ಕುಂಬಳೆ ಪೊಲೀಸ್‌ ಠಾಣೆ: ತುಕ್ಕುಹಿಡಿಯುತ್ತಿರುವ ವಾಹನಗಳು

Team Udayavani, Jan 20, 2020, 5:16 AM IST

ಕುಂಬಳೆ: ಕುಂಬಳೆ ಪೊಲೀಸ್‌ ಠಾಣೆಯ ಹಿಂದೆ ಮುಂದೆ ಸುಮಾರು ನೂರಿನ್ನೂರಷ್ಟು ದೊಡ್ಡ ಸಣ್ಣ ವಾಹನಗಳು ಬೇಕಾ ಬಿಟ್ಟಿ ಬೀಡು ಬಿಟ್ಟಿವೆ. ಠಾಣೆಯ ಮುಂಭಾಗ ರಸ್ತೆಯ ಪಕ್ಕ, ರಾಜ್ಯ ಕುಡಿಯುವ ನೀರು ಸರಬರಾಜು ಕಚೇರಿ ಮುಂಭಾಗ, ಕುಂಬಳೆ ಗಾಂಧಿ ಮೈದಾನವಲ್ಲದೆ ಕುಂಬಳೆ ಬೆಡಿ ಸಿಡಿಸುವ ವಿಶಾಲ ಮೈದಾನದಲ್ಲಿ ವಾಹನಗಳಲ್ಲದೆ ಮರಳು ರಾಶಿ ಮತ್ತು ಜಲ್ಲಿ ರಾಶಿಗಳನ್ನು ಕಾಣಬಹುದು. ಕಣಿಪುರ ವಾರ್ಷಿಕ ಜಾತ್ರೆಗೆ ಮುನ್ನ ಇದನ್ನು ಒಂದೆರಡು ದಿನಗಳ ಮಟ್ಟಕ್ಕೆ ಬದಿಗೆ ಸರಿಸಲಾಗುವುದು. ಇಲ್ಲಿದ್ದ ವಾಹನಗಳನ್ನು ಒಂದರ ಮೇಲೆ ಒಂದರಂತೆ ಪೇರಿಸಲಾಗುವುದು. ಆದರೆ ಬೆಡಿ ಕಳೆದ ಬಳಿಕ ಇಲ್ಲಿ ಮತ್ತೆ ಮುಂಚಿನ ಸ್ಥಿತಿಗೆ ಮರಳುತ್ತದೆ.

ಆಕ್ರಮವಾಗಿ ಶರಾಬು, ಹೊಯಿಗೆ ಸಾಗಿಸಿದ ಮತ್ತು ಪರವಾನಿಗೆ ಇಲ್ಲದ ಅಪಘಾತಕ್ಕೊಳಗಾದ ವಾಹನಗಳನ್ನು ಮತ್ತು ಹೊಳೆಯಿಂದ ಮರಳು ಸಾಗಿಸಿದ ದೋಣಿಗಳನ್ನು ವಶಪಡಿಸಿ ಠಾಣೆಯ ಸುತ್ತ ಮುತ್ತ ಇರಿಸಲಾಗಿದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರುತ್ತಲೇ ಇರುವುದು.ಇದರಲ್ಲಿ ಕೆಲವು ವಾಹನಗಳ ಟಯರ್‌ ಮತ್ತು ಬಿಡಿ ಭಾಗಗಳು ಮಾಯವಾಗುವುದು.ಇನ್ನು ಕೆಲವು ಬೆಲೆ ಬಾಳುವ ವಾಹನಗಳು ತುಕ್ಕು ಹಿಡಿದು ಹಾಳಾಗುವುದು. ಇದು ಇಂದು ನಿನ್ನೆಯ ಕಥೆಯಲ್ಲ. ಪೊಲೀಸ್‌ ಠಾಣೆ ಆರಂಭವಾದಾಗಿನಿಂದಲೂ ರಾಜ್ಯದ ಎಲ್ಲ ಪೊಲೀಸ್‌ ಠಾಣೆಗಳ ಆವರಣದೊಳಗೆ ಸುತ್ತಮುತ್ತ ವಾಹನಗಳ ಸಂತೆಯನ್ನು ಕಾಣಬಹುದು. ಈ ವಶಪಡಿಸಿಕೊಂಡ ವಾಹನಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ದಾಖಲಾಗಿರುವುದರಿಂದ ಕೇಸು ಆಮೆ ನಡಿಗೆಯ ಗತಿಯಲ್ಲಿ ಸಾಗುವುದರಿಂದ ವಾಹನಗಳು ಇನ್ನಷ್ಟು ಹಾಳಾಗಲು ಕಾರಣ ವಾಗುವುದು. ಆದುದರಿಂದ ಇದರಲ್ಲಿ ಬೆಲೆಬಾಳುವ ಕೆಲವು ಬಸ್ಸು ಲಾರಿಗಳ ಸಹಿತ ವಾಹನಗಳು ತುಕ್ಕು ಹಿಡಿದು ಮಣ್ಣು ಸೇರುತ್ತಿವೆ.ಹೆಚ್ಚಿನ ವಾಹನಗಳ ಟಯರುಗಳ ಗಾಳಿ ಹೋಗಿ ಜಗ್ಗಿ ಮಣ್ಣಿನೊಂದಿಗೆ ಲೀನವಾಗಲು ಕಾರಣವಾಗುತ್ತಿದೆ.

ವಶಪಡಿಸಿದ ವಾಹನಗಳನ್ನು ಕೇಸು ದಾಖಲಿಸಿದ ಬಳಿಕ ತತ್‌ಕ್ಷಣ ಮಾಲಕರಿಗೆ ಬಿಟ್ಟು ಕೊಡಲು ಕಾನೂನಿನ ತೊಡಕು ಇದ್ದ ಕಾರಣ ಈ ರೀತಿ ಠಾಣೆ ಪರಿಸರದಲ್ಲಿ ವಾಹನಗಳು ಕೊಳೆಯಲು ಕಾರಣವಾಗಿದೆ. ಇದರಿಂದ ಆದೆಷ್ಟೋ ರಾಷ್ಟ್ರೀಯ ನಷ್ಟಕ್ಕೆ ಕಾರಣವಾಗುವುದು. ಆದುದ ರಿಂದ ಕಾನೂನನ್ನು ಸಡಿಲಗೊಳಿಸಿ ಅಕ್ರಮ ಸಾಗಾಟದ ವಾಹನಗಳನ್ನು ತತ್‌ಕ್ಷಣ ಏಲಂ ಮಾಡಿ ಇದರ ಮೊತ್ತವನ್ನು ನ್ಯಾಯಾಲಯದ ವಶ ಇರಿಸಿ ಕೇಸು ಇತ್ಯರ್ಥವಾದ ಬಳಿಕ ಸಂಬಂಧಪಟ್ಟವರಿಗೆ ಹಸ್ತಾಂತರಿಸಿದಲ್ಲಿ ಅಥವಾ ಸರಕಾರಕ್ಕೆ ಪಾತಿಸಿದಲ್ಲಿ ಅದೆಷ್ಟೋ ಮೊತ್ತ ವ್ಯಯವಾಗುವುದನ್ನು ಮತ್ತು ವಾಹನಗಳು ಮಣ್ಣುಪಾಲಾಗುವುದನ್ನು ತಡೆಯಬಹುದು.

ಹಾಳಾದ ವಾಹನ ಕೊಂಡೊಯ್ಯಲು ನಿರಾಸಕ್ತಿ
ವಾಹನಗಳ ವಿರುದ್ಧ ನ್ಯಾಯಾ ಲಯದಲ್ಲಿ ದಾವೆ ಹಲವು ವರ್ಷಗಳ ತನಕ ಮುಂದುವರಿಯುವುದರಿಂದ ವಶಪಡಿಸಿದ ವಾಹನಗಳು ಹಾಳಾಗಲು ಕಾರಣವಾಗುವುದು. ದಾಖಲೆಗಳು ಸರಿ ಇಲ್ಲದೆ ಮತ್ತು ವಾಹನಗಳಿಗೆ ಬ್ಯಾಂಕ್‌ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಮಾಲಕರು ಸಾಲ ಪಾವತಿಸಲು ಬಾಕಿ ಇರುವುದರಿಂದ ಹೆಚ್ಚಿನ ವಾಹನ ಮಾಲಕರು ದಾವೆ ಮುಗಿದ ಬಳಿಕವೂ ವಾಹನಗಳನ್ನು ಒಯ್ಯಲು ಸಿದ್ಧರಾಗದ ಕಾರಣ ವಾಹನಗಳು ತುಕ್ಕು ಹಿಡಿದು ನಷ್ಟವಾಗಲು ಕಾರಣವಾಗಿದೆ. ಕೇಸು ಮುಗಿದ ವಾಹನಗಳನ್ನು ಗುಜಿರಿಗೆ ಒಯ್ಯಲೂ ಮಾಲಕರು ಮುಂದಾಗುವುದಿಲ್ಲ. ನ್ಯಾಯಾ ಲಯದ ಕಾಯಿದೆಯಲ್ಲಿ ಬದಲಾವಣೆ ಯಾದಲ್ಲಿ ರಾಷ್ಟ್ರೀಯ ನಷ್ಟವನ್ನು ತಡೆಯಬಹುದಾಗಿದೆ.
-ರಾಜೀವನ್‌ ವಳಪ್ಪು.
ಸ್ಟೇಶನ್‌ ಹೌಸ್‌ ಆಫೀಸರ್‌, ಕುಂಬಳೆ

-ಅಚ್ಯುತ ಚೇವಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ