ಆಡಳಿತದ ವಿರುದ್ಧ ಅಸಮಾಧಾನ

Team Udayavani, Nov 15, 2019, 5:17 AM IST

ಕುಂಬಳೆ : ಪೈವಳಿಕೆ ಗ್ರಾಮ ಪಂಚಾಯತ್‌ನ ಸಾರ್ವಜನಿಕ ಶವ ಪೆಟ್ಟಿಗೆಗಳು ಮಾಯವಾಗಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.

ಪಂಚಾಯತಿನ ಕಳೆದ ಎರಡು ವರ್ಷದ ಹಿಂದಿನ ಸರಕಾರದ ಜನಪರ ಯೋಜನೆಯಲ್ಲಿ ಒಳಪಡಿಸಿ ಶವದಹನ ಕ್ಕಾಗಿ ನಾಲ್ಕು ಶವ ಪೆಟ್ಟಿಗೆಗಗಳನ್ನು ನಿರ್ಮಿಸಲಾಗಿತ್ತು. ಪಂಚಾಯತ್‌ ವ್ಯಾಪ್ತಿಯೊಳಗೆ ಪೆಟ್ಟಿಗೆ ನಿರ್ಮಿಸುವ ಅದೆಷೋr ವರ್ಕ್‌ಶಾಪ್‌ಗ್ಳಿದ್ದರೂ ಶವ ಪೆಟ್ಟಿಗೆ ನಿರ್ಮಿಸಲು ಬಲುದೂರದ ಕಾಞಂಗಾಡಿನ ಖಾಸಗೀ ಸಂಸ್ಥೆಯೊಂದಕ್ಕೆ ಪೆಟ್ಟಿಗೆ ನಿರ್ಮಿಸಲು ಗುತ್ತಿಗೆ ನೀಡಲಾಗಿತ್ತು. ಈ ಪೆಟ್ಟಿಗೆಗೆ ಸುಮಾರು 4 ಲಕ್ಷ ನಿಧಿ ವ್ಯಯಿಸಲಾಗಿದೆ.ಪೆಟ್ಟಿಗೆ ನಿರ್ಮಿಸಿ ತಂದ ಬಳಿಕ ಇದನ್ನು ಕೊಮ್ಮಂಗಳ ಸ್ಮಶಾನದಲ್ಲಿ ಮತ್ತು ಕುಡಾಲು ಮೇರ್ಕಳ,ಬಾಯಾರು, ಕುರುಡಪದವು ಎಂಬೆಡೆಗಳಲ್ಲಿ ಶವ ದಹನಕ್ಕಾಗಿ ಇರಿಸಲಾಗಿತ್ತು.ಆದರೆ ಈ ಪೆಟ್ಟಿಗೆ ಅವೈಜ್ಞಾನಿಕವಾಗಿ ನಿರ್ಮಿಸಿದೆ ಎಂಬ ಆರೋಪ ಆರಂಭದಲ್ಲೇ ಕೇಳಿ ಬಂದಿತ್ತು.ಪೆಟ್ಟಿಗೆಯನ್ನು ಹಿಡಿದೆತ್ತಲು ಇದಕ್ಕೆ ಪಕ್ಕದಲ್ಲಿ ಹ್ಯಾಂಡಲ್‌ ನಿರ್ಮಿಸಿಲ್ಲ .ಮತ್ತು ಅಳತೆಯಲ್ಲಿ ಪೆಟ್ಟಿಗೆ ಸಾಕಷ್ಟು ಉದ್ದವಿಲ್ಲವೆಂಬ ಆರೋಪದಲ್ಲಿ ಪೆಟ್ಟಿಗೆಯನ್ನು ಸರಿಪಡಿಸಲು ಕಳೆದ ಆರು ತಿಂಗಳ ಹಿಂದೆ ಗುತ್ತಿಗೆದಾರ ಇದನ್ನು ಒಯ್ದಿರುವರು.ಆದರೆ ಬಳಿಕ ಗ್ರಾಮ ಪಂಚಾಯತ್‌ ವತಿಯಿಂದ ಪದೇ ಪದೇ ದೂರವಾಣಿ ಮೂಲಕ ಗುತ್ತಿಗೆದಾರನಿಗೆ ಕರೆ ಮಾಡಿದರೂ ಪೆಟ್ಟಿಗೆ ಮಾತ್ರ ಈ ತನಕ ಸರಿಪಡಿಸಿ ಹಿಂದಿರುಗಿಸಿಲ್ಲ.ಅಲ್ಲದೆ ಕಳೆದ ವಾರ ಗ್ರಾ. ಪಂ. ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಗುತ್ತಿಗೆದಾರನನ್ನು ಹುಡುಕಿ ಕಾಞಂಗಾಡಿಗೆ ತೆರಳಿದಾಗ ಈತನ ವರ್ಕ್‌ಶಾಪ್‌ಗೆ ಬೀಗ ಜಡಿಯಲಾಗಿತ್ತಂತೆ. ವಿಚಾರಿಸಿದಾಗ ಕೆಲ ದಿನಗಳಿಂದ ಈತ ನಾಪತ್ತೆಯಾಗಿರುವನ‌ಂತೆ. ಗುತ್ತಿಗೆದಾರನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಗ್ರಾ ಪಂ ಆಡಳಿತ ಮುಂದಾಗಿದೆ.

ವಿಪಕ್ಷ ಆರೋಪ
ಎಡಬಲರಂಗ ಮೈತ್ರಿಯ ಆಡಳಿತದಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ.ಗ್ರಾ.ಪಂ. ವ್ಯಾಪ್ತಿಯ ವಿವಿದೆಡೆಗಳಲ್ಲಿ ಅಳವಡಿಸಿದ ದಾರಿ ದೀಪವೂ ಕಳಪೆ ಯಾಗಿದ್ದು ಇದು ಕೇವಲ ಕೆಲವೇದಿನ ಮಾತ್ರ ಉರಿದಿದೆ.ಬಳಿಕ ಕೆಟ್ಟು ಹೋದವುಗಳನ್ನು ಸರಿಪಡಿ ಸುವುದಾಗಿ ಗುತ್ತಿಗೆದಾರರು ಒಯ್ದು ಕೆಲವನ್ನು ಮಾತ್ರ ಸರಿ ಪಡಿಸಿ ಎಲ್ಲಾ ವಾರ್ಡಿನಲ್ಲಿ ಮರುಸ್ಥಾಪಿಸಿಲ್ಲ.ಮಾತ್ರವಲ್ಲದೆ ಆಯಾ ವಾರ್ಡಿನ ಚುನಾಯಿತ ಸದಸ್ಯರ ಗಮನಕ್ಕೆ ತಾರದೆ ಗುತ್ತಿಗೆದಾರರಿಗೆ ಆಡಳಿತ ಬಿಲ್‌ ನೀಡಿದೆ ಎಂಬ ಆರೋಪ ಪ್ರತಿಪಕ್ಷ ಬಿಜೆಪಿ ಸದಸ್ಯರದು. ಶವಪೆಟ್ಟಿಗೆ ನಿರ್ಮಿಸಿದ ಯೋಜನೆಯಲ್ಲಿ ಆಡಳಿತದ ಅಲಕ್ಷÂದಿಂದ ಶವಪೆಟ್ಟಿಗೆ ಮಾಯವಾಗಲು ಕಾರಣವೆಂಬುದಾಗಿ ವಿಪಕ್ಷ ಆರೋಪಿಸಿದೆ.

ಕ್ರಮ ಕೈಗೊಳ್ಳಲಾಗುವುದು
ಶವಪೆಟ್ಟಿಗೆಯನ್ನು ದುರಸ್ತಿಗಾಗಿ ಒಯ್ದ ಬಳಿಕ ಹಲವು ಬಾರಿ ಸರಿಪಡಿಸಿ ಹಿಂದಿರುಗಿಸಲು ಗುತಿತಗೆದಾರರಿಗೆ ತಿಳಿಸಲಾಗಿದೆ.ಆದರೆ ಈ ತನಕ ಹಿಂದಿರುಗಿಸದ ಕಾರಣ ಗುತ್ತಿಗೆದಾರನ ವಿರುದ್ಧ ಪೊಲೀಸ್‌ ಅಧಿಕಾರಿಗೆ ದೂರು ಸಲ್ಲಿಸಿ ಶವ ಪೆಟ್ಟಿಗೆಯನ್ನು ತಕ್ಷಣ ತರಿಸುವ ಕ್ರಮ ಕೈಗೊಳ್ಳಲಾಗುವುದು.
– ಭಾರತಿ ಶೆಟ್ಟಿ,
ಗ್ರಾಮ ಪಂಚಾಯತ್‌ ಅಧ್ಯಕ್ಷೆ

ತಕ್ಕ ಉತ್ತರ ದೊರಕಲಿದೆ
ಎಡಬಲ ಮೈತ್ರಿಯ ದುರಾಡಳಿತದ ಅವ್ಯವಹಾರಕ್ಕೆ ಸಾಕ್ಷಿ ಶವ ಪಟ್ಟಿಗೆ ಹಗರಣ.ಇಂತಹಾ ಹಲವಾರು ಭ್ರಷ್ಟಾಚಾರಗಳು ಆಡಳಿತದಲ್ಲಿ ನಡೆದಿವೆ.ಇದರ ವಿರುದ್ಧ ಬಿಜೆಪಿ ವತಿಯಿಂದ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ.ಮುಂದಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಮತದಾರರಿಂದ ಇದಕ್ಕೆ ತಕ್ಕ ಉತ್ತರ ದೊರಕಲಿದೆ.
– ಎಚ್‌.ಸುಬ್ರಹ್ಮಣ್ಯ ಭಟ್‌,
ಪ್ರತಿಪಕ್ಷ ಸದಸ್ಯ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ