ಶಾಲಾ ಕಲೋತ್ಸವ: ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಸ್ಪರ್ಧೆ


Team Udayavani, Dec 1, 2019, 5:29 AM IST

30KSDE2

ಕಾಸರಗೋಡು: ವಿಶ್ವದಲ್ಲೇ ಬೃಹತ್‌ ಕಲೋತ್ಸವ ಎಂದೇ ಖ್ಯಾತಿಯನ್ನು ಪಡೆದಿರುವ ಕೇರಳ ರಾಜ್ಯ ಶಾಲಾ ಕಲೋತ್ಸವದ ಪ್ರಶಸ್ತಿಗಾಗಿ ಜಿಲ್ಲೆಗಳ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದೆ.

ಶನಿವಾರ ಮಧ್ಯಾಹ್ನದವರೆಗಿನ ಅಂಕಗ ಳಂತೆ ಕಲ್ಲಿಕೋಟೆ ಜಿಲ್ಲೆ ಮುನ್ನಡೆ ಯಲ್ಲಿದೆ. ಕಣ್ಣೂರು ಹಾಗು ಪಾಲಾ^ಟ್‌ ಜಿಲ್ಲೆ ನಿಕಟ ಸ್ಪರ್ಧೆ ಯನ್ನು ನೀಡುತ್ತಿದೆ. ಕಲ್ಲಿಕೋಟೆ ಜಿಲ್ಲೆ 625 ಅಂಕಗಳಿಂದ ಮುನ್ನಡೆಯನ್ನು ಕಾಯ್ದು ಕೊಂಡಿದ್ದರೆ, ಕಣ್ಣೂರು-617, ಪಾಲಾ^ಟ್‌ – 614 ಅಂಕಗಳಿಂದ ತೀವ್ರ ಸ್ಪರ್ಧೆ ನೀಡುತ್ತಿದೆ.

ಇತರ ಜಿಲ್ಲೆಗಳ ಅಂಕ ಇಂತಿದೆ. ತೃಶ್ಶೂರು – 606, ಮಲಪ್ಪುರಂ-591, ಎರ್ನಾಕುಲಂ- 582, ತಿರುವನಂತಪುರ- 580, ಕೋಟ್ಟ ಯಂ -570, ವಯನಾಡು- 568, ಕಾಸರ ಗೋಡು – 568, ಕೊಲ್ಲಂ-563, ಆಲಪ್ಪುಳ -558, ಪತ್ತನಂತಿಟ್ಟ-508, ಇಡುಕ್ಕಿ – 467 ಅಂಕಗಳನ್ನು ಪಡೆದಿದೆ. ಕಾಸರಗೋಡು ಜಿಲ್ಲೆ 568 ಅಂಕಗಳೊಂದಿಗೆ ಹತ್ತನೇ ಸ್ಥಾನ ಪಡೆದಿದೆ. ಕಳೆದ ವರ್ಷ ಸಮಗ್ರ ಪ್ರಶಸ್ತಿಗೆ ಭಾಜನವಾಗಿದ್ದ ಪಾಲಾ^ಟ್‌ ಜಿಲ್ಲೆ ಮೂರನೇ ಸ್ಥಾನದಲ್ಲಿದೆ.

ಕಾಸರಗೋಡಿನ ಮಣ್ಣಿನ ಕಲೆಗಳಾದ ಯಕ್ಷಗಾನ, ಪೂರಕ್ಕಳಿ, ಎರ್ದುಕ್ಕಳಿ ಮೊದ ಲಾದ ಕಲಾ ಪ್ರಕಾರ ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಕಲಾಸ್ವಾದಕರು ನೆರೆದಿದ್ದರು. ಕಲೋತ್ಸವದಲ್ಲಿ ಈ ಎರಡು ಕಲೆಗಳು ಸ್ಪರ್ಧೆಗಳ ಯಾದಿಯಲ್ಲಿ ಸೇರ್ಪಡೆ ಗೊಂಡಿದೆ. ಮಂಗಲಂಕ್ಕಳಿ, ಆಲಾಮಿಕ್ಕಳಿ ಮೊದಲಾದವು ಸ್ಪರ್ಧೆಯ ಯಾದಿಯಲ್ಲಿ ಸ್ಥಾನ ಪಡೆಯ ದಿದ್ದರೂ ಪ್ರದರ್ಶನ ರೂಪದಲ್ಲಿ ಮೇಳೈಸಿದೆ. ತುಳುನಾಡಿನ ದೈವಗಳ ಪ್ರದರ್ಶನವೂ ನಡೆದಿದೆ.

1991 ರಿಂದ ಯಕ್ಷಗಾನ
1991 ರಲ್ಲಿ ಯಕ್ಷಗಾನ ಕಲೆಯನ್ನು ಮೊಟ್ಟಮೊದಲಾಗಿ ಶಾಲಾ ಕಲೋತ್ಸವದಲ್ಲಿ ಏರ್ಪಡಿಸಲಾಗಿತ್ತು. ಅಂದು ಕಾಸರಗೋಡಿನಲ್ಲಿ ನಡೆದ ಶಾಲಾ ಕಲೋತ್ಸವದಲ್ಲಿ ಯಕ್ಷಗಾನ ಸೇರ್ಪಡೆ ನಡೆದಿತ್ತು. ಈ ಬಗ್ಗೆ ಶಿಕ್ಷಣ ನಿರ್ದೇಶಕರು 1990 ಡಿಸೆಂಬರ್‌ 26 ರಂದು ಆದೇಶ ಹೊರಡಿಸಿದ್ದರು. ಅಂದಿನಿಂದ ಇಂದಿನ ವರೆಗೂ ರಾಜ್ಯ ಶಾಲಾ ಕಲೋತ್ಸವಗಳಲ್ಲಿ ಯಕ್ಷಗಾನದಲ್ಲಿ ಕಾಸರಗೋಡು ಜಿಲ್ಲೆಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಧೂಳುಮಯ
ವಿವಿಧ ಸ್ಪರ್ಧೆಗಳು ವೇದಿಕೆ ಮೇಲೆ ಪ್ರಸ್ತುತಗೊಳ್ಳುತ್ತಿರುವಾಗ ವೇದಿಕೆಯ ಹೊರಗೆ ಧೂಳಿನ ಸಮಸ್ಯೆಗೆ ಕಾರಣವಾಗುತ್ತಿತ್ತು. ಧೂಳಿನ ಸಮಸ್ಯೆಯನ್ನು ಪರಿಹರಿಸಲು ಅಗ್ನಿಶಾಮಕ ದಳ ಪದೇ ಪದೇ ನೀರನ್ನು ಸಿಂಪಡಿಸುತ್ತಿತ್ತು. ಸಾರಿಗೆ ಸೌಕರ್ಯದ ತೊಂದರೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವೇದಿಕೆಗಳ ಅಂತರ ದೂರವಿದ್ದ ಕಾರಣದಿಂದ ಎಲ್ಲಾ ವೇದಿಕೆಗಳಿಗೆ ತೆರಳಲು ಬಹಳಷ್ಟು ತ್ರಾಸ ಅನುಭವಿಸುವಂತಾಗಿದೆ ಎಂದು ಕಲಾಸ್ವಾದಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕಲೋತ್ಸವ: ಚಿತ್ರ ರಚನೆ
ಹೊಸ ಬಸ್ಸು ತಂಗುದಾಣದ ಪರಿಸರದಲ್ಲಿ ವಸ್ತು ಪ್ರದರ್ಶನಕ್ಕೆ ಮೆರಗು ನೀಡಿದ ಪ್ರಸಿದ್ಧ ಚಿತ್ರ ಕಲಾ ಅಧ್ಯಾಪಕರ ಚಿತ್ರ ರಚನೆ ಮತ್ತು ಪ್ರದರ್ಶನ ಜನಮನ ಸೂರೆಗೊಂಡಿತು. ಖ್ಯಾತ ಶಿಲ್ಪಿಯೂ, ಚಿತ್ರಕಾರರಾದ ರವಿ ಪಿಲಿಕೋಡ್‌ ಉದ್ಘಾಟನಾ ಸಮಾರಂಭ ವನ್ನು ನೆರವೇರಿಸಿದರು. ಮಂಜೇಶ್ವರ ಎಸ್‌.ಎ.ಟಿ. ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಜಯಪ್ರಕಾಶ್‌ ಶೆಟ್ಟಿ ಬೇಳ ನೇತೃತ್ವ ದಲ್ಲಿ ನಡೆದ ಚಿತ್ರ ರಚನೆಗೆ ಡಯಟ್‌ ಸೀನಿಯರ್‌ ಲೆಚ್ಚರರ್‌ ಅನಿಲ್‌ ಮಣಿಯರ, ಜಿ.ವೀರೇಶ್ವರ್‌ ಭಟ್‌ ಶುಭಕೋರಿದರು. ಕಲಾ ಅಧ್ಯಾಪಕರಾದ ಪ್ರಮೋದ್‌ ಅಡುತಿಲ, ದಿವಾಕರ, ಚಿತ್ರನ್‌ ಕುಂಞಮಂಗಲ, ಅಶೋಕ್‌ ಮೊದಲಾದವರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.