ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ವಾರ್ಷಿಕ ಜಾತ್ರೆ: ಇಂದು ಸಂಪನ್ನ

Team Udayavani, Jan 18, 2020, 5:04 AM IST

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಚತುರ್ಥ ದಿನವಾದ ಜ. 17ರಂದು ಬೆಳಗ್ಗೆ ಉತ್ಸವ ಶ್ರೀ ಭೂತಬಲಿ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆಯ ಬಳಿಕ ಮಡ್ವ ಚಂದ್ರಹಾಸ ಭಂಡಾರಿ ಮನೆಯವರಿಂದ ಅನ್ನದಾನ ನಡೆಯಿತು.

ಸಂಜೆ ನಡೆ ತೆರೆದ ಬಳಿಕ ಶಿರಿಯ ಶ್ರೀ ಸತ್ಯಸಾಯಿ ಬಳಗದಿಂದ ಭಜನೆ, ನಾಟ್ಯನಿಲಯಂ ವಿದ್ವಾನ್‌ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯರಿಂದ ಭರತ ನಾಟ್ಯ ರಂಜಿಸಿತು.

ಸಂಜೆ ತಾಯಂಬಕ, ದೀಪಾರಾಧನೆ, ರಾತ್ರಿ ಶ್ರೀಬಲಿ ಉತ್ಸವ, ಬೆಡಿ ಪ್ರದರ್ಶನ ನಡೆಯಿತು. ಮುಂಜಾನೆ ಶಯನ, ಕವಾಟ ಬಂಧನ ನಡೆಯಿತು.

ಇಂದಿನ ಕಾರ್ಯಕ್ರಮ
ಜ. 18ರಂದು ಬೆಳಗ್ಗೆ 6ಗಂಟೆಗೆ ಕವಾಟೋದ್ಘಾಟನೆ, 10.30ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಸಂಜೆ 4.30ರಿಂದ ನಡೆ ತೆರೆಯುವುದು, 6.30ಕ್ಕೆ ದೀಪಾರಾಧನೆ, 4.30ರಿಂದ ಯಕ್ಷಗಾನ ವೈಭವ, ರಾತ್ರಿ 8.30 ರಿಂದ ಉತ್ಸವ ಬಲಿ, ಘೋಷಯಾತ್ರೆ, ಅವಭೃತ ಸ್ನಾನ (ಶೇಡಿಗುಮ್ಮೆಯಲ್ಲಿ) 10 ಗಂಟೆಗೆ ಮಹಾಶೂರ ಭೌಮಾಸುರ ಯಕ್ಷಗಾನ ಬಯಲಾಟ, ರಾತ್ರಿ ಗಂಟೆ 12.30ಕ್ಕೆ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ,ಧ್ವಜಾವರೋಹಣ ನಡೆಯಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ