ಸಾಹಿತಿ, ಕಲಾವಿದರ ಸುಖ ದುಃಖ ತೆರೆದುಕೊಂಡ ‘ಸಾಹಿತ್ಯ ಸಂತೆ’

Team Udayavani, Dec 24, 2018, 12:51 PM IST

ಕಾಸರಗೋಡು: ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಕರಂದಕ್ಕಾಡಿನ ‘ಪದ್ಮಗಿರಿ ಕಲಾಕುಟೀರ’ದಲ್ಲಿ ‘ಸಾಹಿತ್ಯ ಸಂತೆ’ ಬದುಕಿನ ಸಣ್ಣ ಸುಖಗಳು…. ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಹಿತಿ, ಕಲಾವಿದರು ತಮ್ಮ ಸುಖ, ದು:ಖವನ್ನು ತೆರೆದುಕೊಂಡು ಕಾರ್ಯಕ್ರಮಕ್ಕೆ ಹೊಸ ರಂಗು ನೀಡಿದರು.

ಡಾ|ವಿವೇಕ ರೈ, ಡಾ|ನಾ.ದಾಮೋದರ ಶೆಟ್ಟಿ, ಖ್ಯಾತ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎಸ್‌.ಪುಣಿಂಚಿತ್ತಾಯ, ಖ್ಯಾತ ವೈದ್ಯ ಡಾ|ಶ್ರೀಪಾದ್‌ ರಾವ್‌, ಪತ್ರಕರ್ತ ಯು.ಕೆ.ಕುಮಾರನಾಥ್‌ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಯಾವುದೇ ಕಾರ್ಯದಲ್ಲೂ ಸಾಕಷ್ಟು ಚಿಂತಿಸಿದ ಬಳಿಕವೇ ಮುನ್ನಡಿ ಇಡಬೇಕು. ಇಲ್ಲದಿದ್ದರೆ ಬದುಕಿನಲ್ಲಿ ಸಮಸ್ಯೆಗಳ ಸರಮಾಲೆ ಎದುರಿಸಬೇಕಾಗುತ್ತದೆ ಎಂದು ಡಾ|ವಿವೇಕ ರೈ ಅವರು ಹೇಳಿದರು. ಈ ಮಾತುಗಳಿಗೆ ಜರ್ಮನಿಯಲ್ಲಿ ಕಳೆದ ದಿನಗಳಲ್ಲಿ ಎದುರಿಸಿದ ಸಮಸ್ಯೆಗಳನ್ನು ಉದಾಹರಣೆಯನ್ನಿತ್ತರು. ಮನುಷ್ಯ ರಿಲ್ಯಾಕ್ಸ್‌ ಆದಾಗ ಸಾಧನೆಗೆ ಸುಗಮವಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಕಾಲದ ಹರಿವಿನಲ್ಲಿ ಕೊಚ್ಚಿಹೋದ, ಹತ್ತಿರವಿದ್ದರೂ ದೂರವಾದ, ತೆರೆಯಲೆತ್ನಿಸಿದರೂ ಮುಚ್ಚಿಹೋದ, ನಗಲೆತ್ನಿಸಿದರೂ ಅಳುವಾದ, ಅಳಲೆತ್ನಿಸಿದರೆ ಜೀವನವೇ ಆದ, ಎಷ್ಟೆಷ್ಟೋ ಪರಸ್ಪರ ಹಂಚ ಬೇಕಾಗಿದ್ದ ಸಿಹಿ ಕಹಿ ನೆನಪುಗಳು, ಕಾಲಗರ್ಭದೊಳಗಿಂದ ಹೊರ ಜಿಗಿಯಲು ಇದೊಂದು ವಿಶಿಷ್ಟ, ವಿಭಿನ್ನ ಅವಕಾಶವನ್ನೊದಗಿಸಿತು.

ಕಾರ್ಯಕ್ರಮದಲ್ಲಿ ರವೀಂದ್ರ ಜೋಷಿ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಡಾ|ವಸಂತ ಕುಮಾರ್‌ ಪೆರ್ಲ, ಶಶಿರಾಜ ಕಾವೂರು, ಬಿ.ಎನ್‌. ಸುಬ್ರಹ್ಮಣ್ಯ, ಸ್ನೇಹಲತಾ ದಿವಾಕರ್‌, ಕವಿತಾ ಕೂಡ್ಲು, ಗೀತಾ ಕೋಟೆ ಸುಳ್ಯ, ಸೀತಾಲಕ್ಷ್ಮೀ ಕರ್ಕಿಕೋಡಿ, ಚೇತನ ಕುಂಬಳೆ, ಯಶವಂತ ಬೋಳೂರು, ಮಲಾರ್‌ ಜಯರಾಮ ರೈ, ಯೋಗೀಶ್‌ ರಾವ್‌ ಚಿಗುರುಪಾದೆ, ಪ್ರವೀಣ ಪುಣಿಂಚಿತ್ತಾಯ, ಮುಹಮ್ಮದ್‌ ಅನ್ಸಾರಿ, ಜ್ಯೋತಿಪ್ರಭಾ ಎಸ್‌.ರಾವ್‌, ಬಿ.ನರಸಿಂಗ ರಾವ್‌, ಹರೀಶ್‌ ಒಡ್ಡಂಬೆಟ್ಟು, ಗಣೇಶ್‌ ಪೈ ಬದಿಯಡ್ಕ, ಗೋವಿಂದ ಭಟ್‌ ಬಳ್ಳಮೂಲೆ, ಡಾ|ಸುದೇಶ್‌ ರಾವ್‌, ಟಿ.ಶಂಕರನಾರಾಯಣ ಭಟ್‌, ಕಿಶೋರ್‌ ಪೆರ್ಲ, ಸಾಯಿಭದ್ರಾ ರೈ, ಸತೀಶ್ಚಂದ್ರ ಭಂಡಾರಿ ಕೋಳಾರು, ಜಯಾನಂದ ಹೊಸದುರ್ಗ, ಬಿ.ರಾಮಮೂರ್ತಿ, ಸುಬ್ಬಣ್ಣ ಶೆಟ್ಟಿ, ಉದಯ ಕುಮಾರ್‌ ಮನ್ನಿಪ್ಪಾಡಿ, ರಘು ಮೀಪುಗುರಿ ಮೊದಲಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ರಂಗಚಿನ್ನಾರಿ ಸಂಚಾಲಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಭಯ ನಿವಾರಣೆಯಾಗಬೇಕು
ಮಕ್ಕಳಲ್ಲಿ ಭಯ ಹುಟ್ಟಿಸುವುದರಿಂದ ಜೀವನ ಪರ್ಯಂತ ಭಯ ಕಾಡುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಭಯವನ್ನು ಹುಟ್ಟಿಸದೆ ವಾಸ್ತವವನ್ನು ಮನನ ಮಾಡಬೇಕು ಎಂದು ಡಾ|ನಾ.ದಾಮೋದರ ಶೆಟ್ಟಿ ಅವರು ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ