ಓಲೆ ಬೆಲ್ಲ ಆರೋಗ್ಯಕ್ಕೆ ಉತ್ತಮ

Team Udayavani, Nov 30, 2018, 3:05 AM IST

ole-bella-29-11.jpg

ಇಂದು ನಾವು ಸೇವಿಸುವ ಹೆಚ್ಚಿನ ಆಹಾರಗಳು ರಾಸಾಯನಿಕಯುಕ್ತ‌. ತರಕಾರಿಗಳಿಂದ ಹಿಡಿದು ಹೆಚ್ಚಿನ ಆಹಾರ ಪದಾರ್ಥಗಳು ಕಲಬೆರಕೆಯಿಂದ ಕೂಡಿರುತ್ತವೆ. ಈ ಸಂದರ್ಭದಲ್ಲಿ ಅಲ್ಪವಾದರೂ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವವರು ಓಲೆ ಬೆಲ್ಲಕ್ಕೆ ಮೊರೆಹೋಗಬಹುದು. ಬೆಲ್ಲ ಹಾಗೂ ಖರ್ಜೂರ ಪಾಮ್‌ ಮರದಿಂದ ತಯಾರಿಸಲ್ಪಡುವ ಈ ಬೆಲ್ಲದ ರುಚಿ ಆರೋಗ್ಯಕ್ಕೆ ಹೆಚ್ಚು ಉಪಕಾರಿ. ನೈಸರ್ಗಿಕವಾಗಿ ತಯಾರಿಸಲ್ಪ ಡುವುದರಿಂದ ಆರೋಗ್ಯಕ್ಕೆ ಹಾನಿಕಾರಕವಲ್ಲ.

ಪೋಷಕಾಂಶಗಳ ಆಗರ
ಓಲೆ ಬೆಲ್ಲದಲ್ಲಿ ಕಬ್ಬಿಣದ ಅಂಶ, ಮ್ಯಾಗ್ನೇಷಿಯಂ, ಕ್ಯಾಲ್ಸಿಯಂ, ಪೋಟಾಷಿಯಂ ಪೋಷಕಾಂಶಗಳು ಹೇರಳವಾಗಿವೆ. ಕಬ್ಬಿಣ ರಕ್ತದಲ್ಲಿರುವ ಹಿಮೋಗ್ಲೋಬಿನ್‌ ಅಂಶವನ್ನು ಹೆಚ್ಚಿಸುತ್ತದೆ ಹಾಗೂ ಸುಸ್ತು ಕಡಿಮೆಗೊಳಿಸುತ್ತದೆ. ಮ್ಯಾಗ್ನೇಷಿಯಂ ನರಮಂಡಲವನ್ನು ಸಕ್ರಿಯವಾಗಿರಿಸುತ್ತದೆ. ಬೆಲ್ಲದಲ್ಲಿರುವ ಕ್ಯಾಲ್ಸಿಯಂ ಬಲಿಷ್ಠ ಮೂಳೆಗಳಿಗೆ ಸಹಾಯಕ. ಪೋಟಾಷಿಯಂ ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ. ಅಲ್ಲದೆ ರೋಗ ನಿರೋಧಕ ವ್ಯವಸ್ಥೆಯನ್ನು, ರಕ್ತ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ಸಕ್ಕರೆಗೆ ಹೋಲಿಸಿದರೆ ಓಲೆ ಬೆಲ್ಲ ಹೆಚ್ಚು ಆರೋಗ್ಯಕರ. ಇದು ದೇಹದ ಒಳಭಾಗವನ್ನು ಶುದ್ಧೀಕರಿಸುತ್ತದೆ. ಉಸಿರಾಟದ ಭಾಗ, ಹೊಟ್ಟೆ, ಶ್ವಾಸಕೋಶ ಹಾಗೂ ದೇಹದ ಉಳಿದ ಭಾಗಗಳಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕಿ ದೇಹದ ಆರೋಗ್ಯ ಕಾಪಾಡುತ್ತದೆ.

ಜೀರ್ಣಕ್ರಿಯೆಗೆ ಪೂರಕ
ಓಲೆ ಬೆಲ್ಲದ ಪ್ರಮುಖ ಉಪಯೋಗವೆಂದರೆ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಶಮನಗೊಳಿಸುವುದು. ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುವುದು ಮಾತ್ರವಲ್ಲದೆ ಕರುಳಿನ ಚಲನೆಯನ್ನು ನಿಯಂತ್ರಿಸಿ ಮಲಬದ್ಧತೆ, ಅರ್ಜೀಣವನ್ನು ತಡೆಗಟ್ಟುತ್ತದೆ. ಅನಗತ್ಯ ಕಣಗಳನ್ನು ತೆಗೆದುಹಾಕಿ ಶುದ್ಧೀಕರಿಸುತ್ತದೆ. ಯಕೃತ್ತಿನ ಅಸಹ್ಯ ಪದಾರ್ಥಗಳನ್ನು ಹೊರಹಾಕುವ ಮೂಲಕ ನಿರ್ವಿಷವಾಗಿ ಕೆಲಸ ಮಾಡುತ್ತದೆ. ಮಾಧ್ಯಮ ಗಾತ್ರದ ಓಲೆ ಬೆಲ್ಲವನ್ನು ಸೇವಿಸುವುದರಿಂದ ಹೊಟ್ಟೆಯೂ ತಂಪಾಗುತ್ತದೆ.

ಮೈಗ್ರೇನ್‌ಗೆ ರಾಮಬಾಣ
ಓಲೆ ಬೆಲ್ಲದಲ್ಲಿರುವ ಔಷಧೀಯ ಗುಣಗಳು ನೈಸರ್ಗಿಕವಾಗಿ ಮೈಗ್ರೇನ್‌ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ತುಪ್ಪದೊಂದಿಗೆ ಇದನ್ನು ಸೇವಿಸುವುದರಿಂದ ಯಾವುದೆ ಔಷಧಿಗಳ ಸಹಾಯವಿಲ್ಲ ರಕ್ತನಾಳಗಳನ್ನು ಹಾಗೂ ನೋವುಗಳನ್ನು ನಿಯಂತ್ರಣಕ್ಕೆ ತರುತ್ತದೆ.

ತ್ವಚೆಯ ರಕ್ಷಣೆ
ಇದರ ಸೇವನೆ ಆರೋಗ್ಯಕರ ಹಾಗೂ ಮೃದು ಚರ್ಮಕ್ಕೆ ಉತ್ತಮವಾದುದು. ಇದು ಮೊಡವೆಗಳನ್ನು ತಡೆದು ನೈಸರ್ಗಿಕವಾಗಿ ಹೊಳೆಯುವ ಕಾಂತಿಯನ್ನು ನೀಡುತ್ತದೆ. ಮಾತ್ರವಲ್ಲದೆ ಕಪ್ಪುವರ್ತುಲಗಳು ಬಾರದಂತೆ ತಡೆಗಟ್ಟಿ ವೃದ್ಧಾಪ್ಯದ ಚಿಹ್ನೆಗಳನ್ನು ನಿಧಾನಗೊಳಿಸುತ್ತದೆ.

ಶಕ್ತಿ ತುಂಬುವ ಬೆಲ್ಲ
ಓಲೆ ಬೆಲ್ಲದಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ತಿಂದ ಆಹಾರ ಬೇಗನೆ ಜೀರ್ಣವಾಗುತ್ತದೆ. ಪ್ರತಿದಿನ ಬೆಲ್ಲ ತಿನ್ನುವುದರಿಂದ ಹೆಚ್ಚು ಸಮಯದವರೆಗೆ ನಿಮಗೆ ಚುರುಕು ಹಾಗೂ ಶಕ್ತಿ ನೀಡುತ್ತದೆ. ಒಂದು ವೇಳೆ ದಿನವನ್ನು ಉತ್ತಮ ರೀತಿಯಲ್ಲಿ ಆರಂಭಿಸಲು ವಿಫ‌ಲರಾದರೆ ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಉತ್ತಮ.

— ರಮ್ಯಾ ಕೆದಿಲಾಯ

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

banUppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.