ಪೆರ್ಮುದೆ: ನೂತನ ಸೈಂಟ್‌ ಲಾರೆನ್ಸ್‌ ದೇವಾಲಯ ಉದ್ಘಾಟನೆ

Team Udayavani, May 16, 2019, 6:30 AM IST

ಕುಂಬಳೆ: ಪೆರ್ಮುದೆ ಸೆ„ಂಟ್‌ ಲಾರೆನ್ಸ್‌ ದೇವಾಲಯದ ನೂತನ ಕಟ್ಟಡದ ಉದ್ಘಾಟನೆ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜರಗಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಅವರನ್ನು ಧರ್ಮಗುರು ಫಾ| ಮೆಲ್ವಿನ್‌ ಫೆರ್ನಾಂಡಿಸ್‌ ದೇವಾಲಯಕ್ಕೆ ಸ್ವಾಗತಿಸಿದರು. ಬಳಿಕ ಬ್ಯಾಂಡ್‌ ಮೇಳದೊಂದಿಗೆ ಮೆರವಣಿಗೆಯಲ್ಲಿ ಧರ್ಮಾ ಧ್ಯಕ್ಷರನ್ನು ಬರಮಾಡಿಕೊಳ್ಳಲಾಯಿತು.

ಘಂಟಾಗೋಪುರವನ್ನು ಡೊಮಿನಿ ಕನ್‌ ಪ್ರೊವಿನ್ಶಿಯಲ್‌ ವಂ| ಫಾ| ನವೀನ್‌ ಸಲ್ಡಾನ್ಹಾ ಉದ್ಘಾಟಿಸಿದರು. ನೂತನ ದೇವಾಲಯದ ಕಟ್ಟಡವನ್ನು ಡೊಮಿನಿಕನ್‌ ಪ್ರೊವಿನ್ಶಿಯಲ್‌ ವಂದನೀಯ ಫಾ| ನವೀನ್‌ ಸಲ್ಡಾನ್ಹಾ ಹಾಗೂ ವಂದನೀಯ ಬಿಷಪರು ಉದ್ಘಾಟಿಸಿದರು. ಬಳಿಕ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಡಾ|ಪೀಟರ್‌ ಪಾವ್‌É ಸಲ್ಡಾನ್ಹಾ ಆಶೀರ್ವಚನ ನಡೆಸಿದರು. ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರು ಫಾ| ಜೋನ್‌ವಾಸ್‌, ಕಯ್ನಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ| ವಿಕ್ಟರ್‌ ಡಿಸೋಜ ಉಪಸ್ಥಿತರಿದ್ದರು.

ಕಾಸರಗೋಡು ಧರ್ಮವಲಯದ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಇಗರ್ಜಿಗಳ ಧರ್ಮಗುರುಗಳು, ಡೊಮಿನಿಕನ್‌ ಮೇಳದ ಧರ್ಮಗುರುಗಳ ಜತೆಗೂಡಿ ನೂತನ ಇಗರ್ಜಿಯ ಪ್ರಥಮ ದಿವ್ಯಬಲಿ ಪೂಜೆಯನ್ನು ಧರ್ಮಾಧ್ಯಕ್ಷ ವಂ| ಪೀಟರ್‌ ಪಾವ್‌É ಸಲ್ಡಾನ್ಹಾ ನೆರವೇರಿಸಿದರು. ಫಾ| ಮೆಲ್ವಿನ್‌ ಫೆರ್ನಾಂಡಿಸ್‌ ಪವಿತ್ರ ಬೈಬಲ್‌ ವಾಚಿಸಿದರು. ಧರ್ಮಾಧ್ಯಕ್ಷರು ಶುಭವಾರ್ತೆಯ ಸಂದೇಶ ನೀಡಿ ಕ್ರಿಸ್ತನ ದೇಹದಿಂದ ಜನ್ಮ ನೀಡಿದ ನಮ್ಮ ದೇಹ ನಾಶಗೊಳಿಸಲು ಅವರು ಬಿಡರು. ದೇವರ ಮಹಿಮೆಯನ್ನು ಸಾರಲು, ನಾವು ನಿರ್ಮಿಸಿದ ಪುಟ್ಟ ಮಂದಿರದಲ್ಲಿ ಅವರು ಇರಲು ಆಶಿಸುತ್ತಾರೆ ಎಂದರು.

ಸಂತರನ್ನು ಸ್ಮರಿಸಿ ಸ್ತುತಿಸಿ ಪರಮ ಪ್ರಸಾದದ ತಬೆರ್ನಾಕ್‌É ಆಶೀರ್ವಚನ ನಡೆಯಿತು. ಫಾ| ವಿಜಯ್‌ ಮಚಾದೊ ನಿರೂಪಿಸಿದರು. ಫಾ| ಪ್ರತೀಕ್‌ ಪಿರೇರಾ, ಕಯ್ನಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ| ಲೋರೆನ್ಸ್‌ ರೋಡ್ರಿಗಸ್‌, ಫಾ| ಅನಿಲ್‌ ಡಿಸೋಜ, ಡೊಮಿನಿಕನ್‌ ಮೇಳದ ಫಾ| ಸುನಿಲ್‌ ಲೋಬೋ ಕೊಲ್ಲಂಗಾನ, ಕಾಸರಗೋಡು ವಲಯದ ವಿವಿಧ ಇಗರ್ಜಿಗಳ ಧರ್ಮಗುರುಗಳು, ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು, ಧರ್ಮಭಗಿನಿಯರು, ಕ್ರೈಸ್ತ‌ರು ಮತ್ತಿತರರು ಉಪಸ್ಥಿತರಿದ್ದರು. ಲವೀನಾ ಪ್ರೀತಿ ಕ್ರಾಸ್ತ ಇಗರ್ಜಿಯ ಸಂಕ್ಷಿಪ್ತ ಚರಿತ್ರೆ ವಾಚಿಸಿದರು.

ಉದ್ಘಾಟನ ಸಮಾರಂಭದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಅಧ್ಯಕ್ಷತೆ ವಹಿಸಿ ದಿವ್ಯ ಸಂದೇಶ ನೀಡಿ, ಸಂತ ಲಾರೆನ್ಸರ ಮೂಲಕ ಹಲವಾರು ಪವಾಡಗಳು ಇಲ್ಲಿ ನಡೆಯಲಿದೆ. ಇಲ್ಲಿನ ಧರ್ಮಪ್ರಜೆಗಳಿಗೆ, ಕ್ರೈಸ್ತ-ಕ್ರೈಸ್ತೇತರರಿಗೆೆ ಒಳಿತಾಗಲಿ ಎಂದು ಆಶಿಸಿದರು.

ಪೆರ್ಮುದೆ ಇಗರ್ಜಿಯ ಧರ್ಮಗುರು ಫಾ| ಮೆಲ್ವಿನ್‌ ಫೆರ್ನಾಂಡಿಸ್‌ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಸಮಾರಂಭದಲ್ಲಿ “ಪೆರ್ಮುದೆಚೊ ಪರ್ಜಳ್‌’ ಸ್ಮರಣ ಸಂಚಿಕೆ ಯನ್ನು ಕಾಸರಗೋಡು ಧರ್ಮವಲಯದ ಧರ್ಮಗುರು ಫಾ| ಜೋನ್‌ ವಾಸ್‌ ಅವರಿಗೆ ನೀಡುವುದರ ಮೂಲಕ ಬಿಡುಗಡೆ ಗೊಳಿಸಿ ದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಪೀಟರ್‌ ಪಾವ್‌É ಸಲ್ಡಾನ್ಹಾ, ಡೊಮಿನಿಕನ್‌ ಪ್ರೊವಿನ್ಶಿಯಲ್‌ ವಂ| ಫಾ| ನವೀನ್‌ ಸಲ್ಡಾನ್ಹಾ, ಇಗರ್ಜಿಯ ಕಟ್ಟಡದ ಯೋಜನೆಗೆ ಚಾಲನೆ ನೀಡಿದ ಕಯ್ನಾರು ಇಗರ್ಜಿಯ ಧರ್ಮಗುರು ಫಾ| ವಿಕ್ಟರ್‌ ಡಿ’ಸೋಜ, ನೂತನ ಇಗರ್ಜಿ ಕಟ್ಟಡದ ಎಂಜಿನಿಯರ್‌ ಪಾವ್‌Éಸನ್‌ ಕೊರೆಯ ಎರ್ನಾಕುಳಂ, ಇಗರ್ಜಿಯ ವಿವಿಧ ಕಾರ್ಯ ಚಟುವಟಿಕೆಗಳಿಗೆ ನೆರವಾದ ನವೀನ್‌ ರಂಜಿತ್‌ ಡಿ’ಸೋಜ, ಧರ್ಮಗುರು ಫಾ| ಮೆಲ್ವಿನ್‌ ಫೆರ್ನಾಂಡಿಸ್‌ ಅವರನ್ನು ಸಮ್ಮಾನಿಸಲಾಯಿತು.

ಕಾಸರಗೋಡು ವಲಯದ ಧರ್ಮಗುರು ಫಾ| ಜೋನ್‌ ವಾಸ್‌, ಕಯ್ನಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ| ವಿಕ್ಟರ್‌ ಡಿ’ಸೋಜ ಮಾತನಾಡಿದರು.

ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆ ಅರುಣ ಜೆ., ಸದಸ್ಯೆ ಶಾಂತಿ ಡಿ’ಸೋಜ, ಪೈವಳಿಕೆ ಗ್ರಾ. ಪಂ. ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ ಸದಸ್ಯರಾದ ಎಂ. ಕೆ. ಅಮೀರ್‌ ಮತ್ತು ಹರೀಶ್‌ ಬೊಟ್ಟಾರಿ ಮಾತನಾಡಿದರು. ಇಗರ್ಜಿಯ ಪಾಲನಾ ಸಮಿತಿ ಕಾರ್ಯದರ್ಶಿ ಜೋನ್‌ ಡಿ’ಸೋಜ ಓಡಂಗಲ್ಲು ವರದಿ ಮಂಡಿಸಿದರು.

ಕಯ್ನಾರು ವಿಜಯ ಜೇಸುರಾಜ ಕಾನ್ವೆಂಟಿನ ಸುಪೀರಿಯರ್‌ ಸಿ. ಮೊಂತಿನ್‌ ಗೋಮ್ಸ್‌, ಕಯ್ನಾರು ಕ್ರಿಸ್ತರಾಜ ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್‌ ಡಿ’ಸೋಜ, ಕಾರ್ಯದರ್ಶಿ ರೋಶನ್‌ ಡಿ’ಸೋಜ ಉಪಸ್ಥಿತರಿದ್ದರು. ಪೆರ್ಮುದೆ ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್‌ ಡೆನಿಸ್‌ ಡಿ ಸೋಜ ವಂದಿಸಿದರು.

ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಪೆರ್ಮುದೆ ಇಗರ್ಜಿಯ ಧರ್ಮಗುರು ಫಾ| ಮೆಲ್ವಿನ್‌ ಫೆರ್ನಾಂಡಿಸ್‌ ಅಧ್ಯಕ್ಷತೆ ವಹಿಸಿದ್ದರು.

ಕಯ್ನಾರು ಕ್ರಿಸ್ತರಾಜ ಇಗರ್ಜಿಯ ಧರ್ಮಗುರು ಫಾ| ವಿಕ್ಟರ್‌ ಡಿ’ಸೋಜ, ಪೈವಳಿಕೆ ಗ್ರಾ.ಪಂ. ಉಪಾಧ್ಯಕ್ಷೆ ಸುನಿತ ವಲ್ಟಿ ಡಿ’ಸೋಜ, ಧರ್ಮತ್ತಡ್ಕ ಹೆ„ಯರ್‌ ಸೆಕೆಂಡರಿ ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್‌, ಕುಡಾಲುಮೇರ್ಕಳ ಎಎಲ್‌ಪಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಅಬ್ದುಲ್‌ ಖಾದರ್‌ ಅತಿಥಿಗಳಾಗಿ ಭಾಗವಹಿಸಿದರು.

ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್‌ ಡೆನಿಸ್‌ ಡಿ’ಸೋಜ, ಕಾರ್ಯದರ್ಶಿ ಜೋನ್‌ ಡಿ’ಸೋಜ ಉಪಸ್ಥಿತರಿದ್ದರು. ಸ್ಥಳೀಯ ಪ್ರತಿಭೆಗಳಿಂದ ನƒತ್ಯ ವೈಭವ, ಮಂಜೇಶ್ವರ ಶಾರದಾ ಆರ್ಟ್ಸ್ ಕಲಾವಿದರಿಂದ “ಬಂಜಿಗ್‌ ಹಾಕೊಡಿc’ ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ