ಖಾಸಗಿ ಬಸ್ಸುಗಳ ಬಣ್ಣ ಬದಲಾವಣೆಯಿಂದ ಪ್ರಯಾಣಿಕರಲ್ಲಿ ಗೊಂದಲ!


Team Udayavani, May 6, 2018, 6:05 AM IST

3-kbl-1.jpg

ಕುಂಬಳೆ: ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಡ್ರೆಸ್‌ಕೋಡ್‌ ಇದ್ದಂತೆ ಇದೀಗ ಖಾಸಗಿ ಬಸ್ಸುಗಳಿಗೆ ಕಲರ್‌ಕೋಡ್‌ ಕಾಯಿದೆ ಜಾರಿಗೊಳಿಸಲಾಗಿದೆ.ಕೇರಳದ 14 ಜಿಲ್ಲೆಗಳ ಖಾಸಗಿ ಬಸ್ಸುಗಳಿಗೆ ಒಂದೊಂದು ಬಣ್ಣಗಳನ್ನು ನಿರ್ಧರಿಸಲಾಗಿದೆ.ಬಸ್ಸುಗಳ ವಾರ್ಷಿಕ ತಪಾಸಣೆಯ ಸಂದರ್ಭದಲ್ಲಿ ಖಾಸಗಿ ಬಸ್ಸುಗಳ ಬಣ್ಣವನ್ನು ಕಡ್ಡಾಯವಾಗಿ ಬದಲಾಯಿಸಬೇಕಾಗಿದೆ.

ಕಾಸರಗೋಡು ಜಿಲ್ಲೆಯ ಖಾಸಗಿ ಬಸ್ಸುಗಳಿಗೆ ನೀಲಿ ಬಣ್ಣವನ್ನು ನಿರ್ಧರಿಸಲಾಗಿದೆ.ಪೂರ್ತಿ ನೀಲಿ ಬಣ್ಣದೊಂದಿಗೆ ಬಸ್ಸಿನ ಕೆಳಭಾಗಕ್ಕೆ ಮೂರು ಲೈನ್‌ ಬಿಳಿ ಬಣ್ಣವನ್ನು ಬಳಿಯಲಾಗುವುದು.ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅನೇಕ ಬಸ್ಸುಗಳು ತಮ್ಮ ಬಣ್ಣ ಬದಲಾಯಿಸುತ್ತಿವೆ.

ರಾಜ್ಯದಲ್ಲಿ ಸಾಮರಸ್ಯ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆಯಂತೆ.ಯಾವುದಾದರೂ ಅಹಿತಕರ ಘಟನೆ ನಡೆದಲ್ಲಿ , ಹರತಾಳದಂದು ಬಸ್ಸುಗಳ ಬಣ್ಣ ನೋಡಿ ಕಲ್ಲೆಸೆದು ಹಾನಿಗೊಳಿಸುವುದನ್ನು ತಪ್ಪಿಸಲು ಈ ರೀತಿಯ ನಿರ್ಧಾರವನ್ನು ಕೈಗೊಳ್ಳಲಾಗಿದೆಯಂತೆ.ಅದೇ ರೀತಿ ರಸ್ತೆ ಪಕ್ಕದ ತಂಗುದಾಣಗಳಿಗೂ ನೀಲಿ ಬಿಳಿಯ ಬಣ್ಣವನ್ನು ಬಳಿಯಲಾಗುವುದು.

ಟೈಮ್‌ ಕೀಪರ್‌ರವರ ಸಮಯ ಪಾಲನೆಯ ಮಧ್ಯೆ ಲಗುಬಗನೆ ಬಸ್ಸುಗಳಲ್ಲಿ ಪ್ರಯಾಣಿ ಕರು ಊರಿನ ನಾಮಫಲಕವನ್ನು ನೋಡಿ ಏರಬೇಕಾಗಿದೆ. ಹಿಂದೆ ತಮ್ಮ ಊರಿಗೆ ತೆರಳುವ ಬಸ್ಸಿನ ಬಣ್ಣವನ್ನು ಗುರುತಿಸಿ ಬಸ್ಸನ್ನೇರಲು ಸುಲಭವಾಗುತ್ತಿತ್ತು. ಇದೀಗ ಬಸ್ಸುಗಳ ಬಣ್ಣ ಬದಲಾವಣೆಯಿಂದ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಅನಕ್ಷರಸ್ಥ ಮಹಿಳೆ ಬಸ್ಸಿನ ಬಣ್ಣ ಬದಲಾವಣೆಯಿಂದ ಸಂಕಷ್ಟ ಅನುಭವಿಸಿದ ವೀಡಿಯೊ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಖಾಸಗಿ ಬಸ್ಸುಗಳ ಇನ್‌ಸ್ಪೆಕ್ಷನ್‌ ಸಂದರ್ಭದಲ್ಲಿ ಸಣ್ಣಪುಟ್ಟ ಬದಲಾವಣೆಯೊಂದಿಗೆ ಆಗುತ್ತಿದ್ದ ಖರ್ಚುವೆಚ್ಚ ಇದೀಗ ಬಣ್ಣ ಬದಲಾವಣೆಯಿಂದ ದುಪ್ಪಟ್ಟಾಗುವುದಾಗಿ ಬಸ್‌ ಮಾಲಕರ ಆರೋಪ. ದಿನದಿಂದ ದಿನಕ್ಕೆ ಏರುತ್ತಿರುವ ಇಂದನ ಬೆಲೆ, ಟಯರ್‌, ಬಿಡಿಭಾಗಗಳ ಬೆಲೆ ಏರಿಕೆ, ವಾರ್ಷಿಕ ತೆರಿಗೆ, ವಿಮಾ ಮೊತ್ತ ಹೆಚ್ಚಳದಿಂದ ನಷ್ಟ ಅನುಭವಿಸಬೇಕಾಗಿದೆ. ಮತ್ತು ಹೆದ್ದಾರಿಯ ಅಲ್ಲಲ್ಲಿ ಸರಕಾರಿ ಸಾರಿಗೆ ಬಸ್ಸುಗಳಿಗೆ ನಿಲುಗಡೆಗೆ ಅವಕಾಶ ಮಾಡಿರುವುದರಿಂದ ಖಾಸಗಿ ಬಸ್ಸುಗಳಿಗೆ ಪ್ರಯಾ ಣಿಕರ ಕೊರತೆ ಕಾಡುತ್ತಿದೆ. ಇದರಿಂದ ಖಾಸಗಿ ಬಸ್‌ ಉದ್ಯಮ ನಷ್ಟದ ಹಾದಿಯಲ್ಲಿ ಸಾಗುತ್ತಿದೆ.

ಕೇರಳ ರಾಜ್ಯ ಸರಕಾರಿ ಬಸ್ಸುಗಳಲ್ಲಿ ವಿದ್ಯಾರ್ಥಿ ಗಳಿಗೆ ರಿಯಾಯತಿ ದರ ನೀಡದೆ ಮಕ್ಕಳು ಖಾಸಗಿ ಬಸ್ಸಲ್ಲಿ ತುಂಬಿ ತುಳುಕುವುದರಿಂದ ಇತರ ಪ್ರಯಾಣಿಕರು ಈ ಬಸ್ಸನ್ನೇರಲು ಹಿಂಜರಿಯುತ್ತಿ ರುವುದಾಗಿ ಖಾಸಗಿ ಬಸ್‌ ಮಾಲಕರ ಆರೋಪವಾಗಿದೆ. ಈಗಾಗಲೇ ನಷ್ಟದಿಂದ ಅನೇಕ ಖಾಸಗಿ ಬಸ್‌ಗಳು ಬಂದ್‌ ಆಗಿವೆ. ಕೆಲವು ಬಸ್ಸುಗಳು ಪ್ರಯಾಣಿಕರ ಕೊರತೆಯಿಂದ ಕೆಲವು ಟ್ರಿಪ್‌ಗ್ಳನ್ನು ಮೊಟಕುಗೊಳಿಸುವುದು ಅನಿವಾರ್ಯವಾಗಿದೆ.ಖಾಸಗಿ ಬಸ್‌ಗಳು ವಿವಿಧ ಬೇಡಿಕೆಗಳನ್ನು ಮುಂದಿ ರಿಸಿ ಇತೀ¤ಚೆಗೆ ಸಂಪು ಹೂಡಿದರೂ ಇದಕ್ಕೆ ಸರಕಾರ ಬೆಲೆ ನೀಡದೆ ದರ್ಪ ತೋರಿರುವುದಾಗಿ ಬಸ್‌ ಮಾಲಕರು ಆರೋಪಿಸುತ್ತಿದ್ದಾರೆ. ಮುಷ್ಕರ ನಿಲ್ಲಿಸಿ ಮಾತುಕತೆಗೆ ಬನ್ನಿ ಎಂಬುದಾಗಿ ಸಿಎಂ ಹೇಳಿದರೂ ಕೊನೆಗೆ ಮಾತುಕತೆಗೆ ಸಿದ್ಧವಾಗಿಲ್ಲವಂತೆ.ಇದರಿಂದ ಸಮಸ್ಯೆ ಪರಿಹಾರವಾಗಿಲ್ಲ. ಸರಕಾರಕ್ಕೆ ಖಾಸಗಿ ಬಸ್ಸುಗಳ ಕೋಟಿಗಟ್ಟಲೆ ವಾರ್ಷಿಕ ತೆರಿಗೆ ಪಾವತಿಯಾಗುತ್ತಿದ್ದರೂ ಸಮಸ್ಯೆಯ ಪರಿಹಾರಕ್ಕೆ ಸರಕಾರ ಮುಂದಾಗುವುದಿಲ್ಲವೆಂಬ ಚಿಂತೆ ಇವರದು.
 
ಬಹಳ ಹಿಂದಿನಿಂದಲೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿ ಖಾಸಗಿ ಬಸ್‌ಗಳನ್ನು ಉಳಿಸಬೇಕೆಂಬ ನಿಲುವು ಹೆಚ್ಚಿನ ಪ್ರಯಾಣಿಕರದು. ಖಾಸಗಿ ಬಸ್ಸುಗಳ ಬಣ್ಣ ಬದಲಾಯಿಸುವುದು ವಿಮಾ ಕಂತು ಮತ್ತು ತೆರಿಗೆ ವೃದ್ಧಿಸುವುದರೊಂದಿಗೆ ಸಮಸ್ಯೆಯನ್ನೂ ಪರಿಹರಿಸಲು ಸರಕಾರ ಮುಂದಾಗಬೇಕಾಗಿದೆ.

ಒಂದೇ ಬಣ, ನಮ್ಮ ಬಸ್‌ ಯಾವುದಣ್ಣಾ
ಬಸ್ಸುಗಳ ಈ ಬಣ್ಣ ಬದಲಾವಣೆಯಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ. ತಮ್ಮ ಊರಿಗೆ ಪ್ರಯಾಣ ಬೆಳೆಸುವ ಬಸ್ಸಿನ ಬಣ್ಣವನ್ನು ದೂರದಿಂದಲೇ ಗುರುತಿಸಿ ಬಸ್ಸುಗಳನ್ನೇರುತ್ತಾರೆ. ಆದರೆ ಇದೀಗ ಎಲ್ಲ ಬಸ್ಸುಗಳು ಒಂದೇ ಬಣ್ಣದವುಗಳಾಗಿರುವುದರಿಂದ ಆತಂಕಕ್ಕೀಡಾಗಿದ್ದಾರೆ. ಅದರಲ್ಲೂ ನಿರಕ್ಷರಿಗಳು ಮತ್ತು ಮಹಿಳೆಯರು ಪರದಾಡಬೇಕಾಗಿದೆ. ಬಸ್‌ ನಿಲ್ದಾಣಗಳಿಗೆ ಸಾಲಾಗಿ ಬರುವ ನೀಲಿ ಬಣ್ಣದ ಬಸ್ಸುಗಳಲ್ಲಿ ತಮ್ಮ ಊರಿಗೆ ತೆರಳುವ ಬಸ್‌ಗಳನ್ನು ಹುಡುಕುವ ತವಕದಲ್ಲಿ ಬಸ್ಸುಗಳು ತೆರಳಿಯಾಗಿರುತ್ತವೆ. ಕೆಲವು ಬಾರಿ ನಿಲ್ದಾಣದಲ್ಲಿ ಇಳಿದ ಚಾಲಕರು ಮತ್ತು  ನಿರ್ವಾಹಕರು ತಮ್ಮ ಬಸ್‌ ತಪ್ಪಿ ಬೇರೆ ಬಸ್ಸನ್ನೇರಿದ ಘಟನೆಯೂ ನಡೆದಿದೆ.
ಕರ್ನಾಟಕದಿಂದ ಹೊಸದಾಗಿ ಆರಂಭಿಸಿದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕೆಲವು ಬಸ್ಸುಗಳೂ ನೀಲಿ ಬಣ್ಣವನ್ನು ಹೊಂದಿದೆ. ಇದು ಖಾಸಗಿ ಬಸ್ಸುಗಳ ಮಧ್ಯೆ ನಿಂತಾಗ ಕೆಲವು ಪ್ರಯಾಣಿಕರು ಇದನ್ನು ಖಾಸಗಿ ಬಸ್ಸೆಂದು ನಂಬಿ ಏರುವುದೂ ಇದೆ.

– ಅಚ್ಯುತ ಚೇವಾರ್‌

ಟಾಪ್ ನ್ಯೂಸ್

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Amit Shah

Modi 3.0 ಅವಧಿಯಲ್ಲಿ ನಕ್ಸಲ್‌ ಮುಕ್ತ ದೇಶ: ಅಮಿತ್‌ ಶಾ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.