ಮಣಿಯಾಣಿ ತರವಾಡು ಜೀರ್ಣೋದ್ಧಾರದ ಲಕ್ಕಿ ಕೂಪನ್‌ನ ಬಿಡುಗಡೆ

Team Udayavani, Apr 8, 2019, 4:24 PM IST

ಬದಿಯಡ್ಕ: ಬೇಳೇರಿ ಮೇಗಿನ ಮನೆ ತರವಾಡು ಜೀರ್ಣೋದ್ಧಾರದ ಅಂಗವಾಗಿ ಹಮ್ಮಿಕೊಂಡಿರುವ ಲಕ್ಕಿ ಕೂಪನ್‌ನ ಬಿಡುಗಡೆಯು ಮೇಗಿನಮನೆ ತರವಾಡಿನಲ್ಲಿ ನಡೆಸಲಾಯಿತು.

ಧಾರ್ಮಿಕ ಮುಂದಾಳು ನಾರಾಯಣ ರೈ ಕುದಾಡಿಯವರು ಲಕ್ಕಿಕೂಪನ್‌ನನ್ನು ಪ್ರಥಮ ಕೂಪನನ್ನು ನಾರಾಯಣ ಮಣಿಯಾಣಿ ಕನಕತ್ತೋಡಿಯವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿ ಮಾತನಾಡಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಹಿರಿತನ ನಮ್ಮ ತರವಾಡುಗಳಲ್ಲಿ ಭದ್ರವಾಗಿದೆ. ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ, ಪರಸ್ಪರ ಒಂದು ಕುಟುಂಬದ ಕಲ್ಪನೆಯ ನೆಲೆಯಲ್ಲಿ ಆಚರಣೆಗಳನ್ನು ಕಾಲಕಾಲಕ್ಕೆ ಮುಂದುವರೆಸಿಕೊಂಡು ಹೋಗುವಲ್ಲಿ ತರವಾಡು ಮಹತ್ವದ ಪಾತ್ರ ವಹಿಸುತ್ತದೆ.

ದೈವ ದೇವರುಗಳ ಮೇಲಿನ ಭಕ್ತಿ, ಒಂದು ಮನೆತನದ ಎಲ್ಲರೂ ಜೊತೆ ಸೇರಿ ಸಂಪೂರ್ಣ ಸಮರ್ಪಣಾ ಮನೋಭಾವದಿಂದ ಮಾಡುವ ಕಾರ್ಯ ನಮ್ಮ ಅಭಿವೃದ್ಧಿಗೆ ಕಾರಣವಾಗುತ್ತದೆ. ಆದುದರಿಂದ ತರವಾಡು ಒಂದು ಸುಭದ್ರ ಸಮಾಜ ನಿರ್ಮಾಣಕ್ಕೆ ಉತ್ತಮ ಅಡಿಪಾಯ ಹಾಕುವಲ್ಲಿ , ಒಗ್ಗಟ್ಟಿನ ಜೀವನದ ಆದರ್ಶವನ್ನು ಕುಟುಂಬದ ಸದಸ್ಯರ ಮನದಲ್ಲಿ ಬೇರೂರುವಂತೆ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಸಾದ್‌ ಭಂಡಾರಿ ಕನಕತ್ತೋಡಿ, ಬಾಲಕೃಷ್ಣ ಮೇಸ್ತ್ರಿ ತಚ್ಚನಾಡ್‌, ಕೃಷ್ಣ ಮಣಿಯಾಣಿ ಹೊಸಮನೆ, ಸುಧಾಮ ಮಣಿಯಾಣಿ ಬೇಳೇರಿ, ಪದ್ಮನಾಭ, ಮೇಗಿನ ಮನೆ, ಮೋಹನ್‌ ಕೃಷ್ಣ ಕಿನ್ನಿಂಗಾರು ಸ್ವಾಗತಿಸಿ, ಅಪ್ಪಕುಂಞಿ ವಂದಿಸಿದರು. ರಾಘವ ಬೇಳೇರಿ ಕಾರ್ಯಕ್ರಮ ನಿರೂಪಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ