ಜಿಲ್ಲೆಯಲ್ಲಿ ಹರತಾಳ: ಜನಜೀವನ ಅಸ್ತವ್ಯಸ್ತ

ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ

Team Udayavani, Dec 17, 2019, 8:53 PM IST

cv-23

ಕಾಸರಗೋಡು: ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಪ್ರತಿಭಟಿಸಿ ಸಂಯುಕ್ತ ಸಮಿತಿ ಕರೆ ನೀಡಿದ ಹರತಾಳದಿಂದ ಕಾಸರಗೋಡು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಎಸ್‌.ಡಿ.ಪಿ.ಐ, ವೆಲ್ಫೆàರ್‌ ಪಾರ್ಟಿ, ಬಿ.ಎಸ್‌.ಪಿ. ಮೊದಲಾದ ಸಂಘಟನೆಗಳ ಸಂಯುಕ್ತ ಸಮಿತಿ ಹರತಾಳಕ್ಕೆ ಕರೆ ನೀಡಿತ್ತು.

ಹರತಾಳದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು, ಕೆಎಸ್‌ಆರ್‌ಟಿಸಿ ಬಸ್‌ಗ ಸಂಚಾ ರ ಸಂಪೂರ್ಣ ಮೊಟಕುಗೊಂಡಿತ್ತು. ಮಂಗಳವಾರ ಬೆಳಗ್ಗೆ ಕೇರಳ ಕೆ.ಎಸ್‌.ಆರ್‌.ಟಿ.ಸಿ.ಯ ಕೆಲವೊಂದು ಬಸ್‌ಗಳು ಪೊಲೀಸ್‌ ಬೆಂಗಾವಲಿನಲ್ಲಿ ಕಾಂಞಂಗಾಡ್‌, ಪಯ್ಯನ್ಯೂರಿಗೆ ಸರ್ವಿಸ್‌ ನಡೆಸಿತ್ತು. ಆ ಬಳಿಕ ನಿಲುಗಡೆಗೊಂಡಿದ್ದವು. ಕಾಸರಗೋಡಿನಲ್ಲಿ ಖಾಸಗಿ ವಾಹನಗಳು ಯಾವುದೇ ಅಡ್ಡಿಯಿಲ್ಲದೆ ಸಂಚರಿಸಿದವು. ಆಟೋ ರಿಕ್ಷಾ, ದ್ವಿಚಕ್ರ ವಾಹನಗಳು, ಕಾರು ಮೊದಲಾದವು ಸಂಚಾರ ನಡೆಸಿವೆ. ಸರಕು ಲಾರಿಗಳನ್ನು ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ನಿಲುಗಡೆಗೊಳಿಸಲಾಗಿದೆ. ಕಾಂಞಂಗಾಡ್‌ನ‌ಲ್ಲಿ ಖಾಸಗಿ ಬಸ್‌ಗಳು ಸರ್ವಿಸ್‌ ನಡೆಸಿವೆ. ಬೆಳಗ್ಗೆ ಆರು ಗಂಟೆಗೆ ಆರಂಭಗೊಂಡ ಹರತಾಳ ಸಂಜೆ ಆರು ಗಂಟೆಯ ವರೆಗೆ ನಡೆಯಿತು. ಶಾಲೆಗಳು, ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯಾಚರಿಸಿದವು.

ಹರತಾಳ ಘೋಷಿಸಿದ್ದರೂ ಶಾಲೆಗಳಲ್ಲಿ ಪರೀಕ್ಷೆಗೆ ಸಂಬಂಧಿಸಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಸಾರ್ವಜನಿಕ ವಿದ್ಯಾಭ್ಯಾಸ ನಿರ್ದೇಶಕ ಕೆ.ಜೀವನ್‌ಬಾಬು ಅವರು ಶಾಲಾ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿದ್ದರು.

ಕಾಸರಗೋಡಿನಲ್ಲಿ ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ಆದರೆ ಕಾಂಞಂಗಾಡ್‌ನ‌ಲ್ಲಿ ಭಾಗಿಕವಾಗಿ ತೆರೆದಿದ್ದವು. ಕೆಲವೊಂದು ಕಡೆ ವಾಹನಗಳಿಗೆ ತಡೆ ನಡೆದಿದ್ದರೂ, ಪೊಲೀಸರು ಬಿಗು ಬಂದೋಬಸ್ತು ಏರ್ಪಡಿಸಿದ ಹಿನ್ನೆಲೆಯಲ್ಲಿ ಹರತಾಳ ಬಹುತೇಕ ಶಾಂತಿಯುತವಾಗಿತ್ತು. ಇದೇ ವೇಳೆ ಮಾಯಿಪ್ಪಾಡಿಯಲ್ಲಿ ಕೆಲವು ಮನೆಗಳಿಗೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ನಡೆದಿದೆ.

ಪ್ರತಿಭಟನ ಮೆರವಣಿಗೆ
ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಪ್ರತಿಭಟಿಸಿ ಸಂಯುಕ್ತ ಸಮಿತಿ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಮೆರವಣಿಗೆ ನಡೆಯಿತು. ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಿಂದ ಆರಂಭಿಸಿದ ಮೆರವಣಿಗೆ ಹಳೆ ಬಸ್‌ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಗೊಂಡಿತು. ಮೆರವಣಿಗೆಗೆ ಎಸ್‌ಡಿಪಿಐ ನೇತಾರರಾದ ಎನ್‌.ಯು. ಅಬ್ದುಲ್‌ ಸಲಾಂ, ಖಾದರ್‌ ಅರಫ, ವೆಲ್ಫೆರ್‌ ಪಾರ್ಟಿ ನೇತಾರರಾದ ಮುಹಮ್ಮದ್‌ ವಡಕ್ಕೆಕರ, ಅಂಬುಂಞಿ ತಲಕ್ಲಾಯಿ, ಪಿ.ಕೆ.ಅಬ್ದುಲ್ಲ, ಎಸ್‌ಡಿಟಿಯು ನೇತಾರ ಅಶ್ರಫ್‌ ಕೋಳಿಯಡ್ಕಂ, ಎಫ್‌ಐಟಿಯು ನೇತಾರ ಹಮೀದ್‌ ಕಕ್ಕಂಡಿ, ಸಾಲಿಡಾರಿಟಿ ನೇತಾರ ಸಿ.ಎ.ಯೂಸುಫ್‌, ಎಸ್‌.ಐ.ಒ. ನೇತಾರ ಎ.ಜಿ.ಜಾಸೀರ್‌, ಫಟೆರ್ನಿಟಿ ಮೂವ್‌ಮೆಂಟ್‌ ನೇತಾರ ಸಿರಾಜ್‌ ಮೊದಲಾದವರು ಮೆರವಣಿಗೆಗೆ ನೇತೃತ್ವ ನೀಡಿದರು.

ಮಾರಾರ್‌ ಜೀ ಸ್ಮಾರಕಕ್ಕೆ ಹಾನಿ
ಹರತಾಳದ ಹಿನ್ನೆಲೆಯಲ್ಲಿ ತೃಕ್ಕರಿಪುರದಲ್ಲಿ ಬಿಜೆಪಿಯ ಮಾರಾರ್‌ ಜೀ ಸ್ಮಾರಕ ಮಂದಿರ ಕಚೇರಿಗೆ ಮಂಗಳವಾರ ಮುಂಜಾನೆ ಅಕ್ರಮಿಗಳು ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಕಚೇರಿಯ ಬಾಗಿಲು ಮುರಿದು, ಅದರೊಳಗಿದ್ದ ಟಿವಿ, ಪೀಠೊಪಕರಣಗಳು ಇತ್ಯಾದಿಗಳನ್ನು ಧ್ವಂಸಗೊಳಿಸಲಾಗಿದೆ. ಇದರಿಂದ ಸಾವಿರಾರು ರೂ. ನಷ್ಟವಾಗಿದೆ. ಈ ಬಗ್ಗೆ ನೀಡಲಾದ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ಇದೇ ಸ್ಮಾರಕವನ್ನು ಮೂರು ಬಾರಿ ಹಾನಿಗೊಳಿಸಲಾಗಿತ್ತು.

ಆಂಶಿಕ ಪ್ರತಿಕ್ರಿಯೆ
ಬದಿಯಡ್ಕ, ಮುಳ್ಳೇರಿಯ, ಪೆರ್ಲ ಮೊದಲಾದೆಡೆಗಳಲ್ಲಿ ಹರತಾಳಕ್ಕೆ ಆಂಶಿಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪ್ರದೇಶಗಳಲ್ಲಿ ವ್ಯಾಪಾರ ಸಂಸ್ಥೆಗಳು ಆಂಶಿಕವಾಗಿ ತೆರೆದಿವೆೆ. ಖಾಸಗಿ ವಾಹನಗಳು, ಕೆಲವು ಆಟೋ ರಿಕ್ಷಾಗಳು ಸಂಚಾರ ನಡೆಸಿವೆ. ಆದರೆ ಬಸ್‌ ಸಂಚಾರವಿಲ್ಲದುದರಿಂದ ಜನ ಸಂಚಾರ ವಿರಳವಾಗಿತ್ತು. ಪೆರ್ಲದಲ್ಲಿ ಬಹುತೇಕ ಅಂಗಡಿಗಳು ತೆರೆದಿವೆ. ಆಟೋ ರಿಕ್ಷಾ, ಟ್ಯಾಕ್ಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿವೆ. ಕರ್ನಾಟಕದಿಂದ ಕಾಸರಗೋಡಿಗೆ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಮೊಟಕುಗೊಳಿಸಿವೆ.
ಮಂಜೇಶ್ವರ, ಉಪ್ಪಳ, ಕುಂಬಳೆ

ಪೇಟೆಯಲ್ಲಿ ಹರತಾಳದಿಂದಾಗಿ ಯಾವುದೇ ಅಂಗಡಿಗಳು ತೆರೆಯಲಿಲ್ಲ. ಬಸ್‌ಗಳು ಓಡಾಟ ನಡೆಯಲಿಲ್ಲ. ಆದರೆ ಕೆಲವೊಂದು ಆಟೋ ರಿಕ್ಷಾಗಳು, ಕಾರುಗಳು, ಬೈಕ್‌ಗಳು ಸಂಚಾರ ನಡೆಸಿತು. ಹೊಸಂಗಡಿಯಲ್ಲಿ ಅಂಗಡಿ, ಹೊಟೇಲ್‌ಗ‌ಳು ಮುಚ್ಚಿವೆ. ಉಪ್ಪಳ, ಕುಂಬಳೆಯಲ್ಲೂ ಅಂಗಡಿಗಳು, ಹೊಟೇಲ್‌ಗ‌ಳು ಮುಚ್ಚಿವೆ. ಆಟೋ ರಿಕ್ಷಾಗಳು ಕುಂಬಳೆಯಲ್ಲಿ ಸಂಚಾರ ನಡೆಸಿತು. ಉಪ್ಪಳ ಮೀನು ಮಾರುಕಟ್ಟೆಯಲ್ಲಿ ಮೀನು ಏಲಂ ನಡೆಸುತ್ತಿದ್ದ ಸ್ಥಳಕ್ಕೆ ತಲುಪಿದ ಹರತಾಳ ಬೆಂಬಲಿಗರು ಮೀನು ಏಲಂ ತಡೆಯಲು ಯತ್ನಿಸಿದರು. ಇದರಿಂದ ಕೆಲವು ಹೊತ್ತು ಉದ್ರಿಕ್ತ ಸ್ಥಿತಿಗೆ ಕಾರಣವಾಯಿತು. ಮಂಜೇಶ್ವರ ಸಿ.ಐ. ದಿನೇಶ್‌ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಮೀನು ಲಾರಿಗೆ ತಡೆ
ಹರತಾಳ ಬೆಂಬಲಿಗರು ಮೆರವಣಿಗೆಯ ಸಂದರ್ಭದಲ್ಲಿ ಹಳೆ ಬಸ್‌ ನಿಲ್ದಾಣ ಪರಿಸರದಲ್ಲಿ ಮೀನಿನ ಲಾರಿಯನ್ನು ತಡೆದು ನಿಲ್ಲಿಸಿದರು. ಹರತಾಳ ಬೆಂಬಲಿಗರನ್ನು ತೆರವುಗೊಳಿಸಲು ಯತ್ನಿಸುತ್ತಿದ್ದಾಗ ಯುವಕನೋರ್ವ ಕಾಸರಗೋಡು ಟೌನ್‌ ಸಿ.ಐ. ಅಬ್ದುಲ್‌ ರಹೀಮ್‌ ಅವರ ಕಾಲರ್‌ ಹಿಡಿದೆಳೆದ ಘಟನೆ ನಡೆಯಿತು. ಈ ಯುವಕನನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ಯತ್ನಿಸಿದಾಗ ಇತರರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಬಲ ಪ್ರಯೋಗಿಸಿ ಕಾಲರ್‌ ಹಿಡಿದ ಯುವಕನ ಸಹಿತ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಅನುಮತಿ ರಹಿತ ಮೆರವಣಿಗೆ
ಹರತಾಳಕ್ಕೆ ಬೆಂಬಲ ನೀಡಿ ಅನುಮತಿ ರಹಿತ ಮೆರವಣಿಗೆ ನಡೆಸಿದ 20 ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಿದ್ದಿಕ್‌, ಮುಸ್ತಫ ಚಕ್ಕುಡಲ್‌, ಆಸಿಫ್‌ ಮೂಕಂಪಾರೆ, ಕರೀಂ ಕಾಡಮನೆ ಸಹಿತ 20 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಡಿ. 16ರಂದು ರಾತ್ರಿ ಬದಿಯಡ್ಕ ಪೇಟೆಯಲ್ಲಿ ಗುಂಪೊಂದು ಮೆರವಣಿಗೆ ನಡೆಸಿತ್ತು.

91 ಮಂದಿ ವಿರುದ್ಧ ಕೇಸು
ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಪ್ರತಿಭಟಿಸಿ ಹರತಾಳಕ್ಕೆ ಮುನ್ನ ನಗರದಲ್ಲಿ ಮೆರವಣಿಗೆ ನಡೆಸಿದ ಸಂಯುಕ್ತ ಸಮಿತಿಯ ನೇತಾರರ ಸಹಿತ 91 ಮಂದಿ ವಿರುದ್ಧ ಕಾಸರಗೋಡು ನಗರ ಪೊಲೀಸರು ಕೇಸು ದಾಖಲಿಸಿದ್ದಾರೆ. ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಎನ್‌.ಯು.ಅಬ್ದುಲ್‌ ಸಲಾಂ, ಸಕರಿಯಾ, ಗಫೂರ್‌, ಬಶೀರ್‌, ಮುಹಮ್ಮದ್‌ ಬಾವಿಕರೆ, ಸಮೀರ್‌ ತಳಂಗರೆ, ನೌಫಲ್‌ ಉಳಿಯತ್ತಡ್ಕ, ಸಿದ್ದಿಕ್‌ ಪೆರಿಯ, ಮುಸ್ತಫ ಸಹಿತ 91 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಐಪಿಸಿ 143, 145, 283, 149 ಪೊಲೀಸ್‌ ಕಾಯ್ದೆಯಂತೆ ಕೇಸು ದಾಖಲಿಸಲಾಗಿದೆ.

8 ಮಂದಿ ವಶಕ್ಕೆ
ಹರತಾಳದ ನೆಪದಲ್ಲಿ ಉಳಿಯತ್ತಡ್ಕದಲ್ಲಿ ವಾಹನ ತಡೆಗೆ ಯತ್ನಿಸಿದ ಎಂಟು ಮಂದಿಯನ್ನು ವಿದ್ಯಾನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.