‘ಸಾಮರಸ್ಯದಿಂದ ಕೂಡಿದ ಮನಸ್ಸುಗಳು ಒಂದಾಗಿವೆ’

Team Udayavani, Aug 16, 2019, 6:35 AM IST

ದೇಶದ 73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗುರುವಾರ ಕಾಸರಗೋಡು ವಿದ್ಯಾನಗರದ ಮುನ್ಸಿಪಲ್ ಮೈದಾನದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣಗೈದು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರದ ಪ್ರಜಾಪ್ರಭುತ್ವವು ಸ್ಪಷ್ಟ ಗುರಿಗಳನ್ನು ಹೊಂದಿದ್ದು, ಪಕ್ಷಪಾತ ಧೋರಣೆಗಳ ವ್ಯವಸ್ಥೆಗೆ ಪ್ರಜಾಪ್ರಭುತ್ವದಲ್ಲಿ ಅಸ್ತಿತ್ವವಿಲ್ಲ. ಇತರ ರಾಷ್ಟ್ರಗಳಿಗಿಂತ ವಿಭಿನ್ನವಾದ ಸಂಸ್ಕೃತಿಯ ಭಾರತದಲ್ಲಿ ಅನೇಕತೆಯಲ್ಲಿ ಏಕತೆಯನ್ನು ಸುದೀರ್ಘ‌ ಕಾಲ ಮುನ್ನಡೆಸಲು ಸಾಧ್ಯವಾಗಿರುವುದು ಪುಣ್ಯಭೂಮಿಯ ಮಹಾನ್‌ ಸಾಧಕರ ಕೊಡುಗೆಗಳಿಂದ ಎಂಬುದನ್ನು ಮರೆಯುವಂತಿಲ್ಲ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್‌ ವಿಭಾಗ, ಲೋಕಲ್ ಪೊಲೀಸ್‌, ವನಿತಾ ಪೊಲೀಸ್‌, ಅಬಕಾರಿ, ಎನ್‌ಸಿಸಿ ಹಿರಿಯ ವಿಭಾಗದ ಕಾಸರಗೋಡು ಸರಕಾರಿ ಕಾಲೇಜು, ಕಾಂಞಾಂಗಾಡ್‌ ನೆಹರೂ ಆರ್ಟ್ಸ್ ಮತ್ತು ಸಯನ್ಸ್‌ ಕಾಲೇಜು, ಜೂನಿಯರ್‌ ವಿಭಾಗದ ಕಾಂಞಾಂಗಾಡ್‌ ದುರ್ಗಾ ಹೈಯರ್‌ ಸೆಕೆಂಡರಿ ಶಾಲೆ, ಸರಕಾರಿ ಹೈಯರ್‌ ಸೆಕೆಂಡರಿ ಶಾಲೆ ಕಾಸರಗೋಡು, ಪೆರಿಯದ ಜವಾಹರ್‌ ನವೋದಯ ವಿದ್ಯಾಲಯ, ನೀಲೇಶ್ವರದ ರಾಜಾಸ್‌ ಹೈಸ್ಕೂಲಿನ ತಂಡಗಳೇ ಮೊದಲಾದವುಗಳು, ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳು ಭಾಗವಹಿಸಿದ್ದವು.

ದೇಶಭಕ್ತಿಗೀತೆಗಳ ಗಾಯನ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ಸಮಾರಂಭಕ್ಕೆ ಸಾಕ್ಷಿಯಾದರು.

ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜೇಮ್ಸ್‌ ಜೋಸೆಫ್‌, ಎ.ಎಸ್‌.ಪಿ. ಶಿಲ್ಮಾ ಸಹಿತ ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌, ಶಾಸಕರಾದ ಎನ್‌.ಎ.ನೆಲ್ಲಿಕುನ್ನು, ಕೆ.ಕುಂಞಿರಾಮನ್‌, ಎಂ.ರಾಜಗೋಪಾಲನ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ.ಬಶೀರ್‌, ಕಾಸರಗೋಡು ನಗರಸಭಾಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಸಬ್‌ ಕಲೆಕ್ಟರ್‌ ಅರುಣ್‌ ಕೆ.ವಿಜಯನ್‌, ಎಡಿಎಂ ಎನ್‌.ದೇವಿದಾಸ್‌, ಡೆಪ್ಯೂಟಿ ಕಲೆಕ್ಟರ್‌ಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ವಿವಿಧ ಸರಕಾರಿ ಇಲಾಖೆಯ ಅಧಿಕಾರಿಗಳು, ಸಿಬಂದಿಗಳು, ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಭಾಗವಹಿಸಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ತಂಡಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

ಕಾಸರಗೋಡು ಆ. 15: ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಭೀಕರ ನೆರೆಯಿಂದ ಲಕ್ಷಾಂತರ ಜನರು ಸಂಕಷ್ಟಕ್ಕೊಳಗಾಗಿರುವ ಇಂದು ಸವಾಲು, ಸಂಕಷ್ಟಗಳನ್ನು ಎದು ರಿಸಿ ನೆರವಾಗುವಲ್ಲಿ ಮತೇತರ, ಸಾಮರಸ್ಯ ಗಳಿಂದ ಕೂಡಿದ ಮನಸ್ಸುಗಳು ಒಂದಾಗಿ ರುವುದನ್ನು ಕಾಣಬಹುದಾಗಿದೆ. ರಾಜ್ಯ ದಲ್ಲಿ ಎದುರಾಗಿರುವ ಅತಿವೃಷ್ಟಿ ಮತ್ತು ನೆರೆಯಿಂದ ಸಂಕಷ್ಟ ಅನುಭವಿಸು ತ್ತಿರುವ ಸಂತ್ರಸ್ತರಿಗೆ ಒಗ್ಗಟ್ಟಿನಿಂದ ನೆರವಾಗ ಬೇಕೆಂದು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್‌ ಅವರು ಕರೆ ನೀಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ