- Tuesday 10 Dec 2019
ಕಾಸರಗೋಡು- ಪೆರಡಾಲ ಶಾಲಾ ಪ್ರವೇಶೋತ್ಸವ
Team Udayavani, Jun 6, 2019, 3:53 PM IST
ಬದಿಯಡ್ಕ: ನೂತನ ಶಾಲಾ ವರ್ಷದ ಆರಂಭವನ್ನು ಹಬ್ಬದ ರೀತಿಯಲ್ಲಿ ಆಚರಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಸಂಭ್ರಮದಿಂದ ಸ್ವಾಗತಿಸೋಣ ಎಂದು ಬದಿಯಡ್ಕ ಪೆರಡಾಲ ಸರಕಾರಿ ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅನ್ನಡ್ಕ ಪ್ರವೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು.
ರಜೆ ಕಳೆದು ಬರುವ ಮಕ್ಕಳ ಸಂತಸ ಶಾಲೆಯಲ್ಲಿ ಇನ್ನಷ್ಟು ಹೆಚ್ಚಾಗಲಿ ಎಂದು ಅವರು ಹಾರೈಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದಿನ ವರ್ಷ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣರಾದ ಮಕ್ಕಳನ್ನು, ರಕ್ಷಕರನ್ನು, ಶಿಕ್ಷಕರನ್ನು ಅಭಿನಂದಿಸಿದರು.
ಸಂಘದ ಸದಸ್ಯ ಮೊದು ಪಯ್ಯಲಡ್ಕ ಮಾತನಾಡಿ ಈ ವರ್ಷ ಶಾಲೆಯ ಸಾಧನೆ ಇನ್ನೂ ಉತ್ತಮಗೊಳ್ಳಲಿ ಎಂದು ಆಶಿಸಿದರು. ಮಾತೃ ರಕ್ಷಕ ಸಂಘದ ಅಧ್ಯಕ್ಷೆ ತಾಹಿರಾ ಹನೀಫ್, ಸದಸ್ಯೆ ಅನ್ನತ್ ಹಸನ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಸ್ವಾಗತಿಸಿ ಸ್ಟಾಫ್ ಸೆಕ್ರೆಟರಿ ಚಂದ್ರಹಾಸನ್ ನಂಬ್ಯಾರ್ ವಂದಿಸಿದರು. ಶಿಕ್ಷಕರಾದ ದಿವ್ಯಗಂಗ, ಚಂದ್ರಶೇಖರ, ರಿಶಾದ್, ರಾಜೇಶ್,
ಜಯಲತಾ, ಲಲಿತಾಂಬಾ ಸಹಕರಿಸಿದರು.
ಈ ಸಂದರ್ಭ ಶಾಲಾ ಅಧ್ಯಾಪಕರ ವತಿಯಿಂದ ನವಾಗತ ಮಕ್ಕಳಿಗೆ ಕಲಿಕೋಪರಣ ಕಿಟ್ ವಿತರಿಸಲಾಯಿತು. ಮಕ್ಕಳನ್ನು ಮೆರವಣಿಗೆಯಲ್ಲಿ ಕರೆತಂದು ಪ್ರವೇಶೋತ್ಸವ ಗೀತೆ ಹಾಡಿ ಬಲೂನ್, ಅಕ್ಷರ ಚಕ್ರ ವಿತರಿಸಿ ಸ್ವಾಗತಿಸಲಾಯಿತು.
ಈ ವಿಭಾಗದಿಂದ ಇನ್ನಷ್ಟು
-
ಮಡಿಕೇರಿ: ಉತ್ತಮ ಸಮಾಜ ನಿರ್ಮಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಅಪಾರವಾದದ್ದು, ಜಿಲ್ಲೆ ಅತಿವೃಷ್ಟಿಗೆ ಸಿಲುಕಿದಾಗ ವಿವಿಧ ಸಂಘ, ಸಂಸ್ಥೆಗಳು ನಿರೀಕ್ಷೆಗೂ ಮೀರಿ...
-
ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭಗೊಂಡು ಒಂದು ವರ್ಷವಾಗಿದ್ದು, ಈ ಅವಧಿಯಲ್ಲಿ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಾಟ...
-
ಕಾಸರಗೋಡು: ಎಡರಂಗ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ವರೆಗೆ ಲೋಕೋಪಯೋಗಿ ಕ್ಷೇತ್ರದಲ್ಲಿ 20 ಸಾವಿರ ಕೋಟಿ ರೂ.ಗಳ ಕಾಮಗಾರಿ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ...
-
ಕಾಸರಗೋಡು: ವಿವಿಧ ಕಾರಣ ಗಳಿಂದ ವಿಳಂಬವಾಗಿ ಆರಂಭಗೊಂಡ ಮಹತ್ವಾಕಾಂಕ್ಷೆಯ ಕಣ್ಣೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಡಿ. 9ರಂದು ಒಂದು ವರ್ಷ ಪೂರೈಸಲಿದ್ದು,...
-
ಮಡಿಕೇರಿ: ಕೊನೆಗೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ನಗರ ಪ್ರದಕ್ಷಿಣೆ ಮಾಡಿದ್ದು, ರಸ್ತೆ ಅವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿದ್ದಾರೆ. ನಗರೋತ್ಥಾನ...
ಹೊಸ ಸೇರ್ಪಡೆ
-
ದಾವಣಗೆರೆ: ಅಂಗವಿಕಲರು ಉತ್ತಮ ಸಾಧನೆಯ ಮೂಲಕ ಯಾರಿಗೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಬೇಕು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್...
-
ಬೆಂಗಳೂರು: ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಭಾರಿ ಚರ್ಚೆಯ ನಂತರ ಮಧ್ಯರಾತ್ರಿ...
-
ದಾವಣಗೆರೆ: ರೈತರ ಕುಂದುಕೊರತೆ ಚರ್ಚಿಸಲು ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದ್ದಾರೆ. ಸೋಮವಾರ...
-
ಬೆಂಗಳೂರು: 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಯಾಕೆ ಹಿನ್ನಡೆ ಆಗಿದೆಯೆಂದು ಸಂಪೂರ್ಣವಾಗಿ ಎಲ್ಲರೊಂದಿಗೆ ಹೇಳುತ್ತೇನೆ ಎಂದು ಕಾಂಗ್ರೆಸ್ ನಾಯಕ...
-
ನ್ಯೂಯಾರ್ಕ್: ಅಮೆರಿಕದ ಮಾಜಿ ಬೇಸ್ ಬಾಲ್ ಆಟಗಾರ, ಜಗತ್ತಿನಾದ್ಯಂತ “ಐಸ್ ಬಕೆಟ್ ಚಾಲೆಂಜ್” ಮೂಲಕ ದೇಣಿಗೆ ಸಂಗ್ರಹಿಸಲು ಸ್ಫೂರ್ತಿಯಾಗಿದ್ದ ಪೀಟ್ ಫ್ರೇಟ್ಸ್(34ವರ್ಷ)...