ಇಂದು ಸಮಾನತೆಯ ಸಂದೇಶ ಸಾರುವ “ತಿರುವೋಣಂ’

Team Udayavani, Aug 25, 2018, 12:28 PM IST

ಕಾಸರಗೋಡು: ಸಮಾನತೆಯ ಸಾರವನ್ನು ಶಾಂತಿ ಸಾಮರಸ್ಯದ ಸಂದೇಶವನ್ನು ಸಾರುವ ಕೇರಳೀಯರ ನಾಡ ಹಬ್ಬ “ಓಣಂ’. ಜಾತಿ, ಮತ, ಧರ್ಮಗಳ ಎಲ್ಲೆ ಮೀರಿ ಯಾವುದೇ ತಾರತಮ್ಯವಿಲ್ಲದೆ ಆಚರಿಸುವ ಓಣಂ ಹಬ್ಬ ಭಾವೈಕ್ಯತೆಯನ್ನು ಬಿಂಬಿಸಿ ಮುಖ್ಯ ವಾಹಿನಿಯಲ್ಲಿ ಬೆರೆಯುವುದು ಒಂದು ರಸ ಕ್ಷಣ. ಪ್ರೀತಿ, ಐಶ್ವರ್ಯ ಹಾಗೂ ಸಮೃದ್ಧಿಯ ಸಂಕೇತವಾಗಿರುವ ಓಣಂ ಉತ್ಸವದ ತಿರುವೋಣಂ ಆ. 25ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು. ಓಣಂ ಹಬ್ಬದ ಕೇರಳೀಯರಿಗೆ ಸಂತೋಷದ ಹೊನಲಿನ ಉತ್ಸವ. ಆದರೆ ಈ ಬಾರಿ ಕೇರಳದಲ್ಲಿ ಹಿಂದೆಂದೂ ಕಾಣದ ನೆರೆಯ ಹಾವಳಿಯಿಂದಾಗಿ ಓಣಂ ಹಬ್ಬಕ್ಕೆ ಮಂಕು ಉಂಟಾಗಿದೆ. ಸರಕಾರಿ ಮಟ್ಟದ ಯಾವುದೇ ಕಾರ್ಯಕ್ರಮ ಈ ಬಾರಿ ಇಲ್ಲ.

ಹೂವಿನ ರಂಗೋಲಿ, ಮಕ್ಕಳಾಟ, ವಿವಿಧ ಸ್ಪರ್ಧೆಗಳು, ಕ್ಲಬ್‌ಗಳ ವತಿಯಿಂದ ನಡೆಯುವ ಓಣಂ ಆಚರಣೆಗಳು ಈ ಬಾರಿ ಮಂಕಾಗಿದ್ದರೂ ಸಾಂಕೇತಿಕವಾಗಿ ಓಣಂ ಹಬ್ಬವನ್ನು ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ. ತಮ್ಮ ಮನೆಗಳಲ್ಲಿ ಮಾಡುವ ವಿಶೇಷ ಅಡುಗೆಗಳಿಗಾಗಿ ಬೇಕಾದ ಸಾಮಗ್ರಿ ಹೊಸಬಟ್ಟೆಗಳನ್ನು ಖರೀದಿಸಿ ಜನರು ಈಗಾಗಲೇ ಸಿದ್ಧರಾಗಿದ್ದಾರೆ.

ಸಂಪದ್ಭರಿತ, ಪ್ರಾಮಾಣಿಕ, ಅಸತ್ಯ ವಿಲ್ಲದ ಒಂದು ಉತ್ತಮ ಕಾಲದ ಸ್ಮರಣೆಯನ್ನು   ನವೀಕರಿಸುವ    ಹಬ್ಬವಾಗಿದೆ ಓಣಂ. ಇಲ್ಲಿ ಹಿಂದೆ ರಾಜ್ಯವನ್ನಾಳುತ್ತಿದ್ದ ಮಹಾಬಲಿಯ ಕಾಲವೆಂದರೆ ಅದು ಐಶ್ವರ್ಯ ಪೂರ್ಣ ಕಾಲ ಎಂದು ತಿಳಿಯಲಾಗಿದೆ. 

ಇದರ ಸ್ಮರಣೆಗಾಗಿ  ಮಹಾಬಲಿ ತನ್ನ ಪ್ರಜೆಗಳನ್ನು ನೋಡಲು ವರ್ಷಕ್ಕೊಮ್ಮೆ ಬರುತ್ತಾನೆ ಎಂಬ ನಂಬಿಕೆಯಲ್ಲಿ ಆತನನ್ನು ಸ್ವಾಗತಿಸಲು ಹೂವಿನ ರಂಗೋಲಿ “ಪೂಕಳಂ’ ರಚಿಸಿ ಸಿದ್ಧರಾಗಿದ್ದಾರೆ. ಆದರೆ ಈ ಬಾರಿ ರಾಜ್ಯದಲ್ಲಿ ಉಂಟಾದ ನೆರೆಯಿಂದ ಲಕ್ಷಾಂತರ ಮಂದಿ ಸಂಕಷ್ಟ ಅನುಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಓಣಂ ಹಬ್ಬಕ್ಕೆ ಸಂಬಂಧಿಸಿ ಯಾವುದೇ ಸದ್ದುಗದ್ದಲವಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಚಿಕ್ಕಮಗಳೂರು: ವಿಶಾಲ ದೃಷ್ಟಿಕೋನದೊಂದಿಗೆ ಭಾರತದ ಸಾರ್ವಭೌಮತ್ವದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ ಉದ್ದೇಶದೊಂದಿಗೆ ಸಂವಿಧಾನ ರಚನೆ ಮೂಲಕ ಎಲ್ಲಾ ವರ್ಗದ...

  • ಚಿಕ್ಕಮಗಳೂರು: ಅಡುಗೆ ಅನಿಲವನ್ನು ಸರಿಯಾಗಿ ಪೂರೈಕೆ ಮಾಡದಿರುವುದನ್ನು ಖಂಡಿಸಿ ಮಂಗಳವಾರ ಬೆಳಗ್ಗೆ ಗ್ರಾಹಕರು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಜಿಲ್ಲಾಧಿಕಾರಿ...

  • ಚಿಕ್ಕಬಳ್ಳಾಪುರ: ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣಾ ಅಖಾಡದ ಮತ ಎಣಿಕೆಗೆ ಇನ್ನೂ ಕೇವಲ 24 ಗಂಟೆ ಮಾತ್ರ ಬಾಕಿ ಇದೆ. ಆದರೆ ಜಿಲ್ಲೆಯಲ್ಲಿ...

  • ಚಿಕ್ಕಬಳ್ಳಾಪುರ: ಕಳೆದ ಏ.18 ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಒಟ್ಟು 2,284 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮೇ.23 ರಂದು ನಗರದ ಹೊರ ವಲಯದ...

  • ಸಂತೆಮರಹಳ್ಳಿ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿರುವ ಪಡಸಾಲೆಯಲ್ಲಿ ಆಧಾರ್‌ ನೋಂದಣಿಯನ್ನು ಪುನಾರಂಭ ಮಾಡಲಾಗಿದೆ. ಈ ಬಗ್ಗೆ ಉದಯವಾಣಿ ಮೇ. 15 ರಂದು ಆಧಾರ್‌...

  • ಚಾಮರಾಜನಗರ: ಬಸವಾದಿ ಶರಣರು ಸ್ಥಾಪನೆ ಮಾಡಿರುವ ವೀರಶೈವ ಲಿಂಗಾಯತ ಧರ್ಮ ಸಂವಿಧಾನ ಕಲಂನಲ್ಲಿ ಪ್ರತ್ಯೇಕ ಧರ್ಮವಾಗುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು...