ರಾ.ಹೆದ್ದಾರಿ: ಗುಡ್ಡೆ ಕುಸಿತ ಭೀತಿ

Team Udayavani, Aug 13, 2019, 5:01 AM IST

ಕಾಸರಗೋಡು: ರಾಜ್ಯ ಹೆದ್ದಾ ರಿಯ ಕೆ.ಎಸ್‌.ಟಿ.ಪಿ. ರಸ್ತೆಯ ಕಾಸರಗೋಡು ಪ್ರಸ್‌ ಕ್ಲಬ್‌ ಜಂಕ್ಷನ್‌ನ ಗುಡ್ಡ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಆತಂಕಕ್ಕೆ ಕಾರಣವಾಗಿದೆ.

ಕಾಸರಗೋಡು-ಕಾಂಞಂಗಾಡ್‌ ರಾಜ್ಯ ಹೆದ್ದಾರಿಯಲ್ಲಿ ಪ್ರಸ್‌ ಕ್ಲಬ್‌ ಜಂಕ್ಷನ್‌ನ ಇಕ್ಕೆಲ ಗಳಲ್ಲಿರುವ ಎತ್ತರದ ಗುಡ್ಡದ ಒಂದು ಭಾಗದಲ್ಲಿ ಬಿರುಕುಬಿಟ್ಟಿದ್ದು ಯಾವುದೇ ಕ್ಷಣದಲ್ಲೂ ಕುಸಿದುಬೀಳುವ ಸಾಧ್ಯತೆಯ ಬಗ್ಗೆ ಭೀತಿ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆ ಯಲ್ಲಿ ರಸ್ತೆಯಲ್ಲಿ ಸಾಗುವ ವಾಹನಗಳನ್ನು ಗುಡ್ಡದ ಬದಿಯಲ್ಲಿ ಸಾಗದಂತೆ ರಸ್ತೆ ತಡೆ ನಿರ್ಮಿಸಲಾಗಿದೆ. ಅಲ್ಲದೆ ಪೊಲೀಸರನ್ನು ಸುರಕ್ಷೆಗಾಗಿ ನೇಮಿಸಲಾಗಿದೆ.

ಕಾಂಞಂಗಾಡ್‌ನಿಂದ ಕಾಸರಗೋಡಿಗೆ ಬರುವ ಈ ಹೆದ್ದಾರಿಯ ಪ್ರಸ್‌ ಕ್ಲಬ್‌ ಜಂಕ್ಷನ್‌ನಿಂದ ಕೆಲವೇ ದೂರದಲ್ಲಿರುವ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಬಿರುಕು ವಿಸ್ತರಿಸುತ್ತಿದೆ. ಈ ಕಾರಣದಿಂದ ಅಪಾಯವನ್ನು ಎದುರಿಸಲು ಈಗಾಗಲೇ ರಸ್ತೆಯ ಒಂದು ಭಾಗದಲ್ಲಿ ವಾಹನಗಳನ್ನು ನಿಷೇಧಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ರಸ್ತೆಯ ಇಕ್ಕೆಲ ಗಳಲ್ಲಿದ್ದ ಗುಡ್ಡ ನಿರಂತರವಾಗಿ ಮಳೆಗಾಲದಲ್ಲಿ ಕುಸಿದು ಬಿದ್ದು ಕೆಲವು ದಿನಗಳ ವರೆಗೆ ರಸ್ತೆ ತಡೆ ಸಾಮಾನ್ಯವಾಗಿತ್ತು. ಇದೀಗ ಮತ್ತೆ ಗುಡ್ಡದಲ್ಲಿ ಬಿರುಕು ಬಿಟ್ಟಿರುವುದರಿಂದ ಮತ್ತೆ ಭೀತಿಗೆ ಕಾರಣವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ