ವಿಷರಹಿತ ಆಹಾರ ಬೆಳೆಸೋಣ: ಕೊಂಡೆವೂರು ಶ್ರೀ

Team Udayavani, Jan 23, 2020, 2:04 AM IST

ಕುಂಬಳೆ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆದ ಕೊಯ್ಲು ಉತ್ಸವ ಸಂಭ್ರಮದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಕೃಷಿ ಮಹತ್ವದ ಬಗ್ಗೆ ಮಾತನಾಡಿ ಇಂದು ನಾವೇ ಉತ್ತು ಬಿತ್ತಿ ಬೆಳೆದ ಆಹಾರ ಸೇವಿಸದೇ, ಹಣ ತೆತ್ತು ಅಂಗಡಿ ಅಕ್ಕಿ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇದರಿಂದ ದೇಶ ಅಭಿವೃದ್ಧಿ ಸಾಧ್ಯವಿಲ್ಲ, ದೇವರ ಸƒಷ್ಟಿ ಯ ಭೂಮಿಯಲ್ಲಿ ಅವನದೇ ಸƒಷ್ಟಿಯಾದ ನಮ್ಮ ಶರೀರ ಬಳಸಿ ಕೃಷಿ ಮಾಡಿದಾಗ ಭೂಮಿ ಸಸ್ಯ ಶ್ಯಾಮಲೆಯಾಗಿ ಉತ್ಪತ್ತಿ ಹೆಚ್ಚಾಗುತ್ತದೆ ಎನ್ನುವ ನಮ್ಮ ಹಿರಿಯರ ಕೃಷಿ ಪರ ಕಳಕಳಿಯನ್ನು ನಾವು ಅರಿತು, ಆರೋಗ್ಯದಾಯಕ ಸಾವಯವ ಕೃಷಿ ಸಂಸ್ಕೃತಿ ಉಳಿಸಿ ಉತ್ತಮ ಕೃಷಿಕನಾಗಿ ಬೆಳೆಯೋಣ. ದೇಶ ಅಭಿವೃದ್ಧಿಗೊಳಿಸೋಣ ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಆಶ್ರಮದ ವಿಶ್ವಸ್ಥ ನ್ಯಾಯವಾದಿ ಮೋನಪ್ಪ ಭಂಡಾರಿಯವರು ನಾವು ರಾಸಾಯನಿಕ ರಹಿತ ಸಾವಯವ ಕೃಷಿಯಿಂದ ಶುದ್ಧ ಪರಿಸರದಲ್ಲಿ ಬಾಳ್ಳೋಣ ಎಂದರು.

ಅತಿಥಿಗಳಾಗಿ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಪದ್ಮನಾಭ ನರಿಂಗಾನ ಮತ್ತು ಬಾಬು ಪಚ್ಲಂಪಾರೆ ಉಪಸ್ಥಿತರಿದ್ದರು. ಸ್ಮಿತಾ ಮತ್ತು ಪ್ರಜ್ಞಾ ಕೊಂಡೆವೂರು ಪ್ರಾರ್ಥನೆಹಾಡಿದರು. ಹರೀಶ್‌ ಮಾಡ ನಿರೂಪಿಸಿದರು.ಬಳಿಕ ಶ್ರೀ ದೇವರ ಮುಂದೆ ಪ್ರಾರ್ಥಿಸಿ ,ಮುಟ್ಟಾಳೆ ಧರಿಸಿ ಪೂಜ್ಯ ಶ್ರೀಗಳ ನೇತƒತ್ವದಲ್ಲಿ , ಚೆಂಡೆ ಜಾಗಟೆ,ಮುತ್ತು ಕೊಡೆಗಳೊಂದಿಗೆ ಸೇರಿದ ಕೃಷಿ ಆಸಕ್ತರ ಆಕರ್ಷಕ ಮೆರವಣಿಗೆ ಗದ್ದೆಯೆಡೆಗೆ ಸಾಗಿ ಗದ್ದೆಯಲ್ಲಿ ಶ್ರೀಗಳೊಂದಿಗೆ ಅತಿಥಿಗಳೂ ಸೇರಿ ಭತ್ತ ಕಟಾವಿಗೆ ಚಾಲನೆ ನೀಡಿದರು. 93 ರ ಹಿರಿಯಜ್ಜಿ ಕಮಲಮ್ಮ ಮತ್ತು ಚಿಣ್ಣರೂ ಉತ್ಸಾಹದಿಂದ ಪಾಲ್ಗೊಂಡರು.ಭತ್ತ ಕಟಾವು ಮಾಡಿ ಅಲ್ಲಿಯೇ ಭತ್ತ ಹೊಡೆಯಲಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ