ಕೆಲಸವಿಲ್ಲದೆ ಕುಲುಮೆಗೆ ಬಿದ್ದ ಕಮ್ಮಾರರ ಜೀವನ


Team Udayavani, May 15, 2018, 6:55 AM IST

14-kbl-5.jpg

ಕುಂಬಳೆ: ಕಮ್ಮಾರ, ಚಿನಿವಾರ, ಕುಂಬಾರ, ಚಮ್ಮಾರ .. ಹೀಗೆ ಹತ್ತು ಹಲವು ಕುಲ ಕಸುಬುಗಳು ಗ್ರಾಮೀಣ ಪ್ರದೇಶದಲ್ಲಿ ಹಿಂದಿ ನಿಂದಲೂ ನಡೆದು ಬರುತ್ತಿದ್ದವು. ಜಾತಿ ಆಧಾರದ ಸಂಪ್ರದಾಯದಲ್ಲಿ ಈ ಕಸುಬುಗಳು ಹಳ್ಳಿಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದವು. ಆದರೆ ಮುಂದುವರಿದ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಈ ಕುಲಕಸುಬುಗಳು ಕುಂಟಿತವಾಗುತ್ತಾ ಬರಲಾರಂಭಿಸಿವೆ.ಮುಂದುವರಿದ ಶಿಕ್ಷಣ, ಕಚ್ಚಾ ವಸ್ತುಗಳ ಕೊರತೆಯಿಂದಲಾಗಿ ಈ ಕುಲ ಕಸುಬುಗಳು ತೆರೆಮರೆಗೆ ಸರಿಯಲಾರಂಭಿಸಿವೆ.

ವಿಶ್ವಕರ್ಮ ಸಮಾಜದ ಶ್ರಮಜೀವಿಗಳಾದ ಕಮ್ಮಾರ ಕೆಲಸಗಾರರು ಇದೀಗ ಆಪರೂಪವಾಗುತ್ತಿದ್ದಾರೆ. ತಮ್ಮ ಮನೆ ಪಕ್ಕದಲ್ಲಿ ಸಣ್ಣ ಗುಡಿಸಲು ನಿರ್ಮಿಸಿ ಇದರೊಳಗೆ ಕಷ್ಟಕರವಾದ ಕಬ್ಬಿಣದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಹಾರೆ, ಪಿಕ್ಕಾಸು, ಕತ್ತಿ, ಮಚ್ಚು, ಸಬಳ, ಕೊಡಲಿ ಮುಂತಾದ ವಸ್ತುಗಳನ್ನು ಬೆಂಕಿಯಲ್ಲಿ ಕಾಯಿಸಿ ಹದಗೊಳಿಸುತ್ತಿದ್ದಾರೆ.

ಕಮ್ಮಾರರ ಗುಡಿಸಲಿನೊಳಗೆ ಕಬ್ಬಿಣ ಕಾಯಿಸಲು ಗಾಳಿಹಾಕುವ ಕುಲುಮೆ ಮತ್ತು ಕಾಯಿಸಿದ ಕಬ್ಬಿಣವನ್ನು ತಣಿಸಲು ಸಣ್ಣ ನೀರಿನ ಟ್ಯಾಂಕ್‌ಗಳನ್ನು ಕಾಣಬಹುದು. ಕುಲುಮೆಯ ಮೂಲಕ ಕಬ್ಬಿಣವನ್ನು ಕಾಯಿಸಿ ಹದಬರಿಸಿ ಬೇಕಾದ ಆಕಾರಗಳನ್ನು ನಿರ್ಮಿಸುತ್ತಾರೆ. ತೆಂಗಿನ ಗೆರಟೆಯ ಕರಿ ಅಥವಾ ಕಲ್ಲಿದ್ದಲನ್ನು ಬೆಂಕಿ ಉರಿಯಲು ಉಪಯೋಗಿಸುತ್ತಿರುವರು.

ಮಕ್ಕಳಿಗೆ ಆಸಕ್ತಿಯಿಲ್ಲ
ಪರಂಪರಾಗತವಾಗಿ ತಂದೆಯಿಂದ ಮಗನಿಗೆ ಬಳುವಳಿಯಾಗಿ ಬಂದ ಕುಲ ಕಸುಬುದಾರರ ಮಕ್ಕಳು ಇದನ್ನು ಮುಂದುವರಿಸಲು ಸಿದ್ಧರಿಲ್ಲ. ಶಿಕ್ಷಣ ಪಡೆದು ಉದ್ಯೋಗಕ್ಕೆ ತೆರಳುವುದರಿಂದ ಈ ಕೆಲಸ ಮುಂದುವರಿಯಲು ಸಾಧ್ಯವಿಲ್ಲವೆಂಬ ಅಭಿಪ್ರಾಯ ಕಳೆದ 30 ವರ್ಷಗಳಿಂದ ಪೆರ್ಮುದೆಯಲ್ಲಿ ಕಮ್ಮಾರ ಕೆಲಸ ನಡೆಸುತ್ತಿರುವ ನಾಗೇಶ ಆಚಾರಿಯವರದು. ಇವರ ಅಪ್ಪ ಹಲವು ವರ್ಷಗಳ ಕಾಲ ಕಮ್ಮಾರ ವೃತ್ತಿಯಲ್ಲಿ ನಿರತರಾಗಿದ್ದು ಬಳಿಕ ಬಡಗಿಯಾಗಿದ್ದ ಇವರ ಪುತ್ರ ನಾಗೇಶ ಆಚಾರಿಯವರು ಉತ್ತರಾಧಿಕಾರಿಯಾಗಿ ಅಪ್ಪನ ಕೆಲಸವನ್ನು ಮುಂದುವರಿಸುತ್ತಿದ್ದಾರೆ.ಇವರ ಮಕ್ಕಳು ಬೇರೆ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನ ಬಳಿಕ ಇದನ್ನು ಮುಂದುವರಿಸುವವರಿಲ್ಲವೆಂಬ ಕೊರಗು ಇವರದು. ಬೇಸಗೆಯಲ್ಲಿ ಬೆಂಕಿ ಮುಂದೆ ಕುಳಿತು ಮಾಡುವ ಈ ತ್ರಾಸದಾಯಕ ಕೆಲಸ ಆರೋಗ್ಯಕ್ಕೂ ಮಾರಕವಾಗಿದೆ. 

ಸರಕಾರದಿಂದಲೂ ಇವರಿಗೆ ಯಾವುದೇ ಬೆಂಬಲವಿಲ್ಲವಂತೆ.ಐದು ಹತ್ತು ರೂಪಾಯಿಗೆ ದೊರಕುತ್ತಿದ್ದ 100 ಗೆರಟೆಯ ಬೆಲೆ ಈಗ 20 ರಿಂದ 40 ರೂ.ಗೆ ಏರಿದೆ. ಕಲ್ಲಿದ್ದಲೂ ದುಬಾರಿಯಾಗಿದೆ. ಸಾಂಪ್ರದಾಯಿಕ ಕುಲ ಕಸುಬುಗಳು  ಮೂಲೆ ಸರಿಯು ತ್ತಿವೆ. ಈ ಕುಲಕಸಬುಗಳನ್ನು ಉಳಿಸುವ ಕೆಲಸ ಸರಕಾರದಿಂದ ಆಗಬೇಕಿದೆ.

ಹಿಂದಿನ ಕಾಲದಲ್ಲಿ ಮನೆ ಇನ್ನಿತರ ಕಟ್ಟಡಗಳನ್ನು ನಿರ್ಮಿಸುವಾಗ ಹಾರೆ, ಪಿಕ್ಕಾಸುಗಳ ಮೂಲಕವೇ ಅಗೆದು ಅಡಿಪಾಯ ನಿರ್ಮಿಸಲಾಗುತ್ತಿತ್ತು.ಎತ್ತರದ ಬರೆಯನ್ನು  ಅಗೆದು ತೆಗೆಯಲಾಗುತ್ತಿತ್ತು.ಬಳಿಕ ಕೂಲಿಯಾಳುಗಳ ಕೊರತೆಗೆ ಪರ್ಯಾಯವಾಗಿ ಜೆ.ಸಿ.ಬಿ.ಕಂಪೆ‌Åಸರ್‌ ಇನ್ನಿತರ ಯಂತ್ರಗಳ ಬಳಕೆ ಆರಂಭಗೊಂಡಿತು. ಆದುದರಿಂದ ಹಾರೆ,ಪಿಕ್ಕಾಸುಗಳ ಬಳಕೆ ಪ್ರಕೃತ ದೂರವಾಗುತ್ತಿದೆ.ಇದೀಗ ಕಲ್ಲು ಕಡಿಯಲು ಯಂತ್ರ, ಕಡಿದಕಲ್ಲುಗಳನ್ನು ಎತ್ತಿ ಇರಿಸಲು ಯಂತ್ರಗಳನ್ನು ಕೂಡ ಬಳಸಲಾಗುತ್ತಿದೆ. ಇದರಿಂದಲಾಗಿ ಕಲ್ಲು ಕಡಿಯುವ ಮತ್ತು ಕಲ್ಲು ಎಳಕಿಸುವ ಮಚ್ಚು ಮತ್ತು ಹಾರೆ ಪಿಕ್ಕಾಸುಗಳ ಬಳಕೆ ವಿರಳವಾಗಿದೆ. ಇದರಿಂದ ಕಮ್ಮಾರರಿಗೆ ಇದರ ಕೆಲಸವಿಲ್ಲದಾಗಿದೆ. ಕಮ್ಮಾರರು ಮಾಡುವ ಕೆಲವು ಕೆಲಸಗಳೂ ಯಂತ್ರದ ಮೂಲಕ ನಡೆಯುತ್ತಿವೆ.

– ಅಚ್ಯುತ ಚೇವಾರ್‌

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

Online Bitcoin Gambling Enterprises: An Overview to Betting with Cryptocurrency

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.