ಕುತ್ತಿಕೋಲ್‌: ನವೀಕರಣಕ್ಕೆ ಸಿದ್ಧವಾಗಿರುವ ಪೊಟ್ಟಂಕೆರೆ

Team Udayavani, Jun 16, 2019, 6:10 AM IST

ಕಾಸರಗೋಡು: ಸಾರ್ವಜನಿಕರ ಅನೇಕ ಕಾಲದ ಆಗ್ರಹ ನೆರವೇರಿಸುವ ನಿಟ್ಟಿನಲ್ಲಿ ಕುತ್ತಿಕೋಲ್‌ ಗ್ರಾಮ ಪಂಚಾಯತ್‌ನ ಪೊಟ್ಟಂಕೆರೆ ಪುನಶ್ಚೇತನಕ್ಕೆ ಸಿದ್ಧವಾಗಿದೆ.

ಜಿಲ್ಲಾ ಪಂಚಾಯತ್‌ನ 5 ಲಕ್ಷ ರೂ., ಕಾರಡ್ಕ ಬ್ಲಾಕ್‌ ಪಂಚಾಯತ್‌ನ ಏಳೂವರೆ ಲಕ್ಷ ರೂ.ನಂತೆ 12.5 ಲಕ್ಷ ರೂ. ವೆಚ್ಚದಲ್ಲಿ ಪೊಟ್ಟಂ ಕೆರೆ ಪುನರ್‌ ನಿರ್ಮಾಣಗೊಳ್ಳಲಿದೆ.

ಇದರ ಕಾಮಗಾರಿಯ ಉದ್ಘಾಟನೆ ಶೀಘ್ರದಲ್ಲೇ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕುತ್ತಿಕೋಲ್‌ ಗ್ರಾಮ ಪಂಚಾಯತ್‌ನ 16ನೇ ವಾಡ್‌ ಆಗಿರುವ ಇಡಕ್ಕಾಡ್‌ ಎಂಬ ಪ್ರದೇಶದಲ್ಲಿ ಈ ಪೊಟ್ಟಂಕೆರೆ ಇದೆ.

ಈ ಪ್ರದೇಶದ ಬಹುತೇಕ ಮಂದಿ ಕೃಷಿಕರಾಗಿದ್ದಾರೆ. ಹಿಂದೆ ಈ ಕೆರೆಯ ನೀರನ್ನು ಇಲ್ಲಿನ ಜನ ನಿತ್ಯೋಪಯೋಗಕ್ಕೆ ಬಳಸುತ್ತಿದ್ದರು.

ಇಂದು ಕೆರೆಯ ಆವರಣ ತುಂಬ ಕಾಡುಪೊದೆ ಬೆಳೆದು, ನೀರು ಹಾಳಾಗಿದೆ. ಕೆರೆಯ ನವೀಕರಣದೊಂದಿಗೆ ಇಲ್ಲಿನ ಎಕ್ರೆ ಗಟ್ಟಲೆ ಕೃಷಿ ಜಾಗಕ್ಕೆ ನೀರಾವರಿ ಒದಗಲಿದೆ.

ಭೂಗರ್ಭ ಜಲದ ಸಂರಕ್ಷಣೆ ಮತ್ತು ಪ್ರಕೃತಿ ಸಂರಕ್ಷಣೆಯೂ ನಡೆಯಲಿದೆ ಎಂದು ಪಂಚಾಯತ್‌ ಪದಾ ಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ