ಇಂದು ಪೆರಿಯಕ್ಕೆ  ರಾಹುಲ್‌ ಗಾಂಧಿ 

Team Udayavani, Mar 14, 2019, 1:00 AM IST

ಕಾಸರಗೋಡು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾ.14ರಂದು ಪೆರಿಯಕ್ಕೆ ಆಗಮಿಸಲಿದ್ದಾರೆ. ಪೆರಿಯ ಕಲೊÂàಟ್‌ನಲ್ಲಿ ಇತ್ತೀಚೆಗೆ ಕೊಲೆಯಾದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಾದ ಕೃಪೇಶ್‌ ಮತ್ತು ಶರತ್‌ಲಾಲ್‌ ಅವರ ಕುಟುಂಬಗಳನ್ನು ಭೇಟಿಯಾಗಲಿದ್ದಾರೆ.

ಮಾ.14ರಂದು ಮಧ್ಯಾಹ್ನ 1.30ಕ್ಕೆ ಕಣ್ಣೂರು ವಿಮಾನ ನಿಲ್ದಾಣ ತಲುಪುವ ಅವರು ಬಳಿಕ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಪೆರಿಯ ಕೇಂದ್ರೀಯ ವಿವಿ ಬಳಿಯ ಹೆಲಿಪ್ಯಾಡ್‌ನ‌ಲ್ಲಿ ಬಂದಿಳಿಯುವರು. ಅನಂತರ ಕಾರು ಮೂಲಕ ಪೆರಿಯ ಕಲೊÂàಟ್‌ಗೆ ತೆರಳಲಿದ್ದಾರೆ.

ಮೊದಲು ಕೃಪೇಶ್‌, ಬಳಿಕ ಶರತ್‌ಲಾಲ್‌ ಅವರ ಮನೆಗೆ ಭೇಟಿ ನೀಡಿ ಕುಟುಂಬಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಎರಡು ಮನೆಗಳಲ್ಲಿ ರಾಹುಲ್‌ ಗಾಂಧಿ ತಲಾ ಅರ್ಧ ತಾಸು ಇರುವರು. ಬಳಿಕ ಪೆರಿಯದಿಂದ ಹೆಲಿಕಾಪ್ಟರ್‌ನಲ್ಲಿ ಮಟ್ಟನ್ನೂರಿಗೆ ತೆರಳಿ ಕೊಲೆಗೀಡಾದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತ ಶುಹೈಬ್‌ ಮನೆಗೆ ಭೇಟಿ ನೀಡಲಿದ್ದಾರೆ. ರಾಹುಲ್‌ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ.

ಎಸ್‌ಪಿಜಿ ತಂಡ ಪೆರಿಯ ಕಲೊÂàಟ್‌ ತಲುಪಿದ್ದು, ಭದ್ರತಾ ಕ್ರಮಗಳ ಕುರಿತು ಅವಲೋಕನ ನಡೆಸಿದೆ. ರಾಹುಲ್‌ ಗಾಂಧಿಯವರ ವಾಹನ ಹಾದುಹೋಗುವ ರಸ್ತೆ, ಶರತ್‌ಲಾಲ್‌, ಕೃಪೇಶ್‌ ಅವರ ಮನೆ ಪರಿಸರ ಸಂಪೂರ್ಣ ಎಸ್‌ಪಿಜಿ ತಂಡದ ನಿಗಾದಲ್ಲಿರುವುದು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ