಧಿಗೊಳಿಸುವ ಮತ್ತು ಯುವ ಸಮೂಹ ಹಾಗೂ ವಿದ್ಯಾರ್ಥಿಗಳನ್ನು ಕೃಷಿ ವಲಯದತ್ತ ಆಕರ್ಷಿಸುವ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಕುಟುಂಬಶ್ರೀ ಜಿಲ್ಲಾ ಮಿಷನ್‌ ನಿರ್ದೇಶನದಂತೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳ್ಳೂರು ಗ್ರಾ.ಪಂ.ನ ಸಿಡಿಎಸ್‌ ಅಧ್ಯಕ್ಷೆ ಮಾಲಿನಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮವನ್ನು ಬೆಳ್ಳೂರು ಗ್ರಾ.ಪಂ.ನ ಅಧ್ಯಕ್ಷರಾದ ಲತಾ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್‌ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ಎ. ಉಷಾ, ಜಿಲ್ಲಾ ಪಂ. ಸದಸ್ಯರಾದ ಅಡ್ವ.ಶ್ರೀಕಾಂತ್‌, ಜಿಲ್ಲಾ ಕೋರ್ಡಿನೇಟರ್‌ ಟಿ.ಟಿ.ಸುರೇಂದ್ರನ್‌, ಪಂಚಾಯತು ಉಪಾಧ್ಯಕ್ಷರಾದ ಪುರುಷೋತ್ತಮನ್‌ ಸಿ.ವಿ., ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲತಿ ಜೆ ರೈ, ಮನೋಹರ ಎನ್‌.ಎ., ಗೀತಾ ಕೆ ಮತ್ತು ಬ್ಲೋಕ್‌ ಪಂ. ಸದಸ್ಯರಾದ ಸತ್ಯವತಿ ಸಿ.ರೈ , ಶ್ರೀಧರ ಎಂ., ಬೆಳ್ಳೂರು ಗ್ರಾ.ಪಂ. ಸದಸ್ಯರಾದ ವಿಶಾಲಾಕ್ಷಿ ಬಿ.ಆರ್‌.ಜಯಕುಮಾರ್‌ ಕೆ., ಶಕೀನಾ ಬಾನು, ಉಷಾ, ರಾಧಾ ವಿ, ಬಾಬು ಅನೆಕ್ಕಳ, ಸುಜಾತ ಎಂ. ರೈ, ರಾಧಾಕೃಷ್ಣ , ಸೇವಾ ಸಹಕಾರಿ ಬ್ಯಾಂಕ್‌ ಬೆಳ್ಳೂರಿನ ಅಧ್ಯಕ್ಷರಾದ ವಿ.ಎಸ್‌. ಸುಬ್ರಹ್ಮಣ್ಯ ಕಡಂಬಳಿತ್ತಾಯ, ಗ್ರಾಮೀಣ ಬ್ಯಾಂಕಿನ ಜಯಕುಮಾರ್‌, ಪಂಚಾಯತು ಕಾರ್ಯದರ್ಶಿ ಗೀತಾ ಕುಮಾರಿ ಮುಂತಾದವರು ಉಪಸ್ಥಿತರಿದ್ದರು. ಮಹಾದೇವ ಸಿ.ಎಂ. ಸ್ವಾಗತಿಸಿ ನಿರ್ಮಲ ವಂದಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ವಸ್ತು ಪ್ರದರ್ಶನ ನಡೆಯಿತು. ಕೆಸರು ಗದ್ದೆ ಓಟ, ಗೋಣಿ ಚೀಲ ಓಟ, ರಿಲೆ, ಹಗ್ಗ-ಜಗ್ಗಾಟ ಹಾಗೂ ಇನ್ನಿತರ ಕ್ರೀಡೆಗಳು ಜರಗಿತು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ